ಕಾರ್ಕಳ:ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಎರಡು ಲಕ್ಷ ಇಪ್ಪತೈದು ಸಾವಿರ ರೂ. ಬೆಲೆಯ ಆಹಾರ ಸಾಮಾಗ್ರಿಗಳನ್ನು 150 ಕ್ಕೂ ಹೆಚ್ಚು ಮನೆಗಳಿಗೆ ವಿತರಿಸಿದ ಪುರಸಭಾ ಸದಸ್ಯ ಶುಭದ ರಾವ್

ಕಾರ್ಕಳ:ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಎರಡು ಲಕ್ಷ ಇಪ್ಪತೈದು ಸಾವಿರ ರೂ. ಬೆಲೆಯ ಆಹಾರ ಸಾಮಾಗ್ರಿಗಳನ್ನು 150 ಕ್ಕೂ  ಹೆಚ್ಚು  ಮನೆಗಳಿಗೆ ವಿತರಿಸಿದ ಪುರಸಭಾ ಸದಸ್ಯ ಶುಭದ ರಾವ್-Times of karkala 

ದೇಶದೆಲ್ಲೆಡೆ ಕೊರೋನಾ ದಿನದಿಂದ ದಿನಕ್ಕೆ ತನ್ನ ಕದಂಬ ಬಾಹುವನ್ನು ಚಾಚುತ್ತಲೇ ಇದೆ, ಅದಕ್ಕಾಗಿ ಲಾಕ್ ಡೌನ್ ಮತ್ತಷ್ಟು ವಿಸ್ತರಿಸಲೇ ಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಆದರೆ ಈ ಮದ್ಯೆ ಬಡವರು ದಿನಗೂಲಿ ಕಾರ್ಮಿಕರು ಮಾತ್ರ ಅತ್ತ ಸಂಪಾದನೆಯೂ ಇಲ್ಲದೆ ಇತ್ತ     ಆಹಾರವೂ ಇಲ್ಲದೇ ಹೈರಾಣಾಗಿದ್ದಾರೆ. 
                                                                                                 

 ಒಂದಷ್ಟು ಜನ ಶ್ರೀಮಂತರು ಜನಪ್ರತಿನಿಧಿಗಳು ವಿವಿಧ ಸಂಘಟನೆಗಳು ಜನರಿಗೆ ದಿನಸಿ ವಸ್ತುಗಳನ್ನೊಳಗೊಂಡ ಕಿಟ್ ತಲುಪಿಸುತ್ತಿದ್ದಾರೆ.ಈ ಮದ್ಯೆ ಕಾರ್ಕಳದ ಪುರ ಸಭಾ ಸದಸ್ಯ ಶುಭದ ರಾವ್ ವಿನೂತನವಾದ ಪ್ರಯತ್ನವೊಂದನ್ನು ಮಾಡಿದ್ದಾರೆ. ಹೌದು ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಎರಡು ಲಕ್ಷ ರೂ. ಮೌಲ್ಯದ ಕಿಟ್ ಅನ್ನು 150 ಕ್ಕೂ ಹೆಚ್ಚಿನ ಮನೆಗಳಿಗೆ ವಿತರಿಸಿದ್ದಾರೆ.

 ಪ್ರತೀ ಕಿಟ್ ನಲ್ಲಿ10ರಿಂದ20kgಅಕ್ಕಿ,ಬೇಳೆ,ಈರುಳ್ಳಿ,ಮೆಣಸು,ಎಣ್ಣೆ,ಉಪ್ಪು,ಉಪ್ಪಿಟ್ಟು,ಅವಲಕ್ಕಿ,
ಚಾಹುಡಿ,ಅಲೂಗಡ್ಡೆ, ಟೊಮ್ಯಾಟೊ ದಿನಬಳಕೆಗೆ ಬೇಕಾಗುವ ಅಗತ್ಯ ವಸ್ತುಗಳಿದ್ದು ಒಂದು ಕಿಟ್  ನ ಬೆಲೆ 1500 ರಿಂದ ‌2000 ಗಳಾಗಿದೆ.
 ಅಲ್ಲದೆ ಗದಗ, ಗಂಗಾವತಿ, ಶಿವಮೊಗ್ಗ, ಹುಬ್ಬಳ್ಳಿ, ಕೊಪ್ಪಳ ಮೊದಲಾದ ಜಿಲ್ಲೆಯಿಂದ ಬಂದ ವಲಸೆ ಕಾರ್ಮಿಕ ಕುಟುಂಬಕ್ಕೂ ಕಿಟ್ ವಿತರಿಸಲಾಗಿದೆ.ರೆ0ಜಾಳ ಮತ್ತು ಸಾಣೂರು ಗ್ರಾಮದ ಎರಡು ಮನೆಗೆ ಕಿಟ್ ಜೊತೆಗೆ ಜೌಷದಿ ಅಗತ್ಯ ಜೌಷಧಿಯನ್ನು ಪೂರೈಸಲಾಗಿದೆ.


 ಇತ್ತೀಚಿಗೆ  ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾಗುತ್ತಿರುವುದೇ  ಹೆಚ್ಚು. ಮನುಷ್ಯ ಮನುಷ್ಯರನ್ನು ಬೆಸೆಯಬೇಕಾದ ಸಾಮಾಜಿಕ ಜಾಲತಾಣಗಳು ಇವತ್ತುಸಾಮರಸ್ಯವನ್ನು ಕೆದಕುತ್ತಿವೆ ಎಂದರೆ ತಪ್ಪಾಗಲಾರದು. ಆದರೆ ಅದೇ ಸಾಮಾಜಿಕ ಜಾಲತಾಣವು  ಉಪಯೋಗಿಸಿಕೊಂಡು ಬಡವರ ಪಾಲಿಗೆ ವರದಾನವಾಗಬಹು ಎಂದು ಸಾಧಿಸಿ ತೋರಿಸಿದ್ದಾರೆ ಶುಭದ್ ರಾವ್ ರವರು.


ಸಾಮಾಜಿಕ ಜಾಲತಾಣದಲ್ಲಿರುವ ಸ್ನೇಹಿತರ ಬಳಗದವರ ಬಳಿ ಸಹಾಯ ಚಾಚಿದಾಗ ಪರಿಚಿತರು ಮಾತ್ರವಲ್ಲದೆ ದೂರದೂರದ  ಜನರಿಂದಲೂ ಉತ್ತಮ ಬೆಂಬಲ ಸಿಕ್ಕಿದೆ. ಬಡವರಿಗಾಗಿ ನೊಂದವರಿಗಾಗಿ ದುಡಿಯುವವರಿಗೆ ಜನರ ಬೆಂಬಲ ಸದಾ ಇರುತ್ತದೆ ಮತ್ತು ಸಾಮಾಜಿಕ ಜಾಲತಾಣವನ್ನು ಸದುದ್ದೇಶದಿಂದ ಬಳಸಿಕೊಳ್ಳಬಹುದು ಎಂದು ಶುಭದ್ ರಾವ್ ನಿರೂಪಿಸಿದ್ದಾರೆ.


"ಎಲ್ಲರೂ ಸಾಮಾಜಿಕ ಜಾಲತಾಣವನ್ನುತಮ್ಮ ಸ್ವಂತಕ್ಕಾಗಿ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಆದರೆ ನಾನು ಇದರಿಂದಲೇ ಜನರಿಗೆ ಉಪಕಾರವಾಗುವಂತಹ ಏನಾದರೂ ಕೆಲಸ ಮಾಡೋಣ ಅಂದುಕೊಂಡೆ, ಆದರೆ ನನ್ನ ನಿರೀಕ್ಷೆಗೂ ಮೀರಿ ಉತ್ತಮ ಬೆಂಬಲ ದೊರೆತಿದೆ. ಇದು ನನಗೆ ಮತ್ತಷ್ಟು ಕೆಲಸ ಮಾಡಲು ಸ್ಪೂರ್ತಿಯಾಗಿದೆ. ಇನ್ನೂ ಸಾಧ್ಯವಾದಷ್ಟು ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಮಾಡುತ್ತೇನೆ. ಪ್ರತೀ ದಿನ ದಾನಿಗಳ ಹೆಸರು ಮತ್ತು ಭಾವಚಿತ್ರವನ್ನು ಅದೇ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದೆ. ಆದರೆ ಇದು ಯಾವುದೇ ಪ್ರಚಾರಕ್ಕಾಗಿ ಅಲ್ಲ ಇನ್ನೊಬ್ಬರಿಗೆ  ಪ್ರೇರಣೆಗಾಗಿ  ಎನ್ನುತ್ತಾರೆ ಶುಭದ್ ರಾವ್ ರವರು.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget