ಕಾರ್ಕಳದಲ್ಲಿ ನಡೆಯುವ ದನ ಕಳ್ಳತನದಲ್ಲಿದೆಯೇ ದೊಡ್ಡ ‘ಪ್ರಭಾವಿ'ಗಳ ಕೈವಾಡ? ಚೆಕ್ ಪೋಸ್ಟ್ ಇದ್ದರೂ ಜಿಲ್ಲೆಯಿಂದ ಜಿಲ್ಲೆಗೆ ಸಾಗಾಟ ಹೇಗೆ?-Times OF karkala

ಕಾರ್ಕಳದಲ್ಲಿ ನಡೆಯುವ ದನ ಕಳ್ಳತನದಲ್ಲಿದೆಯೇ ದೊಡ್ಡ ‘ಪ್ರಭಾವಿ’ಗಳ ಕೈವಾಡ?        

ಚೆಕ್ ಪೋಸ್ಟ್ ಇದ್ದರೂ ಜಿಲ್ಲೆಯಿಂದ ಜಿಲ್ಲೆಗೆ ಸಾಗಾಟ ಹೇಗೆ?

ಕಾರ್ಕಳ: ಕೊರೊನಾ- ಲಾಕ್‌ಡೌನ್ ಇವ್ಯಾವುದೂ  ದನಕಳ್ಳತನ   ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಜನ ಸಾಮಾನ್ಯರಿಗೆ ಓಡಾಡಲು ಸಮಸ್ಯೆಯಾಗುವ ಈ ಸಂದರ್ಭ ದನಕಳ್ಳರ ಕಾರ್ಯ ರಾಜರೋಷವಾಗಿ ನಡೆಯುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.  

                                                  ಸಾಂದರ್ಭಿಕ ಚಿತ್ರ


ಕಾರ್ಕಳದ ಗುಂಡ್ಯಡ್ಕ, ನಕ್ರೆ, ಬೆರ್ಲಬೈಟ್ಟು ಹಾಗೂ ಪರಪು ಬಳಿ ದನಗಳನ್ನು ಹೊತ್ತೊಯ್ದ ಘಟನೆ ವರದಿಯಾಗಿದೆ. ಮಾರುತಿ ರಿಟ್ಜ್ ಕಾರಿನಲ್ಲಿ ಬರುವ ದನಗಳ್ಳರು ಮಾರಕಾಯುಧ ಝಳಪಿಸಿ ಮನೆಯವರನ್ನು ಬೆದರಿಸಿ ದನಗಳನ್ನು ರಾಜರೋಷವಗಿ ಎತ್ತಿಕೊಂಡು ಹೋಗುತ್ತಿದ್ದಾರೆ.


ಆದರೆ ಹೀಗೆ ಎತ್ತಿಕೊಂಡು ಹೋಗುವ ದನಗಳನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುತ್ತಿದ್ದು ಸಾಮಾನ್ಯ ಜನರು ಜಿಲ್ಲೆಯಿಂದ ಜಿಲ್ಲೆಗೆ ತೆರಳಬೇಕಾದರೆ ಹತ್ತು ಹಲವು ದಾಖಲೆಗಳನ್ನು ಕೇಳುವ
ಅಧಿಕಾರಿಗಳಿಗೆ ದನಗಳ್ಳರನ್ನು ಹಿಡಿಯುವುದು ಮಾತ್ರ ಕಷ್ಟವಾಯಿತೇ ಎಂಬ ಅನುಮಾನಗಳು ಮೂಡುತ್ತಿದೆ.

ಸಾಮಾನ್ಯ ಜನರು  ವಾಹನ ಯಾವುದೇ ಇದ್ದರೂ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹಾದು ಹೋಗಬೇಕಾದರೆ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಲಾಕ್‌ಡೌನ್ ಸಂದರ್ಭ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ತೆರಳಲು ಸಾಧ್ಯವಿಲ್ಲ.

ಆದರೆ ರಾತ್ರೋರಾತ್ರಿ ಎಷ್ಟೇ ಚೆಕ್‌ಪೋಸ್ಟ್ಗಳು ಇದ್ದರೂ ಆ ಚೆಕ್‌ಪೋಸ್ಟ್ಗಳಲ್ಲಿ ಪೊಲೀಸ್ ಸೇರಿದಂತೆ ಇಲಾಖಾ ಅಧಿಕಾರಿಗಳು ಕಾವಲಿದ್ದರೂ ದನಕಳ್ಳರು ಮಾತ್ರ ದನಗಳನ್ನು ಕಾರಿನಲ್ಲಿ ಹಾಕಿಕೊಂಡೇ ಚೆಕ್‌ಪೋಸ್ಟ್ಗಳಲ್ಲಿ ಹಾದು ಹೋಗುತ್ತಾರೆ. ಇಷ್ಟೆಲ್ಲ ಪ್ರಭಾವ ಬಳಸಿ ಒಳುನುಸುಳುವ ಮತ್ತು ಹೊರಹೋಗುವ  ದನಗಳ್ಳರಿಗೆ ಬೆನ್ನೆಲುಬಾಗಿ ನಿಂತ ಪ್ರಭಾವಿ ವ್ಯಕ್ತಿ ಯಾರು ಎಂಬ ಅನುಮಾನ ಮೂಡುತ್ತಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget