"14 ದಿನ ಕಳೆದರೂ ಕೆಲವರಿಗೆ ಕ್ವಾರಂಟೈನ್ ನಿಂದ ಮುಕ್ತಿ ಇಲ್ಲ"-Times Of karkala

"14 ದಿನ ಕಳೆದರೂ ಕೆಲವರಿಗೆ  ಕ್ವಾರಂಟೈನ್  ನಿಂದ ಮುಕ್ತಿ ಇಲ್ಲ"-Times Of karkala

ಉಡುಪಿ :ಹೊರಜಿಲ್ಲೆಯಿಂದ ಹೊರರಾಜ್ಯದಿಂದ ಸುಮಾರು 8020 ಮಂದಿ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದು ಅವರಲ್ಲಿ ಎಲ್ಲರೂ  14  ದಿನಕ್ಕೆ ಕ್ವಾರಂಟೈನ್ ನಿಂದ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಅದರಿಂದ ನಂತರವೂ ಕ್ವಾರಂಟೈನ್ ನಲ್ಲಿ ಮುಂದುವರಿಯಲು ಸಿದ್ಧರಿರಬೇಕು ಮತ್ತು ಸಹಕರಿಸಬೇಕು ಎಂದು ಉಡುಪಿ  ಜಿಲ್ಲಾಧಿಕಾರಿ ಡಿಸಿ ಜಗದೀಶ್ ಅಧಿಕಾರಿ ತಿಳಿಸಿದ್ದಾರೆ.8020 ರಲ್ಲಿ 3600  ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು ಆದರೆ ನಿರೀಕ್ಷೆಯ ಪ್ರಮಾಣದಲ್ಲಿ ಪರೀಕ್ಷೆಯ ವರದಿ ಬರುತ್ತಿಲ್ಲ. ಅಲ್ಲದೆ ಎಲ್ಲರ ಪರೀಕ್ಷೆಯೂ 14  ದಿನದ ಒಳಗೆ ನಡೆಯುವ ಸಾಧ್ಯತೆಯಿಲ್ಲ. 14  ದಿನದ ಒಳಗೆ ಎಲ್ಲರ ಮಾದರಿ ಬರುವುದು ತಡವಾಗಬಹುದು, ಅಂತಹವರ ಕ್ವಾರಂಟೈನ್ ಮುಂದುವರಿಸಬೇಕಾಗುತ್ತದೆ ಎಂದು ಹೇಳಿದರು.

ಈಗಾಗಲೇ ಮಣಿಪಾಲ ಕೆಎಂಸಿ ಮಂಗಳೂರು ಕೆ ಎಂ ಸಿ ಯೆನಪೋಯ ಆಸ್ಪತ್ರೆಗಳಿಗೆ ಮಾದರಿಗಳನ್ನು ಕಳುಹಿಸಲಾಗುತ್ತಿದೆ. ಮಂಗಳೂರಿನ ವೆನ್ಲಾಕ್  ಮತ್ತು ಬೆಂಗಳೂರಿನ ಪರೀಕ್ಷಾ ಕೇಂದ್ರದಲ್ಲಿ  ಮಾದರಿಗಳನ್ನು ಸ್ವೀಕರಿಸುತ್ತಿಲ್ಲ.  ಆದುದರಿಂದ ಬೇರೆ ಬೇರೆ ಜಿಲ್ಲೆಗಳಿಗೆ ಮಾದರಿಗಳನ್ನು ಕಳುಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget