ಕಾನೂನಿನ ನೆಪದಲ್ಲಿ ಮಾನವೀಯತೇ ಮರೆತರೇ ಕಾರ್ಕಳದ ಪೋಲೀಸರು?

ಕಾನೂನಿನ ನೆಪದಲ್ಲಿ ಮಾನವೀಯತೇ ಮರೆತರೇ ಕಾರ್ಕಳದ ಪೋಲೀಸರು?
                    (ಸಾಂದರ್ಭಿಕ ಚಿತ್ರ)
ಕಾರ್ಕಳ: ಸರಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಯನ್ನು ಮರಳಿ  ಆಂಬುಲೆನ್ಸ್‌ ನಲ್ಲಿ ಕರೆದೊಯ್ಯಲು ಬಿಡದೆ ಕೊನೆಗೆ ರಿಕ್ಷಾದಲ್ಲಿಯೇ ಕರೆದೊಯ್ದ ಘಟನೆ ನಡೆದಿದೆ.

ಶಿರ್ತಾಡಿಯ ವ್ಯಕ್ತಿಯೋರ್ವರು ಲಿವರ್‌ ಸಂಭಂದಿತ ಖಾಯಿಲೆಯಿಂದಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.ರೋಗಿಯ ಕಡೆಯವರು ತೀರಾ ಬಡವರಾಗಿದ್ದರಿಂದ ರೋಗಿಯನ್ನು ಕರೆತರಲು  ಶಿರ್ತಾಡಿಯ ಸೌಹಾರ್ದ ಫ್ರೆಂಡ್ಸ್‌ ನ ವತಿಯಿಂದ ಸೋಮವಾರ ಬೆಳಿಗ್ಗೆ  ಆಂಬುಲೆನ್ಸ್‌ ವ್ಯವಸ್ತೆ ಮಾಡಲಾಗಿತ್ತು.  ಆದರೆ ಆಂಬುಲೆನ್ಸ್‌ ಸಾಣೂರು ಚೆಕ್‌ ಪೋಸ್ಟ್‌ ಬಳಿ ಬಂದಾಗ ಪೋಲೀಸರು ತಡೆದು ನಿಲ್ಲಿಸಿದ್ದಾರೆ. ಆಂಬುಲೆನ್ಸ್ ನಲ್ಲಿದ್ದವರು ಪೋಲೀಸರನ್ನು  ಪರಿಪರಿಯಾಗಿ ವಿನಂತಿಸಿಕೊಂಡರೂ ಕೇಳಲಿಲ್ಲ.

ಕೊನೆಗೆ  ರೋಗಿಯನ್ನು ಕಾರ್ಕಳದಿಂದ ಸಾಣೂರಿಗೆ ರಿಕ್ಷಾದಿಂದ, ಕರೆತಂದು ನಂತರ ಸಾಣೂರಿನಿಂದ ಶಿರ್ತಾಡಿಗೆ ಆಂಬುಲೆನ್ಸ್‌ ನಲ್ಲಿ ಕರೆದೊಯ್ಯಲಾಯಿತು.ಕಾನೂನಿನ ನೆಪದಲ್ಲಿ ಪೋಲೀಸರು ಮಾನವೀಯತೆ ಮರೆತವರಂತೆ ವರ್ತಿಸಿದ್ದಾರೆ ಎಂದು ಸೌಹಾರ್ದ ಫ್ರೆಂಡ್ಸ್‌ ನ ಪ್ರಮುಖ ಪ್ರವೀಣ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

                                                       ಜಾಹೀರಾತು
                                                    ಜಾಹೀರಾತು

                                                   ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget