"ಪೂಜೆ ಆನ್ ಲೈನ್ ನಲ್ಲಿ ಮಾಡ್ತೀರಾದ್ರೆ ಪ್ರಸಾದ ಝೋಮ್ಯಾಟೊದಲ್ಲಿ ಕಳಿಸಿ"-ಮುಜರಾಯಿ ಸಚಿವರ ವಿರುದ್ಧ ಭಕ್ತರ ಆಕ್ರೋಶ
ಮಂಗಳೂರು: ದೇಶಾದ್ಯಂತ ಕೊರೊನಾ ಮಹಾಮಾರಿ ವಿರುದ್ಧ ಲಾಕ್ ಡೌನ್ ಘೋಷಿಸಲಾಗಿದೆ. ಸದ್ಯ ಕೆಲವೊಂದು ನಿಯಮಗಳನ್ನು ಸಡಿಲಿಸಲಾಗಿದ್ದರೂ ಸಂಪೂರ್ಣ ರಿಲೀಫ್ ಸಿಕ್ಕಿಲ್ಲ. ಈ ಮಧ್ಯೆ ರಾಜ್ಯ ಸರಕಾರ ಭಕ್ತರಿಗೆ ಮುಚ್ಚಲ್ಪಟ್ಟಿರುವ ದೇವಸ್ಥಾನಗಳಲ್ಲಿ ಆನ್ಲೈನ್ ಮೂಲಕ ಪೂಜೆಗೆ ಅವಕಾಶ ನೀಡಲು ಮುಂದಾಗಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಈ ಬಗ್ಗೆ ಮಾಹಿತಿ ನೀಡಿದ್ದು ರಾಜ್ಯದ ೫೦ಕ್ಕೂ ಅಧಿಕ ದೇವಸ್ಥಾನಗಳಲಿಮೇ ೨೬ರಿಂದ ಆನ್ಲೈನ್ ಪೂಜೆ ನಡೆಯುತ್ತದೆ. ಭಕ್ತರು ೨೦ಕ್ಕೂ ಹೆಚ್ಚು ಸೇವೆಗಳಿಗೆ ಆನ್ಲೈನ್ನಲ್ಲಿ ಹಣ ಪಾವ ತಿಸಿಪೂಜೆ ಮಾಡಬಹುದು ಎಂದಿದ್ದಾರೆ.
ಆದರೆ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊರೊನಾದಿಂದಾಗಿ ದೇವಸ್ಥಾನ ಮುಚ್ಚಿದೆ, ಭಕ್ತರಿಗೆ ಪ್ರವೇಶವಿಲ್ಲ. ಹಾಗಿದ್ದೂ ಮೋದಿ ಸರಕಾರ ಭಕ್ತರನ್ನು ದೋಚಲು ಮುಂದಾಗಿದೆ ಎಂದು ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ.ರಾಜ್ಯದ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ,ಮೈಸೂರು ಚಾಮುಂಡೇಶ್ವರಿ,
ಕಟೀಲು ದುರ್ಗಾಪರಮೇಶ್ವರಿ,ಬನಶಂಕರಿ, ಕೊಲ್ಲೂರು ಮೂಕಾಂಬಿಕಾ, ಶೃಂಗೇರಿ ಸೇರಿದಂತೆ ೫೦ ದೇವಾಲಯಗಳಲ್ಲಿ ಆನ್ ಲೈನ್ ಪೂಜೆ ಸೇವೆಗೆ ಅವಕಾಶ ನೀಡಲಾಗುವುದು ಎಂದು ಕೋಟ ಹೇಳಿದ್ದಾರೆ.
ಭಕ್ತರುಆನ್ ಲೈನ್ ಮೂಲಕ ಹಣ ಪಾವತಿಸಿ ತಮ್ಮ ಹೆಸರಿನಲ್ಲಿ ಸೇವೆ ಪೂಜೆ
ಮಾಡಿಸಬಹುದಾಗಿದೆ.ರಾಜ್ಯಾದ್ಯಂತ ದೇವಸ್ಥಾನ, ದೈವಸ್ಥಾನಗಳು ಬೀಗ ಹಾಕಿಸಿಕೊಂಡಿದು ಶೃ0ಗೇರಿ ಸೇರಿದಂತೆ ೫೦ ದೇವಾಲಯಗಳಲ್ಲಿ ಆನ್ ಲೈನ್ ಪೂಜೆಸೇವೆಗೆ ಅವಕಾಶ ನೀಡಲಾಗುವುದು ಎಂದು ಕೋಟ ಹೇಳಿದ್ದಾರೆ.
ರಾಜ್ಯಾದ್ಯಂತ ದೇವಸ್ಥಾನ, ದೈವಸ್ಥಾನಗಳು ಬೀಗ ಹಾಕಿರುವುದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಸರಕಾರ ಇದನ್ನು ಕೆಲದಿನಗಳ ಹಿಂದೆ ಹೇಳಿತ್ತು. ಈಗ ನಷ್ಟ ಸರಿದೂಗಿಸಿಕೊಳ್ಳಲು ಆನ್ ಲೈನ್ ಪೂಜೆಗೆ ಮುಂದಾಗಿರುವುದು ಸರಿಯಲ್ಲ ಎನ್ನುವುದು ಭಕ್ತರ
ವಾದ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಿಂದೂ ದೇವಸ್ಥಾನಗಳ ಮೂಲಕ ಸರಕಾರ ಜನರ ಹಣ ಕೊಳ್ಳೆ ಹೊಡೆದು ಸರಕಾರ ನಡೆಸೋದು ಬೇಡ, ಪೂಜೆ ಆನ್ ಲೈನ್ ನಲ್ಲಿ ಮಾಡ್ತೀರಾದ್ರೆ ಪ್ರಸಾದ ಕೂಡಾ ಝೋಮ್ಯಾಟೊದಲ್ಲಿ ಕಳಿಸಿ ಎಂದು ಜಾಲತಾಣಿಗರು ಆಕ್ರೋಶ ಹೊರಹಾಕಿದ್ದಾರೆ.
Post a comment