ಕಾರ್ಕಳ;ತಾಲೂಕಿನ ನಾಲ್ಕೂ ಗಡಿಗಳಲ್ಲಿ ಪೋಲಿಸರ ಜೊತೆ ಗಡಿ ಕಾಯಲಿರುವ ಶಿಕ್ಷಕರು.-Times Of karkala

ಕಾರ್ಕಳ;ತಾಲೂಕಿನ ನಾಲ್ಕೂ ಗಡಿಗಳಲ್ಲಿ ಪೋಲಿಸರ ಜೊತೆ ಗಡಿ ಕಾಯಲಿರುವ ಶಿಕ್ಷಕರು.
ಇನ್ನು ಮುಂದೆ ಪೋಲೀಸರ ಜೊತೆ ಗಡಿಗಳಲ್ಲಿ ಶಿಕ್ಷಕರೂ ಕಾಯಲಿದ್ದಾರೆ. ಈ ರೀತಿಯ ಆದೇಶವೊಂದು ಹೊರಬಿದ್ದಿದೆ. ಅದರಂತೆ ಚೆಕ್‌ ಪೋಸ್ಟ್‌ ನಲ್ಲಿ ವೀಕ್ಷಕರಾಗಿ ಕೆಲಸ ನಿರ್ವಹಿಸಲು ಶಿಕ್ಷಕರಿಗೆ ತರಭೇತಿಯನ್ನೂ ನೀಡಲಾಗಿದೆ.

ಕೋವಿಡ್‌-19 ಹರಡುವಿಕೆಯನ್ನು ತಡೆಗಟ್ಟಲು ನಿರ್ಬಂಧಾಜ್ಞೆ ವಿಧಿಸಿರುವುದರಿಂದ ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ವ್‌ಗಳನ್ನು ನಿರ್ಮಿಸಿ ವಾಹನ ಹಾಗೂ ಅದರೊಂದಿಗೆ ಸಂಚರಿಸುವ ವ್ಯಕ್ತಿಗಳ ತಪಾಸಣೆ ನಡೆಸಲು ಮೇಲ್ವಿಚಾರಕರು ಹಾಗೂ ಶಿಕ್ಷಕ ವರ್ಗ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಅದರಂತೆ ಏ.20ರಂದು ಚೆಕ್‌ಪೋಸ್ವ್‌ಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗಿದ್ದು,ಕಾರ್ಕಳ ತಾಲೂಕಿನ ನಾಲ್ಕು ಚೆಕ್‌ಪೋಸ್ವ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಜಾಹೀರಾತು
 ಜಾಹೀರಾತು
ಜಾಹೀರಾತು

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget