ಮಾಳ:ದೇಶದೆಲ್ಲೆಡೆ ಲಾಕ್ಡೌನ್ ಹೇರಲಾಗಿದ್ದು ಬಡ ಮಧ್ಯಮ ವರ್ಗದ ಜನತೆಯನ್ನು ಸಂಕಷ್ಟಕ್ಕೀಡು ಮಾಡಿದೆ. ಈ ಮಧ್ಯ ಒಂದಷ್ಟು ಸಹೃದಯಿ ದಾನಿಗಳು ನೊಂದವರ ಆಸರೆಯಾಗುತ್ತಿದ್ದಾರೆ.
ಕಾರ್ಕಳ ತಾಲೂಕಿನ ಮಾಳ ವ್ಯಾಪ್ತಿಯಲ್ಲಿ ಸುಮಾರು 250 ಕ್ಕೂ ಹೆಚ್ಚು ಮನೆಗಳಿಗೆ ದಾನಿಗಳ ನೆರವಿನಿಂದ ಕಿಟ್ ವಿತರಿಸಲಾಯಿ. ಮಾಳ ಪೇರಡ್ಕ, ಕೂಡುಬೆಟ್ಟು ಹಾಗೂ ಮುಳ್ಳೂರಿನ ಪರಿಸರದಲ್ಲಿ ಕಿಟ್ಗಳನ್ನು ವಿತರಿಸಲಾಗಿದೆ.
- ಗ್ರಾಮಪಂಚಾಯತ್ ಸದಸ್ಯರಾದ ಅನಿಲ್ ಎಸ್ ಪೂಜಾರಿಯವರ ನೇತೃತ್ವದಲ್ಲಿ,ಸ್ವರ್ಣ ಮೊಬೈಲ್ಸ್ ಮಾಲಕ ಶಿವರಾಜ್ ಪೂಜಾರಿ, ಶಿಕ್ಷಕ ಸುರೇಶ್ ಮಾಳ, ಶುಭ ಗ್ರಾಫಿಕ್ಸ್ ನ ಸಂತೋಶ್ ಪೂಜಾರಿ,ಕೂಡಬೆಟ್ಟು ಮುಖ್ಯ ಶಿಕ್ಷಕ ಕೃಷ್ಣ ಮೋಯಿಲಿ,ಸತೀಶ್ ಪೂಜಾರಿ ಪೊಲ್ಲಡ್ಕ, ಜಗದೀಶ್ ಕೋಟ್ಯಾನ್ ಕೂಡುಬೆಟ್ಟು ಮತ್ತಿತರ ದಾನಿಗಳು ಸೇರಿ ಕಿಟ್ ಗಳನ್ನು ಹಂಚಿದ್ದಾರೆ.
15 ಕ್ವಿಂಟಾಲ್ ಸಕ್ಕರೆ,50ಕೆಜಿ ಚಾಹುಡಿ,2ಕ್ವಿಂಟಾಲ್ ಸಕ್ಕರೆ ಸೇರಿ ಸುಮಾರು 250 ಮನೆಗಳಿಗೆ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ಹೆಗ್ಡೆಯವ ಸಮ್ಮುಖದಲ್ಲಿ ಕಿಟ್ ಹಂಚಿದ್ದು ಮುಂದೆಯೂ ಅವಶ್ಯಕತೆ ಇರುವವರಿಗೆ ಹಂಚಲಾಗುವುದು ಎಂದು ತಿಳಿಸಿದ್ದಾರೆ.
ಕಿಟ್ ಗಳನ್ನು ಹಂಚುವ ಕಾರ್ಯದಲ್ಲಿ ಇವರೊಂದಿಗೆ ಕೈ ಜೋಡಿಸುವ ದಾನಿಗಳು ಇದ್ದರೆ ಹಾಗೂ ಕಿಟ್ ಅಗತ್ಯವಿರುವವರು ದಯವಿಟ್ಟು ಇವರನ್ನು ಸಂಪರ್ಕಿಸಿ
ಸಂಪರ್ಕ:
ಅನಿಲ್ ಎಸ್ ಪೂಜಾರಿ
ಗ್ರಾಮ ಪಂಚಾಯತ್ ಸದಸ್ಯರು ಮಾಳ
ಮೊ.:9110277379
9449639812
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment