ಕಾರ್ಕಳ:ಪಾಸಿಟಿವ್ ಬಂದ ವರದಿ ಬಳಿಕ ನೆಗೆಟಿವ್.ವರದಿಯ ಸುತ್ತ ಅನುಮಾನದ ಹುತ್ತ!
ಕಾರ್ಕಳದ ಸಾಣೂರಿನ ಮಹಿಳೆ ಹಾಗೂ ಪುತ್ರನಿಗೆ ಕೊರೋನಾ ಪಾಸಿಟಿವ್ ಇದೆ ಎಂದು ವರದಿ ಬಂದ ಬಳಿಕ ಇದೀಗ ಕೊರೋನಾ ನೆಗೆಟಿವ್ ರಿಪೋರ್ಟ್ ಬಂದಿದ್ದು ಕೆಲದಿನಗಳ ಹಿಂದೆ ತಾಯಿ ಮಗನನ್ನು ಮರಳಿ ಮನೆಗೆ ಕಳುಹಿಸಲಾಗಿದ್ದು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.ಫಸ್ಟ್ ನ್ಯೂರೋ ಸಂಪರ್ಕದಿಂದ ಇಬ್ಬರಿಗೂ ಕೊರೋನಾ ಪಾಸಿಟಿವ್ ದೃಢವಾಗಿದ್ದು 15 ದಿನಗಳ ಬಳಿಕ ವರದಿ ನೆಗೆಟಿವ್ ಬಂದಿದೆ.
ಆದರೆ ಇದೀಗ ವರದಿ ನೆಗೆಟಿವ್ ಬಂದಿದ್ದು ಮರಳಿ ಹೋಮ್ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಆದರೆ ಇದೀಗ ವರದಿಯ ಬಗ್ಗೆ ಅನುಮಾನದ ವಾಸನೆ ಬರುತ್ತಿದ್ದು ಪಾಸಿಟಿವ್ ವರದಿ ಬಂದ ೧೫ ದಿನಗಳ ಒಳಗೆ ನೆಗೆಟಿವ್ ವರದಿ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತಿಂಗಳ ಹಿಂದೆ ಮಹಿಳೆಯಲ್ಲಿ ತಲೆನೆರಕ್ಕೆ ಸಂಭಂದಿಸಿದ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಮಂಗಳೂರು ಪಡೀಲ್ನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.ತಾಯಿಯ ಆರೈಕೆಗೆ ಮಗ ಇದ್ದುದರಿಂದ ಇಬ್ಬರೂ ಆಸ್ಪತ್ರೆಯಲ್ಲಿ ಇರಬೇಕಾಯಿತು.
ಇದಾದ ಕೆಲ ದಿನಗಳ ಬಳಿಕ ಅವರಿಬ್ಬರ ಗಂಟಲ ದ್ರವ ಪರೀಕ್ಷೆ ಸಂದರ್ಭದಲ್ಲಿ ಕೊರೊನಾ ವೈರಸ್ ಇರುವುದಾಗಿ ದೃಢಪಟ್ಟಿತ್ತು.ಹೆಚ್ಚಿನ ಚಿಕಿತ್ಸೆಗಾಗಿ ಅವರಿಬ್ಬರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೆನ್ಲಾಕ್ ಗೆ ದಾಖಲಾಗಿದ್ದ ಬಳಿಕ ಇದೀಗ ವರದಿ ನೆಗೆಟಿವ್ ಬಂದಿದೆ. ಈ ಬೆಳವಣಿಗೆಯ ಸುತ್ತ ಇದೀಗ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ. ಈ ಸಾಮಾಜಿಕ ಜಾಲತಾದಲ್ಲಿ ಚರ್ಚೆಗಳಾಗುತ್ತಿದ್ದು 'ವರದಿ'ಯ ಹಿಂದೆ ಬಹುದೊಡ್ಡ ಗೋಲ್ ಮಾಲ್ ಇದೆಯೇ ಎಂಬುದು ಬೆಳಕಿಗೆ ಬರಬೇಕಾಗಿದೆ.
Post a comment