240 ಕ್ವಿಂಟಾಲ್‌ ಗಿಂತಲೂ ಹೆಚ್ಚು ಅಕ್ಕಿ ವಿತರಿಸಿದ ಕಾರ್ಕಳ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೇಬಲ್‌ ಉದಯ್‌ ಶೆಟ್ಟಿ-Times of karkala

240 ಕ್ವಿಂಟಾಲ್‌ ಗಿಂತಲೂ ಹೆಚ್ಚು ಅಕ್ಕಿ ವಿತರಿಸಿದ ಕಾರ್ಕಳ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೇಬಲ್‌ ಉದಯ್‌  ಶೆಟ್ಟಿ-Times of karkalaದೇಶದಲ್ಲಿ ಕೊರೋನ ವೈರಸ್ ನಿಂದಾಗಿ ಲಾಕ್ ಡೌನ್ ಪ್ರಾರಂಭ ಆಗಿ ಇಂದಿಗೆ ಸುಮಾರು ಒಂದು ತಿಂಗಳು ಕಳೆದು ಹೋಯಿತು,ಇಡೀ ದೇಶವೇ ಇದರ ಪರಿಣಾಮವಾಗಿ ಇಂದು ಕಂಡು ಕೇಳರಿಯದ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದೆ,ಅದೆಷ್ಟು ಜನರು ಒಂದು ಹೊತ್ತಿನ ಊಟಕ್ಕಾಗಿ ಕಣ್ಣೀರು ಹರಿಸುತ್ತಿದ್ದಾರೆ.

ಕಾರ್ಕಳ ತಾಲೂಕಿನಲ್ಲಿರುವ ಹತ್ತು ಹಲವಾರು ಸಂಘ ಸಂಸ್ಥೆಗಳು, ದಾನಿಗಳು ಹಾಗೂ ಶಾಸಕರು ಈ ನಿಟ್ಟಿನಲ್ಲಿ ಜೊತೆಗೂಡಿ ಜನರಿಗೆ ಆಹಾರದಿಂದ ಹಿಡಿದು ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.

ಇದೆಲ್ಲೆದರ ಮಧ್ಯದಲ್ಲಿ ಒಬ್ಬ ಸಾಮಾನ್ಯ ಪೋಲಿಸ್ ಕಾನ್ಸಟೇಬಲ್ ಆಗಿರುವ ಉದಯ ಶೆಟ್ಟಿ ಇವರು ಸತತ ಒಂದು ತಿಂಗಳಿಂದ ಕಾರ್ಕಳ ತಾಲೂಕಿನ ಸುಮಾರು 80% ಜನರಿಗೆ ಅಕ್ಕಿ ,ತರಕಾರಿ ಹಾಗೂ ಇನ್ನಿತರ ಅಗತ್ಯದ ಸಾಮಾನುಗಳನ್ನು ಹಸಿದ ಬಡ ಕುಟುಂಬಗಳಿಗೆ ದಾನಿಗಳ ಹಾಗೂ ತನ್ನ ಸ್ವಂತದ ದುಡಿಮೆಯ ಆದಾಯದಿಂದ ವಿತರಿಸುವ ಮೂಲಕ ಇಡೀ ಪೋಲಿಸ್ ಇಲಾಖೆಗೆ ಮಾದರಿಯಾಗಿದ್ದಾರೆ.ದಿನವೊಂದಕ್ಕೆ ಸುಮಾರು 8 ಕ್ವಿಂಟಾಲ್ ಅಕ್ಕಿಯಂತೆ ಇಷ್ಟರತನಕ 240 ಕ್ವಿಂಟಾಲ್ ಅಕ್ಕಿಯನ್ನು ಸ್ವಚ್ಛ ಬ್ರಿಗೇಡ್ ಕಾರ್ಕಳ ಇವರ ಜೊತೆಗೂಡಿ ಇಷ್ಟರತನಕ ಬಡ ಕುಟುಂಬಗಳಿಗೆ ವಿತರಿಸಿದ್ದಾರೆ.
ಕಾನ್ಸ್ಟೆಬಲ್ ರವರ ಈ ಕಾರ್ಯ ಜನಮನ್ನಣೆಗೆ ಪಾತ್ರವಾಗಿದೆ.


ಜಾಹೀರಾತು
 ಜಾಹೀರಾತು
ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget