May 2020

ಬೆಳ್ಮಣ್:ಕ್ವಾರಂಟೈನ್ ಮುಗಿಸಿ ಬಂದಿದ್ದ ಯುವಕನಿಗೆ ಕೊರೋನಾ:ಇನ್ನಾ ಗ್ರಾಮ ಸೀಲ್ ಡೌನ್-Times of karkala

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಯುವಕನೋರ್ವನಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಇನ್ನ  ಗ್ರಾಮದ ಕೆಲವು ಪ್ರದೇಶಗಳನ್ನು ಸೀಲ್ ಡೌನ್  ಮಾಡಲಾಗಿದೆ. 


ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಿಂದ ಆಗಮಿಸಿದ್ದ ಈತ ಹೆಬ್ರಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದ.
ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಬಂದ ಬಳಿಕ  ಕೊರೋನಾ ದೃಢಪಟ್ಟಿದೆ. 

ಜಾಹೀರಾತು 
 https://wa.me/919945283600


ಕೋವಿಡ್ ಪರೀಕ್ಷೆ ವರದಿ ಜಿಲ್ಲಾಡಳಿತದ ಕೈಸೇರುವ ಮೊದಲೇ ಈತನನ್ನು ಕ್ವಾರಂಟೈನ್ ನಿಂದ ಬಿಡುಗಡೆ ಮಾಡಲಾಗಿತ್ತು. ಮನೆಗೆ ಬಂದ ಈತ ನಂತರ ಇಲ್ಲಿ ಕೆಲವು ಕಡೆ ಓಡಾಡಿದ್ದ ಎನ್ನಲಾಗಿದೆ.

ಜಾಹೀರಾತು 


ಶನಿವಾರ ರಾತ್ರಿ ಈತನಿಗೆ ಕೋವಿಡ್ ಪಾಸಿಟಿವ್ ಇರುವ ಬಗ್ಗೆ ದೃಢವಾಗಿದೆ. ಸದ್ಯ ಈತನನ್ನು ನಿಗಧಿತ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗ್ರಾಮದ ಮಡ್ಮಣ್, ಬಗ್ಗರಗುತ್ತು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ  ವಿ.ಎಸ್.ಮಂಜುನಾಥ್ ನಿಧನ 

ಯಲಹಂಕ: ಬೆಂಗಳೂರಿನ ನಿಟ್ಟೆ ಸ್ಕೂಲ್  ಆಫ್  ಮ್ಯಾನೇಜ್‌ಮೆಂಟ್‌ನ
ನಿರ್ದೇಶಕರಾಗಿದ್ದ ಪ್ರಸಿದ್ಧ ಮ್ಯಾನೇಜ್‌ಮೆಂಟ್ ತಜ್ಞ ಪ್ರೊ. ವಿ.ಎಸ್.ಮಂಜುನಾಥ್ ಅವರು ತೀವ್ರ
ಹೃದಯಾಘಾತದಿಂದ ಅವರ ನಿವಾಸದಲ್ಲಿ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.


ಶ್ರೀಯುತರಿಗೆ ೫೨ ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ‘ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಅಪಾರ ಪರಿಣತಿಯನ್ನು ಗಳಿಸಿದ್ದ ಅವರು ರಚಿಸಿರುವ ವಿದ್ವತ್ಪೂರ್ಣ ಪಠ್ಯಪುಸ್ತಕಗಳು ವಿಶ್ವದರ್ಜೆಯ ಗುಣಮಟ್ಟ ಪಡೆದಿವೆ.

ಅವರ ಅಗಲಿಕೆ ವಿದ್ವತ್ ಲೋಕಕ್ಕೆ ತುಂಬಲಾಗದ ನಷ್ಟ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ತಮ್ಮ ಸಂತಾಪ ಸಂದೇಶದಲ್ಲಿ  ತಿಳಿಸಿದ್ದಾರೆ.
ಶ್ರೀಯುತರ ಅಗಲಿಕೆಗೆ ಪ್ರೊ.ಎನ್.ಆರ್.ಶೆಟ್ಟಿ ಸೇರಿದಂತೆರಾಜ್ಯದ ವಿವಿಧ ಗಣ್ಯರು ಸಂತಾಪ
ಸೂಚಿಸಿದ್ದಾರೆ.

ಜಾಹೀರಾತು 

ಜಾಹೀರಾತು 
 https://wa.me/919945283600

ಜಾಹೀರಾತು 

ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

ಜಾಹೀರಾತು 
ಕಾರ್ಕಳ ರೋಟರಿಯಿಂದ ಮಹಿಳೆಯರಿಗೊಂದು ವೇದಿಕೆ:ವಾಟ್ಸಾಪ್ ಮೂಲಕ ಉಚಿತ ತರಬೇತಿ:ಈಗಲೇ ನೊಂದಾಯಿಸಿಕೊಳ್ಳಿ-Times of karkalaಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆಯರಿಗಾಗಿ ಒಂದು ಸುಂದರ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಕಳ ರೋಟರಿ ಸಂಸ್ಥೆ ಯು ಕಾರ್ಯೋನ್ಮುಖವಾಗಿದೆ.

ಕ್ರಿಯಾತ್ಮಕ ಚಟುವಟಿಕೆಗಳನ್ನು ಕಲಿಸುವ ಉದ್ದೇಶದಿಂದ ಮಹಿಳೆಯರಿಗಾಗಿ ರೋಟರಿ 10 ದಿವಸ 20 ವಿಷಯ ಸ್ಲೋಗನ್ ನೊಂದಿಗೆ ವಿವಿಧ ವಿಚಾರಗಳ ಕುರಿತು ಉಚಿತವಾಗಿ ತರಬೇತಿ ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಗ್ರೂಪಿನಲ್ಲಿ ವಿಡಿಯೋ ಮೂಲಕ ಯೋಗ, ಪ್ರಾಣಾಯಾಮ, ಅಡುಗೆ ಅರಮನೆ, ಆರೋಗ್ಯವೇ ಭಾಗ್ಯ, body fitness, ಡಾನ್ಸ್ , ಭಜನೆ, ಕ್ರಾಫ್ಟ್, ಬ್ಯೂಟಿ ಟಿಪ್ಸ್, ತರಕಾರಿ- ಫ್ರೂಟ್ಸ್ ಅಲಂಕಾರ, ಸಾರೀ ವಿನ್ಯಾಸ, ಕೇಶ ಅಲಂಕಾರ, ರಂಗೋಲಿ, ಶ್ಲೋಕ, ಸಂಸ್ಕೃತ ಸಂಭಾಷಣಾ, ಚಿತ್ರಕಲೆ, ಕೈ ತೋಟ, ಮೆಹಂದಿ , ಬಟ್ಟೆಗಳ ಚೀಲ ತಯಾರಿ, ಆಯುರ್ವೇದ ಕುರಿತು ಮಾಹಿತಿ- ತರಬೇತಿ ನೀಡಕಾಗುವುದು.

ಆಸಕ್ತರು ಜೂನ್ 9 ರ ಒಳಗಾಗಿ ರೋಟರಿ ಸಂಸ್ಥೆ ಕಾರ್ಕಳ (7892038011)  whats up ಮೂಲಕ ಹೆಸರನ್ನು ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ
ರೇಖಾ ಉಪಾಧ್ಯಾಯ
(+919900213535) 
ಮತ್ತು 
ರಮಿತಾ ಶೈಲೇಂದ್ರ ರಾವ್

(9740564044) ಅವರನ್ನು  ಸಂಪರ್ಕಿಸಿಬಹುದಾಗಿದೆ.

ಜಾಹೀರಾತು 
 https://wa.me/919945283600
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ:ಕೊರೋನಾ ನಡುವೆಯೂ ಬಿಜೆಪಿಯ ಆಪರೇಷನ್ ಕಮಲ-Times of karkala

ರಾಜ್ಯದಲ್ಲಿ ಒಂದು ಕಡೆ ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ರಾಜಕೀಯದಲ್ಲಿ ಆಪರೇಷನ್ ಕಮಲ ಕೂಡ ಚುರುಕುಕೊಂಡಿದ್ದು, ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.ಟಿ.ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಿಬಿಎಂಪಿ ಸದಸ್ಯೆಯ ಪತಿ ಹಾಗೂ ಕಾಂಗ್ರೆಸ್ ಮುಖಂಡರಾಗಿದ್ದ ತಿಮ್ಮನಂಜಯ್ಯ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

 https://wa.me/919945283600

ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಮಾಜಿ ಬಿಜೆಪಿ ಶಾಸಕ ಎಸ್.ಮುನಿರಾಜು ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ತಮ್ಮ ಕ್ಷೇತ್ರದಲ್ಲಿ ಹಸಿದವರಿಗೆ ಊಟ, ದಿನಸಿ, ತರಕಾರಿ ನೀಡಿ ಜನರಿಗೆ ನೆರವಾಗಿದ್ದರು. ಈ ನಡುವೆ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕೆ ಟಿ.ದಾಸರಹಳ್ಳಿಯಲ್ಲಿ ಆಪರೇಷನ್ ಕಮಲ ಚುರುಕುಗೊಂಡಿದ್ದು, ತಿಮ್ಮನಂಜಯ್ಯ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಕೊರೊನಾ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಟಿ.ದಾಸರಹಳ್ಳಿಯ ಬಾಗಲಗುಂಟೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಲಾಗಿದೆ. ಈ ವೇಳೆ ಮಾಜಿ ಶಾಸಕ ಎಸ್.ಮುನಿರಾಜು, ಕ್ಷೇತ್ರದ ಅಧ್ಯಕ್ಷ ಲೋಕೇಶ್, ತಿಮ್ಮನಂಜಯ್ಯ, ಮುಖಂಡರಾದ ನರಸಿಂಹ ಮೂರ್ತಿ, ಸಿಎಂ. ನಾಗರಾಜು, ಉಮಾದೇವಿ, ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

"ಮನೆಗೆ ಬರಬೇಡಿ ಮುಂಬೈ ನಿಂದ ಬಂದ ವಲಸೆ ಕಾರ್ಮಿಕರಿದ್ದಾರೆ"-ಹೀಗೊಂದು  ಬೋರ್ಡ್ !ಇದು ಜಾಗೃತಿಯೋ ? ವಿಕೃತಿಯೋ ?ಬೆಳುವಾಯಿ: ಕೊರೋನಾ ಮಹಾಮಾರಿ ಎಲ್ಲೆಡೆ ಭಯದ ವಾತಾವರಣವನ್ನು ಸೃಷ್ಟಿಸಿರುವುದು ನಿಜ.  ಆದರೆ ಇಲ್ಲಿ ಕೆಲವಂದು  ಮನೆ  ಮುಂದೆ 'ಮನೆಯಲ್ಲಿ ಮುಂಬೈ ವಲಸೆ ಕಾರ್ಮಿಕರಿದ್ದಾರೆ'  ಎಂದು ಬೋರ್ಡ್ ನೇತು ಹಾಕುತ್ತಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ಚಿತ್ರಗಳು  ವೈರಲ್ ಆಗಿದೆ. 

ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಜಗಿಯುವವರಿಗೆ ಕಾದಿದೆ ಶಿಕ್ಷೆ-Times of kakala 

ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್‌ ಮಸಾಲ ಉತ್ಪನ್ನ ಸೇವಿಸಿ ಉಗುಳುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ  ನಿಯಮ, ಉಲ್ಲಂಘಿಸಿದರೆ ಕಾನೂನು ಕ್ರಮಕೈಗೊಳ್ಳುವ  ಎಚ್ಚರಿಕೆ ನೀಡಿದೆ.


ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು, ಕೊರೊನಾ ಪಿಡುಗು ಪರಿಣಾಮಕಾರಿ ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ  ರೀತಿಯ ತಂಬಾಕು, ಪಾನ್‌ ಮಸಾಲ ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಿ ಉಗುಳುವುದು ನಿರ್ಬಂಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಜಾಹೀರಾತು 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಗುಟ್ಕಾ ನಿಷೇಧಿಸಿದ ಬಳಿಕ ಅಡಕೆ ಹಾಗೂ ತಂಬಾಕು ಚೀಟಿಗಳನ್ನು ಬೇರೆ ಮಾಡಿ ಪೂರೈಕೆ ಹಾಗೂ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕಿದೆ. ಹೀಗಾಗಿ ಯಾವುದೇ ರೀತಿಯ ಜಗಿಯುವ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಿ, ಉಗುಳುವುದನ್ನು ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಜಾಹೀರಾತು 
https://goo.gl/maps/dkqruzoYGqFTdvJT9 

ಉಲ್ಲಂಘಿಸಿದರೆ ಜೈಲು: ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್‌ ಮಸಾಲ ಉತ್ಪನ್ನಗಳ ಸೇವನೆ ಹಾಗೂ ಉಗುಳುವುದು ನಿಷೇಧಿಸುವ ಆದೇಶ ಉಲ್ಲಂಘಿಸಿದವರ ವಿರುದ ಐಪಿಸಿ ಸೆಕ್ಷನ್‌ 188 (ಸರ್ಕಾರಿ ಆದೇಶಕ್ಕೆ  ಅವಿಧೇಯತೆ)ಡಿ 6 ತಿಂಗಳ ಸಾದಾ ಸಜೆ, 1000 ರೂ. ದಂಡ, ಸೆಕ್ಷನ್‌ 268 (ಅನುಚಿತ ವರ್ತನೆ) 269 (ಜೀವಕ್ಕೆ ಅಪಾಯಕಾರಿ ಸೋಂಕು ಹರಡುವಿಕೆ ಗೊತ್ತಿದ್ದರೂ ಉದಾಸೀನತೆ)ರಡಿ 6 ತಿಂಗಳ ಸಾದಾ ಶಿಕ್ಷೆ ಹಾಗೂ ಐಪಿಸಿ 270 (ಸಾರ್ವಜನಿಕರ ಸೋಂಕು ಹರಡಿಸುವ ಅಪಾಯಕಾರಿ ನಡವಳಿಕೆ)ರಡಿ 2 ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

ರಾಜ್ಯದ 8 ಜಿಲ್ಲೆಗಳಲ್ಲಿ "ಯೆಲ್ಲೋ  ಅಲರ್ಟ್" ಘೋಷಣೆ-Times of karkala

ದ.ಕ.: ಶುಕ್ರವಾರ ರಾತ್ರಿ ಮತ್ತು ಶನಿವಾರ  ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ''ಯೆಲ್ಲೊ ಅಲರ್ಟ್'' ಘೋಷಣೆ ಮಾಡಲಾಗಿದೆ.


ಹವಾಮಾನ ಇಲಾಖೆ ಸೂಚಿಸಿರುವಂತೆ  ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇದೇ 31 ಮತ್ತು ಜೂನ್ 1ರಂದು ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಲಿದೆ.
ಜಾಹೀರಾತು 


ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇದೇ 31 ಮತ್ತು ಜೂನ್ 1ರಂದು ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಾಹೀರಾತು 
https://goo.gl/maps/dkqruzoYGqFTdvJT9 

ಈ ಭಾಗಗಳ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗಜಿಲ್ಲೆಗಳಲ್ಲಿ ಜೂ.1ರವರೆಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಜೂ.2 ರಂದು ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget