ಆತ್ಮಹತ್ಯೆ ಗೆ ಯತ್ನಿಸಿದ್ದ ಚಂದ್ರಣ್ಣ ಕೊನೆಗೂ ಬಡತನವನ್ನು ಸವಾಲಾಗಿ ಸ್ವೀಕರಿಸಿದರೆ?

ಆತ್ಮಹತ್ಯೆ ಗೆ ಯತ್ನಿಸಿದ್ದ ಚಂದ್ರಣ್ಣ ಕೊನೆಗೂ ಬಡತನವನ್ನು ಸವಾಲಾಗಿ ಸ್ವೀಕರಿಸಿದರೆ?


ಓದುಗರೇ ಕಳೆದ ಸಂಚಿಕೆಯಲ್ಲಿ ಚಂದ್ರಣ್ಣ ಬದುಕಿನಲ್ಲಿ ಕಷ್ಟಪಟ್ಟ ದಿನಗಳು  ಮತ್ತು ವಿದೇಶದಲ್ಲಿ ಉದ್ಯೋಗಕ್ಕಾಗಿ ಹೊರಡುವ ಯೋಚನೆ ಮಾಡುವುದರ ಬಗ್ಗೆ ತಿಳಿಸಿದ್ದೆ.

2008 ಅಕ್ಟೋಬರ್ ನಲ್ಲಿ ಚಂದ್ರಣ್ಣ ನ ಬಾಳಿನಲ್ಲಿ ಒಂದು ಶುಭ ಸುದ್ದಿ. ತನ್ನ ಬಹುಕಾಲದ  ಆಸೆಯಂತೆ ಕಷ್ಟವನ್ನು ಮೆಟ್ಟಿ ನಿಲ್ಲಬೇಕಾದರೆ ವಿದೇಶದಲ್ಲಿ ದುಡಿಯಬೇಕು ಎಂಬ ಕನಸು ನನಸಾಗುವ ಕಾಲವದು. ಕೆಲಸ ಕನ್ಫರ್ಮ್ ಆಗಿದ್ದೆ  ತಡ ಚಂದ್ರಣ್ಣ  ಒಂದು ಕ್ಷಣವೂ ತಡ ಮಾಡದೆ  ಮನೆಯವರ ಕಾಲಿಗೆ ಎರಗಿ ಆಶಿರ್ವಾದವನ್ನು ಪಡೆದು ಮಂಗಳೂರಿನಿಂದ  ಮುಂಬೈ ಗೆ ಹೊರಡುತ್ತಾರೆ. ಆದರೆ ಮಾಯಾನಗರಿ ಮುಂಬೈನಲ್ಲಿ ನಡೆದದ್ದು  ಬೇರೆಯೇ.

ಮುಂಬೈಗೆ ಹೋದ ಮೇಲೆ ಚಂದ್ರಣ್ಣ ನಿಗೆ ತಾನು ಮೋಸ ಹೋದದ್ದು ತಿಳಿಯುತ್ತದೆ. ಪಾಸ್ಪೋರ್ಟ್ ಕಂಪೆನಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಸುಮಾರು ಏಳು ಲಕ್ಷದವರೆಗೂ ಮೋಸ ಮಾಡಿರುತ್ತಾರೆ.

ಮಾನಸಿಕ ವಾಗಿ ಜರ್ಜರಿತ ರಾಗಿದ್ದ ಚಂದ್ರಣ್ಣನ ಪರಿಸ್ಥಿತಿ ಮಾತ್ರ ಅತಂತ್ರ. ಒಂದು ಕಡೆ ಪಾಸ್ಪೋರ್ಟ್ ಕೂಡಾ ಇಲ್ಲ.ಈ ಕಡೆ ಮನೆಗೂ ಹೋಗುವಂತಿಲ್ಲ,ಏಕೆಂದರೆ  ಎಲ್ಲಾರಿಗೂ ವಿದೇಶಕ್ಕೆ ಹೋಗುವುದಾಗಿ ಹೇಳಿ ಮನೆಯವರ ಆಶಿರ್ವಾದವನ್ನು ಪಡೆದು ಬಂದೂ  ಆಗಿದೆ. ದಿಕ್ಕೆಟ್ಟು ಹೋಗಿದ್ದ ಚಂದ್ರಣ್ಣ  ಸೀದಾ ಮಂಗಳೂರಿಗೆ ಬರುತ್ತಾರೆ. 1 ವಾರ ಹೊಟೇಲ್ ನಲ್ಲಿ ತಂಗುತ್ತಾರೆ. ಆತ್ಮಹತ್ಯೆ ಕಡೆ ಶರಣಾಗಲು ಯೋಚಿಸಿದ್ದ ಚಂದ್ರಣ್ಣ ಮನಸ್ಸು ಗಟ್ಟಿ ಮಾಡಿಕೊಂಡು ಮಂಗಳೂರಿನ ಟೌನ್ ಹಾಲ್ ಬಳಿಯಿರುವ ಪಾರ್ಕ್ ನಲ್ಲಿ ಕುಳಿತು ಕಣ್ಣೀರಿಡುತ್ತಾ ದಿಕ್ಕೇ ತೋಚದೇ ಇದ್ದ  ಚಂದ್ರಣ್ಣ  ತನ್ನ ಆಪ್ತ ಸ್ನೇಹಿತ ಗುರುಪ್ರಸಾದ್ ಪದವಿನಂಗಡಿ ಎಂಬಾತನಿಗೆ  ಕರೆ ಮಾಡಿ ತನಗಾದ ಎಲ್ಲಾ ಪರಿಸ್ಥಿತಿಯನ್ನು ವಿವರಿಸುತ್ತಾರೆ. ತಕ್ಷಣ ಬೈಕ್ ಚಲಾಯಿಸಿಕೊಂಡು ಬಂದ ಗುರು ಚಂದ್ರಣ್ಣನನ್ನು  ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಬಾಲ್ಯದಿಂದಲೂ ಚಂದ್ರಣ್ಣನನ್ನು  ಮಗನಂತೆ ನೋಡಿಕೊಳ್ಳುತ್ತಿದ್ದ ಗುರುನ ಮನೆಯವರು ಚಂದ್ರಣ್ಣನನ್ನು ಸಾಂತ್ವನಿಸಿ ಕೈ ಹಿಡಿಯುತ್ತಾರೆ. ಸುಮಾರು ಒಂದು ತಿಂಗಳು ಚಂದ್ರಣ್ಣ ಗುರುಪ್ರಸಾದ್ ನ ಮನೆಯಲ್ಲಿಯೇ ಕಳೆಯುತ್ತಾರೆ.

ಆದರೆ ಛಲ ಬಿಡದ ಚಂದ್ರಣ್ಣ ಮತ್ತೊಮ್ಮೆ ಪಾಸ್ಪೋರ್ಟ್ ಮಾಡಿಸಲು  ಹಣವಿಲ್ಲದೇ  ಉದ್ಯೋಗದ  ಹುಡುಕಾಟದಲ್ಲಿದ್ದಾಗ  ಸ್ನೇಹಿತರೊಬ್ಬರು  ಚಂದ್ರಣ್ಣನಿಗೆ ಕರೆಮಾಡಿ ಮಂಗಳೂರಿನ ಪಬ್  ಒಂದರಲ್ಲಿ ಸೂಪರ್ ವೈಸರ್ ಕೆಲಸ ಖಾಲಿ ಇರುವ ಬಗ್ಗೆ ತಿಳಿಸುತ್ತಾರೆ. ಆದರೆ ಕೆಲಸಕ್ಕೆ ಸೇರಿದ ಒಂದು ತಿಂಗಳಿಗೆ ಸರಿಯಾಗಿ  ಪಬ್ ಮೇಲೆ ದಾಳಿ ನಡೆಯಿತು. ಚಂದ್ರಣ್ಣ ನ ಕೆಲಸವೂ ಹೋಯಿತು. ಮೊದಲೇ ಮಾನಸಿಕವಾಗಿ ಜರ್ಜರಿತನಾಗಿದ್ದ ಚಂದ್ರಣ್ಣನಿಗೆ ಗಾಯದ  ಮೇಲೆ  ಬರೆ ಎಳೆದಂತಾಯಿತು.
                                                                                                   
ಮಾನಸಿಕವಾಗಿ ಮತ್ತು ಅಸಹಾಯಕ ಸ್ಥಿತಿಯಲ್ಲಿ ನೋವಿನ ಮೇಲೆ ನೋವು ತಿಂದ   ಚಂದ್ರಣ್ಣ ನ ಪಾಲಿಗೆ ಕೊನೆಗೂ ದೇವರ ರೂಪದಲ್ಲಿ ಪ್ರತ್ಯಕ್ಷ ರಾದ ರೋಷನ್ ತೊಕ್ಕೊಟ್ಟು.

ಎಲ್ಲಾ ಘಟನೆಯನ್ನು ವಿವರಿಸುತ್ತಾರೆ. ಚಂದ್ರಣ್ಣನ ಎಲ್ಲಾ ಕಥೆ ಕೇಳಿದ  ರೋಷನ್  ತೊಕ್ಕೊಟ್ಟು ಭಾವುಕರಾಗಿ  ಚಂದ್ರಣ್ಣನಿಗೆ ಒಂದು  ಪರಿಹಾರವನ್ನು ನೀಡುತ್ತಾರೆ. ರೋಷನ್ ರವರು ನೀಡಿದ ‘ಆ ಒಂದು ಸಲಹೆಯನ್ನು’  ಕೇಳಿ ಒಂದು ಕ್ಷಣ ಚಂದ್ರಣ್ಣ ನ ಹೃದಯವೇ ಕಂಪಿಸುತ್ತದೆ.

ರೋಷನ್ ನೀಡಿದ ಆ ಸಲಹೆ ಯಾವುದು? ಜೀವವನ್ನೇ ಪಣಕ್ಕಿಡುವ ಆ ಒಂದು ಪರಿಹಾರ ಏನು ಎಂಬುದನ್ನು ಮುಂದಿನ ಭಾಗದಲ್ಲಿ ತಿಳಿಸುತ್ತೇನೆ.

ಈ ಅಂಕಣದ ಕುರಿತು  ನಿಮ್ಮ ಅಮೂಲ್ಯವಾದ ಸಲಹೆಗಳನ್ನು ನನಗೆ ಬರೆದು ಕಳುಹಿಸಿ-
ಪ್ರಶಾಂತ್ ಮುಡಾರು 8296141639


ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget