64 ತಬ್ಲಿಘಿ ಗಳು ನಾಪತ್ತೆ ಪ್ರಕರಣ ಸಹಿಸತಕ್ಕದ್ದಲ್ಲ ಸರಕಾರ ಅಂಥವರ ಹೆಸರು ಹಾಗೂ ವಿಳಾಸಗಳನ್ನು ಕೂಡಲೇ ಬಹಿರಂಗಪಡಿಸಿ ಸಂಘಟನೆಯನ್ನು ನಿಷೇಧಗೊಳಿಸುವ ಬಗ್ಗೆ ಚಿಂತನೆ ನಡೆಸಲಿ -ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮದ್
ಇಡೀ ವಿಶ್ವವೇ ಕೊರೋನಾ ವೈರಸ್ ಹಾವಳಿಯಿಂದ ಬಳಲುತ್ತಿರುವಾಗ ನಮ್ಮ ಭಾರತದಲ್ಲಿ ಕೊರೋನಾ ಹರಡಲು ಒಂದು ಸಮುದಾಯವೇ ಕಾರಣ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿರುವ ತಬ್ಲಿಘಿ ಸಮಾವೇಶದಲ್ಲಿ ಭಾಗವಹಿಸಿದವರು ಕೊರೋನಾ ಪೀಡಿತರಾಗಿದ್ದು ಅವರು ಇಡೀ ದೇಶದಾದ್ಯಂತ ಕೊರೋನಾ ವೈರಸ್ ಹರಡುತ್ತಿದ್ದಾರೆ ಎಂಬ ಆಧಾರ ರಹಿತ ಗಂಭೀರ ಆರೋಪವನ್ನು ಮಾಧ್ಯಮದವರು ಸೇರಿದಂತೆ ಹಲವರು ಮಾಡುತ್ತಿದ್ದಾರೆ.ಆದರೆ ಗಮನಿಸಬೇಕಾದ ಅಂಶವೇನೆಂದರೆ ಎಲ್ಲೂ ಸಹ ಸರಕಾರದ ಹಾಗೂ ಮಾಧ್ಯಮಗಳ ಹೇಳಿಕೆ ಹಾಗೂ ಲೆಕ್ಕಚಾರ ತಾಳೆ ಹೊಂದುತ್ತಿಲ್ಲ. ಎಂಬುದು ಸಮಸ್ತ ಭಾರತೀಯರ ಗಮನಕ್ಕೆ ಈಗಾಗಲೇ ಬಂದಿರುವಂತಹ ವಿಷಯ.
ಇತ್ತೀಚಿನ ಎರಡು ಮೂರು ದಿನಗಳಿಂದ 64 ತಬ್ಲಿಘಿಗಳು ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದು ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ವಿಷಯ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಇದರ ಬಗ್ಗೆ ಸರಕಾರವೂ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ ಹಾಗೂ ಸಂಬಂಧ ಪಟ್ಟ ಸಂಘಟನೆಯೂ ಇದನ್ನು ಪ್ರಶ್ನಿಸುತ್ತಿಲ್ಲ.ಸರಕಾರ ಹಾಗೂ ತಬ್ಲಿಘಿ ಸಂಘಟನೆಗಳ ಈ ನಡೆ ಸಮಸ್ತ ಭಾರತೀಯರು ಸಂಶಯ ವ್ಯಕ್ತಪಡಿಸು ವಂತಾಗಿದೆ.
ನಿಜವಾಗಿಯೂ ತಬ್ಲಿಘಿ ಗಳ ನಾಪತ್ತೆ ಪ್ರಕರಣ ಹೌದಾಗಿದ್ದಲ್ಲಿ ಸರಕಾರ ಅಂಥವರ ಹೆಸರು ಹಾಗೂ ವಿಳಾಸ ಗಳುಳ್ಳ ಪಟ್ಟಿ ಕೂಡಲೇ ಬಿಡುಗಡೆ ಮಾಡುವುದರೊಂದಿಗೆ ಸಮಾವೇಶದಲ್ಲಿ ಹಾಜರಿದ್ದ ಜನರ ಒಟ್ಟು ಸಂಖ್ಯೆ ಹಾಗೂ ಅವರಲ್ಲಿ ಎಷ್ಟು ಶಂಕಿತರು ಮತ್ತು ಎಷ್ಟು ಸೋಂಕಿತರು ಎಂಬ ಬಗ್ಗೆ ಅಧಿಕೃತವಾದ ಮಾಹಿತಿ ಬಹಿರಂಗ ಪಡಿಸಬೇಕಾಗಿದೆ.ಸರ್ಕಾರ ನಾಪತ್ತೆಯಾಗಿರುವ ತಬ್ಲಿಘಿ ಗಳ ಪಟ್ಟಿ ಬಿಡುಗಡೆ ಮಾಡಿದಲ್ಲಿ ಅದರ ಸತ್ಯಾಸತ್ಯತೆ ಅರಿತು ಅಂಥವರನ್ನು ಪತ್ತೆಹಚ್ಚಿ ಸಂಬಂಧಪಟ್ಟವರಿಗೆ ಒಪ್ಪಿಸುವ ಹೊಣೆಗಾರಿಕೆಯನ್ನು ಸಂಘಟನೆ ಹೊರಬೇಕಾಗುತ್ತದೆ.
ಅಲ್ಲದೆ ಕೊರೋನಾ ವೈರಸ್ ವಿಷಯವನ್ನು ಬಳಸಿಕೊಂಡು ಒಂದು ಸಮುದಾಯದ ಮೇಲೆ ಆರೋಪ ಹೊರಿಸಿ ಸಮಾಜದಲ್ಲಿ ಅಶಾಂತಿ ಹರಡಲು ಬಯಸುವ ಅವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಒತ್ತಾಯಿಸಿರುತ್ತಾರೆ.

Post a comment