"ಮನೆಗೆ ಬರಬೇಡಿ ಮುಂಬೈ ನಿಂದ ಬಂದ ವಲಸೆ ಕಾರ್ಮಿಕರಿದ್ದಾರೆ"-ಹೀಗೊಂದು ಬೋರ್ಡ್ !ಇದು ಜಾಗೃತಿಯೋ ? ವಿಕೃತಿಯೋ ?-Times Of karkla

"ಮನೆಗೆ ಬರಬೇಡಿ ಮುಂಬೈ ನಿಂದ ಬಂದ ವಲಸೆ ಕಾರ್ಮಿಕರಿದ್ದಾರೆ"-ಹೀಗೊಂದು  ಬೋರ್ಡ್ !ಇದು ಜಾಗೃತಿಯೋ ? ವಿಕೃತಿಯೋ ?ಬೆಳುವಾಯಿ: ಕೊರೋನಾ ಮಹಾಮಾರಿ ಎಲ್ಲೆಡೆ ಭಯದ ವಾತಾವರಣವನ್ನು ಸೃಷ್ಟಿಸಿರುವುದು ನಿಜ.  ಆದರೆ ಇಲ್ಲಿ ಕೆಲವಂದು  ಮನೆ  ಮುಂದೆ 'ಮನೆಯಲ್ಲಿ ಮುಂಬೈ ವಲಸೆ ಕಾರ್ಮಿಕರಿದ್ದಾರೆ'  ಎಂದು ಬೋರ್ಡ್ ನೇತು ಹಾಕುತ್ತಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ಚಿತ್ರಗಳು  ವೈರಲ್ ಆಗಿದೆ. 
ಜಾಹೀರಾತು 

"ಕೊರೋನಾ  ಭೀತಿಯುಳ್ಳವರು ನಮ್ಮ ಮನೆ ಪರಿಸರಕ್ಕೆ  ಬರದಂತೆ ಎಚ್ಚರಿಕೆ. ನಮ್ಮ ಮನೆಯಲ್ಲಿ ಪರಿವಾರ ಸದಸ್ಯರು ಮುಂಬೈ ವಲಸೆ ಕಾರ್ಮಿಕರಾಗಿ ತವರೂರಿಗೆ ಬಂದು ಸಾಂಸ್ಥಿಕ ೧೪ ದಿನಗಳ ಕ್ವಾರಂಟೈನ್ ಮುಗಿಸಿ ಸರ್ಕಾರದ ನಿಯಮ ಪಾಲಿಸಿ ಈಗ ತಹಸೀಲ್ದಾರರ ಆದೇಶದ ಮೇರೆಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೋರೋಣ ಜೀವಭಯ ಇದ್ದವರು ಜಾಗೃತರಾಗಿ"

ಜಾಹೀರಾತು 
https://goo.gl/maps/dkqruzoYGqFTdvJT9 


"ಮುಂಬೈ ವಲಸೆ  ಕಾರ್ಮಿಕರು  ಈ ಮನೆಯಲ್ಲಿ ಪರಿವಾರದೊಂದಿಗೆ  ನೆಮ್ಮದಿಯೊಂದಿಗೆ ವಾಸಿಸುತ್ತಿದ್ದಾರೆ. ಕೊರೋನಾ  ಭಯ ಇದ್ದವರು ಜಾಗ್ರತೆ. ನಮ್ಮ ಮನೆಯ ಪರಿಸರಕ್ಕೆ ಬರಬೇಡಿ " ಎಂಬ ಬರಹವಿರುವ ಬೋರ್ಡ್ ಗಳನ್ನು  ಮನೆಯ ಮುಂದೆ ಇರುವ ಗೋಡೆಗೆ  ಹಾಗೂ ಮರಕ್ಕೆ  ತೂಗು ಹಾಕುತ್ತಿದ್ದಾರೆ. 


ಮೂಡುಬಿದಿರೆಯ ಬೆಳುವಾಯಿಯಲ್ಲಿ  ಈ ಬೋರ್ಡ್ ಗಳು ಕಾಣಸಿಕ್ಕಿದ್ದು ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಸುದ್ದಿಯಾಗುತ್ತಿದೆ. ಕೆಲವರು ಇದು ಜಾಗೃತಿಗಾಗಿ ಮಾಡುತ್ತಿದ್ದಾರೆ ಎಂದರೆ ಇನ್ನು ಕೆಲವರು ಇದನ್ನು ವಿಕೃತಿ ಅನ್ನುತ್ತಿದ್ದಾರೆ .

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget