ಪ್ಯಾದರಾಯನಪುರದ ಘಟನೆ ಕ್ಷಮೆಗೆ ಅರ್ಹವಲ್ಲ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ: ಶಾಸಕ ಸುನೀಲ್‌ ಕುಮಾರ್-Times of karkala

ಪ್ಯಾದರಾಯನಪುರದ ಘಟನೆ ಕ್ಷಮೆಗೆ ಅರ್ಹವಲ್ಲ ನಿರ್ದಾಕ್ಷಿಣ್ಯ  ಕ್ರಮ ಜರುಗಿಸಿ: ಶಾಸಕ ಸುನೀಲ್‌ ಕುಮಾರ್


ಕಾರ್ಕಳ; ಭಾನುವಾರ ರಾತ್ರಿ ನಗರದ ಪಾದರಾಯನಪುರದಲ್ಲಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ಕಾರ್ಕಳ ಶಾಸಕ ಶ್ರೀ ವಿ ಸುನೀಲ್  ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. "ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ಅದರ ಹಿಂದೆ ಇರುವ ದುಷ್ಟ ಶಕ್ತಿಗಳ ಹುಟ್ಟಡಗಿಸಬೇಕು" ಒತ್ತಾಯಿಸಿದ್ದಾರೆ.
ಪಾದರಾಯನಪುರವನ್ನು ಈಗಾಗಲೇ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದ್ದು, ಕೊರೋನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ನಲ್ಲಿ ಇಡಲು ನಿನ್ನೆ ರಾತ್ರಿ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯರು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.



ಈ ಗಲಾಟೆಯ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿರುವ  ಸುನೀಲ್ ಕುಮಾರ್ ಬೆಂಗಳೂರು ಪಾದರಯನಪುರದಲ್ಲಿ ನಡೆದ ಘಟನೆ ಯಾವುದೆ ಕ್ಷಮೆಗೆ ಅರ್ಹವಲ್ಲ... ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಅದರ ಹಿಂದೆ ಇರುವ ದುಷ್ಟ ಶಕ್ತಿಗಳ ಹುಟ್ಟಡಗಿಸಬೇಕು ಎಂದಿದ್ದಾರೆ.









Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget