ಮೂಲ್ಕಿ:ಉದ್ಯಮಿಗೆ ಕೊಲೆ ಬೆದರಿಕೆ-Times of karkala
ಮೂಲ್ಕಿ:ಮುಲ್ಕಿಯ ಕಾರ್ನಾಡು ದರ್ಗಾ ರಸ್ತೆಯ ಬಳಿಯ ನಿವಾಸಿ ಉದ್ಯಮಿ ಮುನೀರ್ ಎಂಬುವವರಿಗೆ ವಿದೇಶದಿಂದ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲ್ಕಿ:ಮುಲ್ಕಿಯ ಕಾರ್ನಾಡು ದರ್ಗಾ ರಸ್ತೆಯ ಬಳಿಯ ನಿವಾಸಿ ಉದ್ಯಮಿ ಮುನೀರ್ ಎಂಬುವವರಿಗೆ ವಿದೇಶದಿಂದ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಬೆದರಿಕೆ ಹಾಕಿದ ಆರೋಪಿಗಳನ್ನು ತೌಫೀಕ್ ಕಾರ್ನಾಡು,ಆಸೀಮ್ ನಿಸಾರ್,ಸಿದ್ದಿಕ್ ಉಚ್ಚಿಲ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರಾದ ತೌಫೀಕ್ ಎಂಬುವವರು ಇಂಟರ್ನೆಟ್ ನಂಬರ್ 97477279622 ಮೂಲಕ ಕಾರ್ನಾಡು ಉದ್ಯಮಿ ಮುನೀರ್ ರವರಿಗೆ ಕರೆ ಮಾಡಿ 'ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ' ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಉದ್ಯಮಿಯ ಪುತ್ರ ಹಿಝಾಝ್ ಅವರಿಗೆ ಕರೆ ಮಾಡಿಸಿ ಅಬ್ದುಲ್ ಲತೀಫ್ ಹಾಗೂ ಸಮೀರ್ ಕಾಪುರವರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಮುನೀರ್ ಕಾರ್ನಾಡು ಮೂಲ್ಕಿ ಪೋಲೀಸರಿಗೆ ದೂರು ನೀಡಿದ್ದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಜಾಹೀರಾತು.
ಜಾಹೀರಾತು
Post a comment