ಕಾರ್ಕಳದಲ್ಲಿ ಬೀದಿಬದಿ ಪ್ರಾಣಿಗಳಿಗೆ "ಪ್ರೀತಿಯ ತುತ್ತು" ವಿತರಿಸುವ ಪ್ರಜ್ವಲ್ ಕಾರ್ಕಳ

ಕಾರ್ಕಳದಲ್ಲಿ ಬೀದಿಬದಿ ಪ್ರಾಣಿಗಳಿಗೆ "ಪ್ರೀತಿಯ ತುತ್ತು" ವಿತರಿಸುವ ಯುವಕ  

ಕಾರ್ಕಳ: ಲಾಕ್ ಡೌನ್ ಘೋಷಣೆಯಾದ ಬಾಳಿಕೆ ಮನುಷ್ಯರ ಕ್ಷತಗಳು ಒಂದೆಡೆಯಾದರೆ ಮೂಕ ಪ್ರಾಣಿಗಳ ಕಷ್ಟ ಇನ್ನೊಂದೆಡೆಯಾಗಿದೆ. ಸಂಜೆಯಾದರೆ ಸಾಕು ಬೀದಿಬದಿಯಲ್ಲಿರುವ ಮೂಕ ಪ್ರಾಣಿಗಳಿಗೆ ತುತ್ತನ್ನು ಹಾಕುವ ಮೂಲಕ ಇಲ್ಲೊಬ್ಬರು ಆದರ್ಶರಾಗಿದ್ದಾರೆ.


ಹೌದು ಕಾರ್ಕಳದ  ಪರಿಸರದಲ್ಲಿ" ಪ್ರೀತಿಯ ತುತ್ತು"  ಎನ್ನುವ ಯೋಜನೆ ಅಡಿಯಲ್ಲಿ ಪ್ರಜ್ವಲ್  ಕಾರ್ಕಳ ಇವರ ನೇತೃತ್ವದಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಒಂದು ಸುಂದರವಾದ ಕಾರ್ಯಕ್ರಮ ಮಾರ್ಚ್ ೨೪  ರಿಂದ  ನಡೆಯುತ್ತಾ ಬಂದಿದೆ.ಇದರೊಂದಿಗೆ ಕಾರ್ಕಳ ಸ್ವಚ್ಛ ಬಿಗ್ರೇಡ್ ಹಾಗೂ ಸೇವಾ ಭಾರತಿ ಕಾರ್ಕಳ ಇವರು ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ.

ಪ್ರಜ್ವಲ್  ತಮ್ಮ ಸ್ವಂತ ಖರ್ಚಿನಲ್ಲಿ ಬೀದಿನಾಯಿಗಳಿಗೆ ಪ್ರೀತಿಯ ತುತ್ತು ಅನ್ನ ನೀಡಿ  ಜನರಿಗೆ ಮಾದರಿ ಆಗಿದ್ದಾರೆ ಎಂದರೆ ತಪ್ಪಾಗದು.ಪ್ರಸ್ತುತ ಬಿಸಿನೆಸ್ ಮ್ಯಾನ್ ಆದ ಇವರು ಮಾರ್ಕೆಟ್ ರೋಡಿನ ನಿವಾಸಿ.ಸಂಜೆ 7 ರಿಂದ 9.30 ರಾತ್ರಿ ಸ್ವಂತ ವಾಹನದಲ್ಲಿ ಕಾರ್ಕಳದ ನಾನಾ ಪ್ರದೇಶಗಳಿಗೆ ಹೋಗಿ ಪ್ರತಿದಿನ 2 ಕೆಜಿ ರಸ್ಕ್ 10 ಪ್ಯಾಕೆಟ್ ಬಿಸ್ಕತ್ತುಗಳು.5 ಪ್ಯಾಕೆಟ್ ಬ್ರೆಡ್ 1.5 ರಿಂದ 2 ಕೆಜಿ ಪೆಡಿಗ್ರೀ ಪ್ರತಿದಿನ 30 ರಿಂದ 40 ನಾಯಿಗಳಿಗೆ ಆಹಾರವನ್ನು  ನೀಡುತ್ತಿದ್ದಾರೆ.


     ಮಾರ್ಕೆಟ್ ರಸ್ತೆ, ಕಾರ್ಕಳ  ಬಸ್ ನಿಲ್ದಾಣ, ಅನಂತ್ಶಯನ ವೃತ್ತ, ತಾಲೂಕು ಕ್ರೀಡಾಂಗಣ, ಸ್ವರಾಜ್ ಮೈದಾನ,ಗೋಮಟೇಶ್ವರ ಬೆಟ್ಟ, ಕರಿಯಕಲ್ಲು, ಬೈಪಾಸ್ ಜಂಕ್ಷನ್, ಅನೆಕೆರೆ, ಬಂಡಿಮಠ ಬಸ್ಸ್ಟ್ಯಾಂಡ್, ತಾಲ್ಲೂಕು ಕಚೇರಿ ಜಂಕ್ಷನ್ ಹಾಗೂ  ಕಾರ್ಕಳ ಪೇಟೆಯ  ಸುತ್ತ  ಮುತ್ತ ಪ್ರದೇಶ ಗಳಲ್ಲಿ ದಾರಿತಪ್ಪಿದ ನಾಯಿಗಳಿಗೆ ಯಾವುದೇ ಆಹಾರ ಲಭ್ಯತೆಯಿಲ್ಲದೆ ಕಷ್ಟಕ್ಕೆ ಈಡಾಗಿದೆ. ಏಕೆಂದರೆ ಯಾವುದೇ ಹೋಟೆಲ್ಗಳು ಇಲ್ಲ ಮತ್ತು ಆಹಾರ ಬಂಡಿಗಳು ತೆರೆದಿರುತ್ತದೆ.ಆದ್ದರಿಂದ ಈ ನಾಯಿಗಳು ಹಸಿವಿನಿಂದ ಸಾಯುತ್ತಿವೆ. ಆದ್ದರಿಂದ ಪ್ರಜ್ವಲ್ ರವರು  ನಗರದ ಸುತ್ತಲೂ ನಾಯಿಗಳು ಮತ್ತು ಬೆಕ್ಕುಗಳಿಗೆ ಆಹಾರವನ್ನು ನೀಡಲು  ಪ್ರಾರಂಭಿಸಿದ್ದು  ಶ್ಲಾಘನೀಯವಾದದ್ದು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget