ಕಾರ್ಕಳ:ಆಸ್ಪತ್ರೆಯ ಬಿಲ್‌ ಕಟ್ಟಲು ಪರದಾಡಿದ ಬಡಕುಟುಂಬಕ್ಕೆ ಸಹೃದಯಿ ದಾನಿಗಳಿಂದ ನೆರವು-Times Of karkala

ಕಾರ್ಕಳ:ಆಸ್ಪತ್ರೆಯ ಬಿಲ್‌ ಕಟ್ಟಲು ಪರದಾಡಿದ  ಬಡಕುಟುಂಬಕ್ಕೆ ಸಹೃದಯಿ ದಾನಿಗಳಿಂದ ನೆರವು-Times OF karkala

ಸಾಮಾಜಿಕ ಜಾಲತಾಣ ಎಷ್ಟು ಅಪಾಯಕಾರಿಯೋ ಸರಿಯಾಗಿ ಬಳಸಿಕೊಂಡರೆ ಅಷ್ಟೇ ಉಪಯೋಗವೂ ಕೂಡಾ. ಕಾರ್ಕಳದ ನಿವಾಸಿಯೊಬ್ಬರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭ ಹಣವಿಲ್ಲದೇ ಕಂಗಾಲಾಗಿದ್ದಾರೆ.ಇದನ್ನರಿತ ಸಹೃದಯಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ದಾನಿಗಳ ನೆರವಿನಿಂದ ಇದೀಗ ಆಸ್ಪತ್ರೆಯ ಬಿಲ್‌ ಕಟ್ಟಿ ಡಿಸ್ಚಾರ್ಜ್‌ ಆಗಿದ್ದಾರೆ.

ಕಾರ್ಕಳ ತಾಲೂಕಿನ ಅಯ್ಯಪ್ಪನಗರ ನಿವಾಸಿಯಾದ ಸುಬ್ರಮಣ್ಯ ಎಂಬುವವರು ಲಿವರ್‌ ಸಮಸ್ಯೆಯಿಂದಾಗಿ ಉಡುಪಿಯ ಆದರ್ಶ ಆಸ್ಪತೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೂ ಕೂಡಾಆಸ್ಪತ್ರೆಯ ಬಿಲ್‌ ಕಟ್ಟಲಾಗದೇ ಡಿಸ್ಚಾರ್ಜ್‌ ಮಾಡುವಂತಿಲ್ಲ.ಒಟ್ಟು ೨೭೦೦೦ ರೂ. ಬಿಲ್‌ ಆಗಿದ್ದು ತೀರಾ ಬಡ ಕುಟುಂಬವಾಗಿದ್ದರಿಂದ ಮನೆಯವರು ಚಿಂತಿತರಾಗಿದ್ದರು.

ವಿಷಯವನ್ನರಿತ ರಕ್ಷಿತ್ ಭಾರತೀಯ ಎಂಬವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಸ್ಪಂ ದಿಸಿದ ಸಮಾಜ ಸೇವಾಸಂಸ್ಥೆಗಳಾದ Help to Save A life ನ ವತಿಯಿಂದ,  ಅರ್ಜುನ್ ಭಂಡಾರ್ಕರ್, (ರೂ.15,000) ಪೊರ್ತು ಚಾರಿಟೇಬಲ್ ಟ್ರಸ್ಟ್ (ರಿ)ಪರವಾಗಿ  ದಿನೇಶ್ ಶೆಟ್ಟಿ (ರೂ.5000)  ಹಾಗೂ ಸುಕೇತ್ ಶೆಟ್ಟಿ ಎಂಬವರು ರೂ. 3000 ಹೀಗೆ ಒಟ್ಟು ರೂ.23,000 ಆಸ್ಪತ್ರೆಯ ಬಿಲ್ಲು ಪಾವತಿಸಿ  ಸುಬ್ರಹ್ಮಣ್ಯ ಅವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿಸಲು ಸಹಾಯ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget