ಲಾಕ್ ಡೌನ್‌ ಪ್ರಾರಂಭವಾದ ದಿನದಿಂದಲೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಅಮೃತ್‌ ಶೆಣೈ ಹಾಗೂ ತಂಡ:600ಕ್ಕೂ ಹೆಚ್ಚು ಮನೆಗಳಿಗೆ ಔಷಧಿ,200ಕ್ಕೂಹೆಚ್ಚು ಕಿಟ್‌ ವಿತರಣೆ

▶▶ಲಾಕ್ ಡೌನ್‌ ಪ್ರಾರಂಭವಾದ ದಿನದಿಂದಲೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಅಮೃತ್‌ ಶೆಣೈ ಹಾಗೂ ತಂಡ
▶▶600ಕ್ಕೂ ಹೆಚ್ಚು ಮನೆಗಳಿಗೆ ಔಷಧಿ,200ಕ್ಕೂಹೆಚ್ಚು ಕಿಟ್‌ ವಿತರಣೆ
▶▶"ನಮ್ಮ ಸುತ್ತಮುತ್ತಲಿನ ಜನರ ಕಷ್ಟಗಳಿಗೆ ಹೆಗಲು ಕೊಡೋಣ"-ಅಮೃತ್‌ ಶೆಣೈಕೋರೋನಾ ದಿಂದಾಗಿ ಇಡೀ ಜಗತ್ತೇ  ಕಂಗಾಲಾಗಿದೆ. ಭಾರತ ಕೂಡಾ ಅಕ್ಷರಶಃ ಸ್ಥಬ್ದವಾಗಿದೆ. ಬಹುತೇಕ ಎಲ್ಲಾ ಬಂದ್‌ ಆಗಿದ್ದು ಜನಜೀವನ ಅಸ್ಥವ್ಯಸ್ಥವಾಗಿದೆ.ದಿನಗೂಲಿ ಕಾರ್ಮಿಕರು ವಲಸೆ ಕಾರ್ಮಿಕರು ಒಂದು ಹೊತ್ತಿನ ಊಟಕ್ಕಾಗಿ ಒಪ್ಪೊತ್ತಿನ ದಿನಸಿಗಾಗಿ ಪರದಾಡುತ್ತಿರುವುದು ನಾವು ದಿನನಿತ್ಯ ನೋಡುವ ಸರ್ವೇಸಾಮಾನ್ಯ ಸಂಗತಿ.


ಇದನ್ನರಿತ ಕೆಲ ಸಂಘಟನೆಗಳು ಸಮಾಜಸೇವಕರು ರಾಜಕೀಯ ಮುಖಂಡರು ಯಾವುದೇ ಪ್ರಚಾರ ಬಯಸದೇ ಬಡ ಕುಟುಂಬಗಳಿಗೆ ಬೇಕಾಗುವಂತಹ ದಿನಸಿ ವಸ್ತುಗಳನ್ನು ಒಳಗೊಂಡತಃ ಕಿಟ್‌ ಗಳನ್ನು ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಅಗತ್ಯವಿರುವವರೆಗೆ ನೀಡುತ್ತಿದ್ದಾರೆ. ಲಾಕ್‌ ಡೌನ್‌ ಪ್ರಾರಂಭವಾದ ದಿನದಿಂದಲೂ ಉಡುಪಿಯ ಅಮೃತ್‌ ಶೆಣೈ ತಂಡವನ್ನು ಕಟ್ಟಿಕೊಂಡು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಗತ್ಯವಾಗಿ ಬೇಕಾಗುವ ಮನೆಗಳಿಗೆ ಔಷದ,ಅಕ್ಕಿ,ದಿನಸಿ ಕಿಟ್‌ ಗಳನ್ನು ಸಕಾಲದಲ್ಲಿ ಪೂರೈಸುತ್ತಿದ್ದಾರೆ.


ಸುಮಾರು 600ಕ್ಕೂ ಹೆಚ್ಚು ಮನೆಗಳಿಗೆ ಔಷಧಿ ವಸ್ತುಗಳನ್ನು ಪೂರೈಸಿದ್ದು,ಹಸಿದವರಿಗೆ ಊಟದ ಊಟದ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ. 200ಕ್ಕಿಂತಲೂ ಹೆಚ್ಚಿನ  ಮನೆಗಳಿಗೆ ಬೇಕಾದ ಅಗತ್ಯ ವಸ್ತುಗಳ ಕಿಟ್‌ ತಯಾರಿಸಿ ಹಂಚುತ್ತಿದ್ದಾರೆ.25ಕೆಜಿ  ಅಕ್ಕಿಯ 25ಬ್ಯಾಗ್‌ ಗಳನ್ನು ಅಲ್ಲದೇ 1,000ರೂ ಬೆಲೆಯ ಸುಮಾರು 150ಕಿಟ್‌ ಗಳನ್ನು ಹಂಚಿದ್ದಾರೆ. ಸ್ಥಳೀಯ ಸಂಘಟನೆಗಳು ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು,ಸರಕಾರಿ ಅಧಿಕಾರಿಗಳು ಯಾವುದೇ ಜಾತಿ ಧರ್ಮ ಪಕ್ಷ ಬೇದವಿಲ್ಲದೇ ಸ್ಪಂದಿಸುತ್ತಿದ್ದಾರೆ.


ಎರಡನೇ ಹಂತದ ಲಾಕ್‌ ಡೌನ್‌ ಪ್ರಾರಂಭವಾಗಿದ್ದು ಈ ಭಾರಿ 5ಕೆಜಿ ಅಕ್ಕಿಯ ಹಾಗೂ ಅದರ ಜೊತೆಗೆ ಉಪ್ಪಿನಕಾಯಿಯನ್ನು ಹಂಚಲು ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಇವರೊಂದಿಗೆ ಪ್ರಸಾದ್‌ ಕರ್ಕಡ, ವಿನಿತ ಕಿರಣ್‌, ಯಜ್ಞೇಶ್‌ ಆಚಾರ್ಯ ಸೇರಿದಂತೆ ಸ್ವಯಂಸೇವಕರ ತಂಡವೇ ಕೆಲಸಮಾಡುತ್ತಿದೆ.


"ಇದು ಕೇವಲ ಒಬ್ಬನ ಪ್ರಯತ್ನವಲ್ಲ.ಇದು ನಮ್ಮ ತಂಡದ ಕೆಲಸ.ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿದುದರಿಂದ ಜನರ ಬಳಿ ತಲುಪಲು ಸುಲಭವಾಯಿತು.ನಮ್ಮೊಂದಿಗೆ ಸಕಾಲದಲ್ಲಿ ಸ್ಪಂದಿಸುತ್ತಿರುವ ಎಲ್ಲಾ ಸರಕಾರಿ ಅಧಿಕಾರಿಗಳಿಗೂ ಸಂಘ ಸಂಸ್ಥೆಗಳಿಗೂ ನಾವು ಚಿರಋಣಿಯಾಗಿದ್ದೇವೆ.ಪ್ರತಿಯೊಬ್ಬರೂ ಕೂಡಾ ಸೇವಾ ಮನೋಭಾವನೆಯಿಂದ ನಿಮ್ಮ ಸುತ್ತಮುತ್ತಲು ಇರುವಂತಹ ಜನರ ಕಷ್ಟಕ್ಕೆ ಹೆಗಲು ಕೊಟ್ಟು ಪರಸ್ಪರ ಸಹಾಯ ಮಾಡೋಣ ಎನ್ನುತ್ತಾರೆ ಅಮೃತ್‌ ಶೆಣೈಯವರು.Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget