ಮೊಸಳೆಯ ವಿರುದ್ದ ಹೋರಾಡಿ ಮಗುವನ್ನು ರಕ್ಷಿಸಿಕೊಂಡ ತಾಯಿ-Times of karkala

ಜಿಂಬಾಬ್ವೆ;ದೈತ್ಯ ಮೊಸಳೆ ವಿರುದ್ಧ ಹೋರಾಡಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಗಂಡು ಮಗುವನ್ನು ಕಾಪಾಡಿ ದಿಟ್ಟತನ ಮೆರದಿರುವ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ.

ತಾಯಿ ಎಂದರೆ ಹಾಗೇ ತನ್ನ ಮಕ್ಕಳಿಗಾಗಿ ಯಾವ ರೀತಿಯ ಅಪತ್ತು ಬಂದರೂ ಅದನ್ನು ಎದುರಿಸಿ ನಿಲ್ಲುತ್ತಾಳೆ. ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲು ತಾಯಿ ತನ್ನ ಮಕ್ಕಳನ್ನು ಬಿಟ್ಟಕೊಡುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮೊಸಳೆ ಬಾಯಿಗೆ ಸಿಕ್ಕಿದ್ದ ತನ್ನ ಮಗುವೊಂದನ್ನು ಮೊಸಳೆಯ ಬೆನ್ನ ಮೇಲೆ ಕುಳಿತು ಅದರ ಮೂಗಿನ ಒಳಗೆ ಬೆರಳುಗಳನ್ನು ಹಾಕಿ ತಾಯಿಯೊಬ್ಬರು ಕಾಪಾಡಿದ್ದಾರೆ.
ಜಿಂಬಾಬ್ವೆಯ ಚಿರೆಡ್ಜಿ ಪಟ್ಟಣದ 30 ವರ್ಷದ ಮಹಿಳೆ ಮೌರಿನಾ ಮುಸಿಸಿನಿಯಾ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ರುಂಡೆ ನದಿಗೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಮಕ್ಕಳನ್ನು ನದಿಯ ದಡದಲ್ಲಿ ಆಟವಾಡಲು ಬಿಟ್ಟ ಮೌರಿನಾ ನದಿಯಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ನದಿಯಲ್ಲಿ ಇದ್ದ ಮೊಸಳೆ ದಡದಲ್ಲಿ ಇದ್ದ ಮಕ್ಕಳ ಮೇಲೆ ದಾಳಿ ಮಾಡಿದೆ. ಮಕ್ಕಳು ಕಿರುಚಿದಾಗ ಈ ವಿಷಯ ತಾಯಿಗೆ ಗೊತ್ತಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಮೌರಿನಾ, ಮಕ್ಕಳು ಇದ್ದಕ್ಕಿಂತೆ ಕಿರುಚಿದಾಗ ನಾನು ಗಾಬರಿಗೊಂಡು ಅಲ್ಲಿಗೆ ಬಂದೆ. ಆಗಲೇ ಮೊಸಳೆ ತನ್ನ ಮೂರು ವರ್ಷದ ಮಗು ಗಿಡಿಯನ್ ಮೇಲೆ ದಾಳಿ ಮಾಡಿತ್ತು. ತಕ್ಷಣ ನಾನು ಅದರ ಬೆನ್ನ ಮೇಲೆ ಹತ್ತಿ ಕುಳಿತು ನನ್ನ ಕೈ ಬೆರಳುಗಳನ್ನು ಅದರ ಮೂಗಿಗೆ ಹಾಕಿದೆ. ನಂತರ ಇನ್ನೊಂದು ಕೈಯಲ್ಲಿ ನನ್ನ ಮಗುವನ್ನು ಬಿಡಿಸಿದೆ. ನಂತರ ಅಲ್ಲಿಂದ ಮಕ್ಕಳನ್ನು ಕರೆದುಕೊಂಡು ಬಂದೆ ಎಂದು ಹೇಳಿದ್ದಾರೆ.
ನನಗೆ ನಾನು ಚಿಕ್ಕವಳಿದ್ದಾಗಲೇ ನಮ್ಮ ಹಿರಿಯರು ಮೊಸಳೆ ದಾಳಿ ಮಾಡಿದಾಗ ಏನು ಮಾಡಬೇಕು ಎಂದು ಹೇಳಿಕೊಟ್ಟಿದ್ದರು. ಅದರಂತೆ ನಾನು ಮಾಡಿದೆ. ಮೊಸಳೆ ಮೂಗಿನಲ್ಲಿ ಜೋರಾಗಿ ಉಸಿರಾಡುತ್ತೆ. ಅದು ದಾಳಿ ಮಾಡಿದಾಗ ಅದ ಮುಖದ ಮೇಲೆ ಕುಳಿತುಕೊಂಡು ತಕ್ಷಣ ಮೂಗಿಗೆ ಬೇರಳನ್ನು ಹಾಕಬೇಕು. ಬೆರಳನ್ನು ಹಾಕಿ ಮೂಗನ್ನು ಬ್ಲಾಕ್ ಮಾಡಿದರೆ ಅದು ಸುಸ್ತುಗುತ್ತದೆ. ಜೊತೆಗೆ ಬಾಲದಲ್ಲಿ ಹೊಡೆಯುವುದಿಲ್ಲ. ಈ ರೀತಿ ಮಾಡಿಯೇ ನಾನು ನನ್ನ ಮಗುವನ್ನು ಉಳಿಸಿಕೊಂಡೇ ಎಂದು ಮೌರಿನಾ ಹೇಳಿದ್ದಾರೆ.ಈ ಘಟನೆಯಲ್ಲಿ ಮಗುವಿಗೆ ಗಾಯವಾಗಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
Add caption
xLabels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget