ಸ್ಟಾರ್‌ ಆದ ಶಾರದಕ್ಕ;ಗುಡಿಸಲಿನ ಮನೆಯಲ್ಲಿ ವಾಸವಿದ್ದರೂ ನೂರಾರು ಮನೆಗಳಿಗೆ ನೆರವು-Times Of karkala

ಸ್ಟಾರ್‌ ಆದ ಶಾರದಕ್ಕ;ಗುಡಿಸಲಿನ ಮನೆಯಲ್ಲಿ ವಾಸವಿದ್ದರೂ ನೂರಾರು ಮನೆಗಳಿಗೆ ನೆರವು-Times Of karkala 

ಕೊರೋನಾದಿಂದಾಗಿ ಇಡೀ ದೇಶವೇ ತತ್ತರಿಸಿಹೋಗಿದೆ.ಬಡ ಮಧ್ಯಮ ವರ್ಗದವರು ಜೀವನ ಅಯೋಮಯವಾಗಿದೆ. ಈ ಮಧ್ಯೆ  ಶ್ರೀಮಂತರು,ರಾಜಕಾರಣಿಗಳು,ಜನನಾಯಕರು ಈ ಸಂದರ್ಭದಲ್ಲಿ ದಾನ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರು ಮೀನು ಮಾರಿ ಜೀವನ ಸಾಗಿಸುತ್ತಿದ್ದರೂ ನೂರಾರು ಕುಟುಂಬಗಳಿಗೆ ದಾನ ಮಾಡಿದ್ದಾರೆ.ಮನೆ ಪುಟ್ಟದಾದರೂ ಮನಸ್ಸು ದೊಡ್ಡದು ಎಂದು ನಿರೂಪಿಸಿದ್ದಾರೆ.


ಮಲ್ಪೆ ವಡಬಾಂಡೇಶ್ವರದಲ್ಲಿ ಒಂದು ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿರುವ ಶಾರದಕ್ಕನದು ಮೀನು ಮಾರುವ ಉದ್ಯೋಗ. ದಿನಬೆಳಗಾದರೆ ಮೀನುಗಳನ್ನು ಮಾರಿ ಬರುವ ಸಂಪಾದನೆಯಲ್ಲಿ ದಿನದೂಡುತ್ತಿದ್ದರು. ಆದರೆ ತಮ್ಮ ಸುತ್ತಮುತ್ತಲಿನವರ ಕಷ್ಟಕ್ಕೆ ಸ್ಪಂದಿಸಿದ ಅವರು 140 ಬಡ ಕುಟುಂಬಸ್ಥರರಿಗೆ 700 ಕೆಜಿ ಅಕ್ಕಿಯನ್ನು ಹಂಚಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗಿದೆ. ಕಷ್ಟ ಅಂತ ಇದ್ದಾಗ ನೀಡುವವರಿಗಿಂತ ಪಡೆದುಕೊಳ್ಳುವವರೇ ಹೆಚ್ಚು. ಈ ಸಂದರ್ಭದಲ್ಲಿ ತಾನು ಕಷ್ಟದಲ್ಲಿದ್ದರೂ,ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಶಾರದಕ್ಕರನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
ಜಾಹೀರಾತು
 ಜಾಹೀರಾತು
ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget