"ಕಾರ್ಕಳದಲ್ಲಿ ದಾನಿಗಳು ನೀಡಿದ ಅಕ್ಕಿಯನ್ನು ಪಕ್ಷದ ಹೆಸರಿನಲ್ಲಿ ವಿತರಿಸಲಾಗುತ್ತಿದೆ"-ಹೆಬ್ರಿ ಬ್ಲಾಕ್ ಕಾಂಗ್ರೆಸ್

"ಕಾರ್ಕಳದಲ್ಲಿ ದಾನಿಗಳು ನೀಡಿದ ಅಕ್ಕಿಯನ್ನು ಪಕ್ಷದ ಹೆಸರಿನಲ್ಲಿ ವಿತರಿಸಲಾಗುತ್ತಿದೆ"-ಹೆಬ್ರಿ ಬ್ಲಾಕ್ ಕಾಂಗ್ರೆಸ್

ಪ್ರಧಾನ ಮಂತ್ರಿಯವರು ಘೋಷಣೆ ಮಾಡಿದ ರೂ ೨೦ ಲಕ್ಷ ಕೋಟಿ ತುರ್ತು ನಿಧಿ ಅಂಕೆ ಸಂಖ್ಯೆಗಳಿಗೆ ಮಾತ್ರ ಸೀಮಿತ ಎಂದು ಹೆಬ್ರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಪೂಜಾರಿ ತಿಳಿಸಿದ್ದಾರೆ. ಹೆಬ್ರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಈ ಫೋಷಣೆ ಜನ ಸಾಮಾನ್ಯರಿಗೆ ಮುಟ್ಟುವಂತದ್ದಲ್ಲ. ಕೊರೋನಾದಿಂದ ಆರ್ಥಿಕ ಸಂಕಷ್ಠಕ್ಕೊಳಗಾದ ಜನರಿಗೆ ಘೋಷಣೆಯಿಂದ ಮರುಳು ಮಾಡುವ ಪ್ರಯತ್ನವೇ ವಿನ: ಜನರ ಅಭಿವೃದ್ದಿಗಲ್ಲ ಎಂದು ತಿಳಿಸಿದ್ದಾರೆ.


     ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಅನ್ನಭಾಗ್ಯ ಯೋಜನೆ ಆರಂಭಿಸಲಾಗಿದೆ. ಕೊರೋನಾದಂತಹ ಸಮಸ್ಯೆಯ ಕಾಲ ಘಟ್ಟದಲ್ಲಿ ಕೂಡಾ ಜನರು ಈ ಯೋಜನೆಯಿಂದಾಗಿ ಹಸಿವಿನ ಚಿಂತೆಯಿಂದ  ಮುಕ್ತರಾಗಿದ್ದಾರೆ. ಆದರೆ ಕರ್ನಾಟಕದ ಈಗಿನ ಯಡಿಯೂರಪ್ಪರ ಸರ್ಕಾರ ಜನರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದಾರೆಯೇ  ವಿನ: ಕೇಂದ ಸರ್ಕಾರ  ಘೋಷಣೆಗೆ ಮಾತ ಸೀಮಿತವಾಗಿದೆ  ಎಂದರು. ಕೇಂದ್ರ ಸರ್ಕಾರ ಈ ಸಂಕಷ್ಠದಲ್ಲೂ ಯಾವುದೇ ಪ್ಯಾಕೇಜನ್ನು ಜನರಿಗೆ ತಲುಪಿಸಿಲ್ಲ. ಈ ಕಾಲ ಘಟ್ಟದಲ್ಲಿ ಬಡ್ಡಿ ರಹಿತ ಯೋಜನೆಗಳನ್ನು ಜನರಿಗೆ ನೀಡಬೇಕು. ಆದರೆ ಇವರು ಎಲ್ಲರನ್ನೂ ಸಾಲಗಾರರನ್ನಾಗಿ ಮಾಡಲು ಹೊರಟಿದ್ದಾರೆ ಎಂದರು.

       ದೊಡ್ಡವರ ೬೮ ಕೋಟಿ ಸಾಲ ಮನ್ನಾ ಆರ್ಥಿಕವಾಗಿ ಸಂಕಷ್ಠವುಳ್ಳವರು ಈ ಸಂದರ್ಭದಲ್ಲಿ  ಸಾಲಗಳನ್ನು ತೀರಿಸುವ ಪರಿಸ್ಥಿತಿಯಲ್ಲಿಲ್ಲ. ಅವರ ಸಾಲಗಳ ಬಗ್ಗೆ ಸರಕಾರಗಳು ಈ ಸಂದರ್ಭ ಗಮನ ನೀಡಬೇಕಾದ ಅಗತ್ಯವಿದೆ. ಇದರ ಬದಲಾಗಿ ಆರ್ಥಿಕವಾಗಿ ಸಬಲರಾಗಿರುವವರ ೬೮ ಕೋಟಿ ಸಾಲವನ್ನು ಮನ್ನಾ ಮಾಡಲು ಹೊರಟಿರುವುದು ಖಂಡನೀಯ ಎಂದರು. ಮುಂಬೈ ಹಾಗೂ ಹೊರ ರಾಜ್ಯದಲ್ಲಿ ಇರುವ ನಮ್ಮೂರಿನ ನಿವಾಸಿಗಳಿಗೆ ಶೀರೂರು ಚೆಕ್ ಪೋಸ್ಟ್ನಲ್ಲಿ ತೊಂದರೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ. ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ತಮ್ಮ ಊರಿಗೆ ಆಗಮಿಸುವ ಸಂದರ್ಭ ಅವರನ್ನು ಶೀರೂರು ಚೆಕ್ ಪೋಸ್ಟ್ನಲ್ಲಿ ಗಂಟೆಗಟ್ಟಲೆ ತಡೆದು ನಿಲ್ಲಿಸಲಾಗುತ್ತದೆ. ಉರಿ ಬಿಸಿಲಿನಲ್ಲಿ ಗರ್ಭಿಣಿಯರು, ಪುಟ್ಟ ಮಕ್ಕಳೊಂದಿಗೆ ಕುಟುಂಬಸ್ಥರು ನೊಂದಾವಣೆಗಾಗಿ ಸಾಲು ನಿಲ್ಲುವುದನ್ನು ಕಂಡರೆ ನಮಗೂ ಬಹಳ ಸಂಕಷ್ಠವಾಗುತ್ತದೆ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಸರಕಾರದ ಗಮನಕ್ಕೆ ತರಬೇಕಾದುದು ನಮ್ಮ ಶಾಸಕರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಒಂದು ಕಾನೂನು, ಕಾರ್ಕಳದಲ್ಲಿ ಪ್ರತ್ಯೇಕ ಕಾನೂನು ಕೊರೋನಾ ವಿಚಾರದಲ್ಲಿ ರಾಜ್ಯವು ಕಾನೂನುಗಳನ್ನು ತಂದಿದೆ. ಎಲ್ಲರೂ ಈ ಕಾನೂನನ್ನು ಪಾಲಿಸುತ್ತಿದ್ದಾರೆ. ಆದರೆ ಕಾರ್ಕಳದಲ್ಲಿ ರಾಜ್ಯದ ಕಾನೂನಿಗೆ ಬದಲಾಗಿ ಪ್ರತ್ಯೇಕ  ಕಾನೂನನ್ನು ಮಾಡಲಾಗಿರುವುದು ಜನರನ್ನು ಇನ್ನಷ್ಟು ತೊಂದರೆಗೆ  ದೂಡುವ ಪ್ರಯತ್ನವಾಗಿದೆ ಎಂದರು.

ಸರಕಾರಿ ಯಂತ್ರ ದುರ್ಬಳಕೆ ಕಾರ್ಕಳದಲ್ಲಿ ಸರಕಾರಿ ಯಂತ್ರದ ದುರ್ಬಳಕೆಯಾಗುತ್ತಿದೆ ಎಂದು ಕಾಂಗ್ರೇಸ್ ಆರೋಪಿಸಿದೆ. ಕೊರೋನಾ ಸಂದರ್ಭ ಜನರ ಆರ್ಥಿಕ ಸಂಕಷ್ಟ ನೀಗಿಸಲು ದಾನಿಗಳು ಸಹಕಾರ ನೀಡಿದ್ದಾರೆ. ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ಬಹಳಷ್ಟು ಅಕ್ಕಿ ಮಿಲ್ ಮಾಲಕರು ಹಾಗೂ ದಾನಿಗಳು ಅಕ್ಕಿಯನ್ನು ನೀಡಿದ್ದಾರೆ. ಆದರೆ ಇವ್ಯಾವುದೂ ತಹಶೀಲ್ದಾರ್ ಮೂಲಕ ವಿತರಣೆಯಾಗಿಲ್ಲ. ಬಿಜೆಪಿ ಪಕ್ಷದ ಮೂಲಕ ವಿತರಣೆಯಾಗುತ್ತಿದೆ. ತಾಲೂಕು ಕಚೇರಿಯನ್ನೇ ಪಕ್ಷದ ಕಚೇರಿ ಎಂಬ0ತೆ ಬಿಜೆಪಿ ವರ್ತಿಸುತ್ತಿದೆ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಮುದ್ರಾಡಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಸುಜಾತಾ ಲಕ್ಷö್ಮಣ್, ವರಂಗ ವ್ಯವಸಾಯಿಕ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಬಾಯರಿ, ಮಹಿಳಾ ಘಟಕದ ಶಶಿಕಲಾ, ಹೆಬ್ರಿ ಬ್ಲಾಕ್ ಕಾರ್ಯದರ್ಶಿ ಜನಾರ್ಧನ್ ಹೆಬ್ರಿ , ಶಂಕರ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget