►►ಮುಂಬೈ:ಸಾಧುಗಳ ಕೊಲೆಗೆ ಬಿಗ್‌ ಟ್ವಿಸ್ಟ್ ►►ಮಕ್ಕಳ ಕಳ್ಳರೆಂದು ಸಾಮೂಹಿಕ ತಳಿತ ►►9 ಬಾಲಾಪರಾಧಿ ಸಮೇತ 101 ಮಂದಿ ಬಂಧನ -Times of karkala

►►ಮುಂಬೈ:ಸಾಧುಗಳ ಕೊಲೆಗೆ ಬಿಗ್‌ ಟ್ವಿಸ್ಟ್►►ಮಕ್ಕಳ ಕಳ್ಳರೆಂದು ಸಾಮೂಹಿಕ  ತಳಿತ ►►9 ಬಾಲಾಪರಾಧಿ ಸಮೇತ 101 ಮಂದಿ ಬಂಧನ 

ಮುಂಬಾಯಿ:ದೇಶದಾದ್ಯಂತ ಸಂಚಲನವನ್ನುಂಟು ಮಾಡಿದ್ದ ಮುಂಬೈನಲ್ಲಿ ನಡೆದ ಇಬ್ಬರು  ಸಾಧುಗಳ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ೯ ಬಾಲಾಪರಾಧಿಗಳು ಸೇರಿ ೧೦೧ ಜನರನ್ನು ಬಂಧಿಸಲಾಗಿದೆ. ಅಲ್ಲದೇ ಇಬ್ಬರು ಪೋಲೀಸರನ್ನು ಕರ್ತವ್ಯಲೋಪದಡಿ ಅಮಾನತು ಮಾಡಲಾಗಿದೆ.


ಏಪ್ರಿಲ್‌ 16 ರಂದು ಮಹಾರಾಷ್ಟ್ರದ ಕಂಡೀವಾಲಿ ಪ್ರದೇಶದಿಂದ  ಗುಜರಾತ್‌ ನ ಸೂರತ್‌ ಗೆ ಅಂತ್ಯಸಂಸ್ಕಾರಕ್ಕೆಂದು ತೆರಳಿದ್ದ ಇಬ್ಬರು ಸಾಧುಗಳನ್ನು ಹಾಗೂ ಅವರ ಚಾಲಕನನ್ನು  ಮಹಾರಾಷ್ಟ್ರದ ವಾಲ್ಘರ್‌  ಜಿಲ್ಲೆಯ ಮಾರ್ಗ ಮಧ್ಯದಲ್ಲಿ ವಾಹನ ಅಡ್ಡಗಟ್ಟಿ ನಿಲ್ಲಿಸಿ ಮಕ್ಕಳ ಕಳ್ಳರೆಂದು ತಿಳಿದು ಸಾಮೂಹಿಕವಾಗಿ ತಳಿಸಲಾಗಿತ್ತು. 

ಮಾರಣಾಂತಿಕ ತಳಿತದಿಂದಾಗಿ ಮೂವರೂ  ಮೃತಪಟಿದ್ದು ಈ ಹಿನ್ನಲೆಯಲ್ಲಿ ಇಬ್ಬರು ಪೋಲಿಸರನ್ನು ಕರ್ತವ್ಯಲೋಪದಡಿ ಅಮಾನತು ಮಾಡಲಾಗಿದೆ.ಅಲ್ಲದೇ ಲಾಕ್ ಡೌನ್‌ ಇದ್ದರೂ ಈ ಮೂವರೂ ಹೊರಗೆ ಬರಲು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.

ಕೋಮು ಬಣ್ಣಕ್ಕೆ ತಿರುಗಿದ್ದ ಹತ್ಯೆ:
ಸಾಧುಗಳ ಹತ್ಯೆ ಕೋಮು ಬಣ್ಣಕ್ಕೆ ತಿರುಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಧುಗಳ ಹತ್ಯೆಗೆ ಸಂತಾಪ ವ್ಯಕ್ತವಾಗಿದೆ. ಆದರೆ ಇದೀಗ ಆರೋಪಿಗಳ ಬಂಧನವಾಗಿದ್ದು,ಮಹಾರಾಷ್ಟ್ರದ ಮುಖ್ಯಮಂತ್ರಿ ಉಧ್ಭವ್‌ ಠಾಕ್ರೆ ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ.ಅಲ್ಲದೇ ಸಾಧುಗಳ ಹತ್ಯೆಯ ವಿಚಾವಾಗಿ ಯಾರೂ ರಾಜಕೀಯ ಮಾಡಬಾರದು ಮತ್ತು ಮತೀಯ ಬಣ್ಣ ಬಳಿಯಬಾರದೆಂದು ಮನವಿ ಮಾಡಿದ್ದಾರೆ.
                                                   ಜಾಹೀರಾತು 

                                                     ಜಾಹೀರಾತು 

                                                      ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget