ನೊಂದವರ ಪಾಲಿನ ಆಶಾಕಿರಣ ಹುರ್ಲಾಡಿ ರಘುವೀರ್ ಶೆಟ್ಟಿ:ಸಾಧನೆಗಳು ಸಾವಿರಾರು ಸನ್ಮಾನಗಳು ನೂರಾರು: ರಘುವೀರ್ ಶೆಟ್ಟಿಯವರ ಸಂದರ್ಶನದ ವಿಶೇಷ ವಿಡಿಯೋ ಇಲ್ಲಿದೆ

ಹುರ್ಲಾಡಿ ರಘುವೀರ ಶೆಟ್ಟಿ ಹೆಸರು ಕೇಳದವರಿಲ್ಲ.ಊರಿನ ಜಾತ್ರೆ ನೇಮ ಉತ್ಸವ ಏನೇ ಇರಲಿ, ಹುರ್ಲಾಡಿ ಶೆಟ್ರು ಇದ್ದಾರೆ ಎಂಬ ನಂಬಿಕೆ ಜನರಿಗೆ.ಅಷ್ಟರಮಟ್ಟಿಗೆ ಜನಮಾನಸದಲ್ಲಿ ನೆಲೆಯಾಗಿದ್ದಾರೆ ಶೆಟ್ರು.ಹಿತ ಮಿತ ಮಾತು,ಜವಾಬ್ದಾರಿಯ ನುಡಿ, ಪರವೂರಿನಲ್ಲಿ ವೃತ್ತಿ ಜೀವನ ಮಾಡುತ್ತಿದ್ದರೂ ಊರಿಗಾಗಿ ಮಿಡಿಯುವ ಮನಸ್ಸು.ಇದೆಲ್ಲದರ ಪ್ರತಿಫಲವೇ ಸಾಲು ಸಾಲು ಪ್ರಶಸ್ತಿಗಳು,ಸನ್ಮಾನಗಳು.


ಹುಟ್ಟೂರು ಕಾರ್ಕಳ ತಾಲೂಕಿನ ನಲ್ಲೂರು.ಆದರೆ ಬದುಕಿನ ನೆಲೆ ಕಂಡುಕೊಂಡದ್ದು ಮಾತ್ರ  ಮುಂಬೈನಲ್ಲಿ.ಶೆಟ್ರು ಭಾಷಣದಲ್ಲಿ ಸಾಧನೆ ಮಾಡಿದವರಲ್ಲ.ಯಾಕೆಂದರೆ ಭಾಷಣ ಮಾಡಿದ್ದೂ   ಕಡಿಮೆ.  ಸೇವೆಯೊಂದೇ ಇವರ ಮಾತು.ಮಾತಿಗಿಳಿದರೆ ಊರಿನ ಬಗ್ಗೆ ಕಾಳಜಿಯೇ ಎದ್ದು ಕಾಣುತ್ತದೆಸರಕಾರೀ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ಕಾಲಘಟ್ಟದಲ್ಲಿ ನಲ್ಲೂರು ಎಂಬ ಪುಟ್ಟ ಹಳ್ಳಿಯಲ್ಲಿ ಸರಕಾರೀ ಶಾಲೆಯನ್ನು ಮೇಲ್ದರ್ಜೆಗೇರಿಸಿ ತನ್ನದೇ ಹೆಸರು ಇರಿಸಿ ಸಹಕಾರ ನೀಡುತ್ತಾ   ಬಂದಿದ್ದಾರೆ.


ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರಿಂದ ಸಮಾಜ ಸೇವಕ ಪ್ರಶಸಿ ಮತ್ತು ಬಂಗಾರದ ಪದಕ ಆಹಾರ ಸಂಸ್ಥೆಯಿಂದ ಬೆಸ್ಟ್ ಹೋಟೆಲಿಯರ್,ರಾಜ್ಯ ಸರ್ಕಾರದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಬೆಳದಿಂಗಳ ಸಾಹಿತ್ಯದಲ್ಲಿ ಸಮಾಜ ರತ್ನ ಪ್ರಶಸ್ತಿ,ಸೆಂಟ್ರಲ್ ಜೆಸಿ ಕಾರ್ಕಳ ವತಿಯಿಂದ ಸೇವಾಂಜಲಿ ಪ್ರಶಸ್ತಿ, ಆರ್ಯಭಟ ಪುರಸ್ಕಾರ,ಶ್ರೀ ರಾಘವೇಂದ್ರ ಪುರಸ್ಕಾರ,ಪ್ರತಿಷ್ಠಿತ ಆಹಾರ್ ಸಂಸ್ಥೆಯಿಂದ ಸನ್ಮಾನ ಇನ್ನಿತರ ಹಲವಾರು ಪ್ರಶಸ್ತಿಗಳು ಸನ್ಮಾನಗಳು ರಘುವೀರ್ ಶೆಟ್ರ ಸೇವೆ ಮತ್ತು ಸಾಧನೆಗೆ ಸಿಕ್ಕ ಗರಿ.ಸಾಧನೆಗಳು ಸಾವಿರಾರು:
ಹಲವಾರು ಧಾರ್ಮಿಕ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಕೊಡುಗೆಯನ್ನು ನೀಡುತ್ತಾ ಬಂದಿರುವ ರಘುವೀರ್ ಶೆಟ್ಟಿಯವರು ನಲ್ಲೂರಿನಲ್ಲಿ ಭಜನಾ ಮಂಡಳಿಯನ್ನು ಸ್ಥಾಪಿಸಿದ್ದುದ್ದಲ್ಲದೆ ಇದೀಗ ಇಲ್ಲಿ 24 ನೆಯ ಗಣೇಶೋತ್ಸವಕ್ಕೆ ಅಣಿಯಾಗುತ್ತಿದೆಭಜನಾ ಮಂಡಳಿಗೆ ಜಾಗದ ವ್ಯವಸ್ಥೆ,ಸಭಾಂಗಣ,ಸಭಾ ಮಂಟಪ,ಮುಖ್ಯದ್ವಾರ,ಅನ್ನದಾನ, ಸತ್ಯ ಅದೇಕಿ ದೇವಸ್ಥಾನಕ್ಕೆ ಕೊಡಮಣಿತ್ತಾಯ ಮಹಾದ್ವಾರ,ಕೊಡಮಣಿತ್ತಾಯ ಕೊಡಿಮರಕ್ಕೆ ತಾಮ್ರದ ಕವಚ,ಕೊಡಮಣಿತ್ತಾಯ ದೇವಸ್ಥಾನದ ನಿರ್ಮಾಣ ವೆಚ್ಚ,ನಲ್ಲೂರು ಪರಪ್ಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಭಾಂಗಣ, ಜಾತ್ರಾ ಸಮಯದಲ್ಲಿ ಹಾಗೂ ಬ್ರಹ್ಮಕಲಶೋತ್ಸವದ ಸಂಧರ್ಭದಲ್ಲಿ ನಿರಂತರ ಅನ್ನದಾನ,ಅಲ್ಲದೆ ನಲ್ಲೂರಿನ ಮಹಾಲಕ್ಷಿ ದೇವಸ್ಥಾನ,ಅತಿಶಯ ಕ್ಷೇತ್ರ ಶ್ರೀ ಕುಷ್ಮ೦ಡಿನಿ ಬಸದಿಯ ಅಭಿವೃದ್ಧಿ, ಮುಡ್ರಾಲು ಶ್ರೀ ದುರ್ಗಾಪರಮೇಶ್ಶ್ವರಿ ದೇವಸ್ಥಾನಗಳಿಗು ಸಹಕಾರ ನೀಡಿದ್ದಾರೆ

ಬಂಟರ ಸಂಘ ಬಜಗೋಳಿ ವಲಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪರಪ್ಪಾಡಿ ನಲ್ಲೂರಿನ ಆಡಳಿತ ಮುಕ್ತೇಸರಾಗಿ,ಮಹಾ ಗಣಪತಿ ಭಜನಾ ಮಂಡಳಿ ನಲ್ಲೂರು,ಶ್ರೀ ಸತ್ಯ ಅದೇಕಿ ದೇವಸ್ಥಾನ ನಲ್ಲೂರು,17 ನೆಯ ಮದ್ಯವರ್ಜನ ಸಮಿತಿ ಸತ್ಯನಾರಾಯಣ ಪೂಜಾ ಸಮಿತಿ ಮುಡಾರು, ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಕಳ ಸಮಿತಿ,ವಿಶ್ವ ತುಳು ಸಮ್ಮೇಳನ ಸಮಿತಿ ಬಜಗೋಳಿ ವಲಯ,ಮಿಯ್ಯಾರು ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಮಿತಿಗಳಲ್ಲಿ ಗೌರವಾಧ್ಯಕ್ಷರಾಗಿ ತಾಲೂಕು ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 

                                                                                                                                                                                                                                                                       -ಪ್ರಶಾಂತ್ ಮುಡಾರು 


ಹುರ್ಲಾಡಿ    ರಘುವೀರ್  ಶೆಟ್ಟಿ  ಯವರ  ಸಂದರ್ಶನದ  ಅಪರೂಪದ   ವಿಡಿಯೋ  ಇಲ್ಲಿದೆ:

https://youtu.be/lJXQcUPboHc


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget