ಕಾರ್ಕಳ:"ಅಸಮರ್ಪಕ ಒಳಚರಂಡಿಯಿಂದ ಬಾವಿಗೆ ಕೊಳಚೆ ನೀರು,ಸದ್ದಿಲ್ಲದೆ ಏರುತ್ತಿದೆ ಮನೆ ತೆರಿಗೆ ನೀರಿನ ಬಿಲ್" ಶಾಸಕರೇ ಬಿಡುವಿದ್ದರೆ ಇತ್ತ ಗಮನಿಸಿ-ಪುರಸಭಾ ಸದಸ್ಯ ಶುಭದ ರಾವ್

ಕಾರ್ಕಳ:"ಅಸಮರ್ಪಕ ಒಳಚರಂಡಿಯಿಂದ ಬಾವಿಗೆ ಕೊಳಚೆ ನೀರು,ಸದ್ದಿಲ್ಲದೆ ಏರುತ್ತಿದೆ ಮನೆ ತೆರಿಗೆ ನೀರಿನ ಬಿಲ್"
ಶಾಸಕರೇ ಬಿಡುವಿದ್ದರೆ ಇತ್ತ ಗಮನಿಸಿ-ಪುರಸಭಾ ಸದಸ್ಯ  ಶುಭದ ರಾವ್ಕೊರೋನಾ ಸಂಕಟ ದಿನೇದಿನೇ ಹೆಚ್ಚಾಗಿ ಅತಂಕ ಹೆಚ್ಚಾಗುತ್ತಿದಂತೆ ಸದ್ದಿಲ್ಲದೆ ನಡೆದ ಬೆಲೆ ಏರಿಕೆ ಮತ್ತು ಪೇಟೆಯ ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇಂತಹ ಸಮಯದಲ್ಲಿ ಬಿಡುವಿದ್ದರೆ ಶಾಸಕರು ಸ್ವಲ್ಪ ಇತ್ತ ಗಮನಹರಿಸಬೇಕು ಎಂದು ಕಾರ್ಕಳ ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ. 

ಕೊರೋನಾದಿಂದ ಅನುಭವಿಸದ ನೋವನ್ನೆಲಾ ಅನುಭವಿಸಿ ಆಗಿದೆ ಇನ್ನಾದರೂ ಇದರಿಂದ ಮುಕ್ತಿ ಸಿಗಲಿ ಎಂದು ಬಯಸಿದರೆ ಸಾರ್ವಜನಿಕರಿಗೆ ಮತ್ತೊಂದು ‌ಸಂಕಟ ಎದುರಾಗಿದೆ‌, ಪುರಸಭೆ ಸದ್ದಿಲ್ಲದೆ ನೀರಿನ ದರ, ಮನೆ ತೆರಿಗೆ, ಮತ್ತು ವಾಣಿಜ್ಯ ತೆರಿಗೆಯನ್ನು   ಎರಡು ಪಟ್ಟು ಏರಿಸಿದೆ. ಅಷ್ಟೇ ಅಲ್ಲದೇ ತ್ಯಾಜ್ಯ ವಿಲೇವಾರಿ ತೆರಿಗೆಯನ್ನು ಕಡ್ಡಾಯವಾಗಿ ಇದರ ಜೊತೆಯಲ್ಲಿಯೇ ಸೇರಿಸಿ ಸಾರ್ವಜನಿಕರಿಗೆ ಶಾಕ್ ನೀಡಿದೆ, .

ನಗರದ ಒಳಚರಂಡಿ ಕೆಲಸ ಆಮೆಗತಿಯಿಂದ ನಡೆಯುತ್ತಿದ್ದು ಅದೂ ಕೂಡ ಅಸಮರ್ಪಕವಾಗಿದೆ ಈಗಾಗಲೇ ನೂರಕ್ಕೂ ಹೆಚ್ಚು ಬಾವಿಗಳಿಗೆ ಕಲುಷಿತ ನೀರು ತುಂಬಿದ ಪರಿಣಾಮಾ ಉಪಯೋಗಿಸಲು ಅಸಾದ್ಯವಾಗಿದೆ, ಚರಂಡಿ ನಿರ್ಮಾಣದ ಸಂದರ್ಭದಲ್ಲಿ ನಳ್ಳಿ‌ ನೀರಿನ‌ ಸಂಪರ್ಕ ಕಡಿದ ಪರಿಣಾಮ ಜನರಿಗೆ ನೀರಿಲ್ಲದೆ ಸಂಕಟವನ್ನು ಎದುರಿಸಬೇಕಾಗಿದೆ, ವಿಪಕ್ಷದಲ್ಲಿದ್ದ ಸಂದರ್ಭ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಶಾಸಕರ ಜಾಣ ಮೌನ   ಆಶ್ಚರ್ಯ ಉಂಟು ಮಾಡಿದೆ ಅದ್ದರಿಂದ ‌ತಾವು ಸ್ವಲ್ಪ ಬಿಡುವು‌ ಮಾಡಿ ಇತ್ತ ಗಮನ ಹರಿಸುವಂತೆ ಎಂದು ಮನವಿ ಮಾಡಿದ್ದಾರೆ‌.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget