“ಮಹಾರಾಷ್ಟ್ರದ ತುಳುವರು ಸುರಕ್ಷಿತವಾಗಿ ಮರಳಿ ಬರುವಂತೆ ಮಾಡಬೇಕು”
“ಆಶಾ ಕಾರ್ಯಕರ್ತರ ವೇತನವನ್ನು ಹೆಚ್ಚು ಮಾಡಲಿ”
-ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಆಗ್ರಹ
ವಿಶ್ವವನ್ನೇ ನಲುಗಿಸಿದ ಕೊರೊನಾ ರೋಗವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಅವಿರತ ಶ್ರಮಿಸುತ್ತಿರುವ
ಆಶಾ ಕಾರ್ಯಕರ್ತೆಯರ ವೇತನವನ್ನು ಲಾಕ್ಡೌನ್ ಮುಗಿದ ಬಳಿಕ ಏರಿಕೆ ಮಾಡುವಂತೆ ಯುವ ಕಾಂಗ್ರೆಸ್ ಅಧ್ಯಕ್ಷ
ಇನ್ನಾದ ದೀಪಕ್ ಕೋಟ್ಯಾನ್ ಆಗ್ರಹಿಸಿದ್ದಾರೆ.
ದೇಶದಲ್ಲಿ ಕೊರೊನಾ ಜ್ವರದ ಭೀತಿಯಲ್ಲಿ ಜನರೆಲ್ಲ ಮನೆ ಸೇರಿದ ಸಂದರ್ಭದಲ್ಲೂ ಕೂಡಾ ಆಶಾ ಕಾರ್ಯಕರ್ತೆಯರು
ತಮ್ಮ ಉದ್ಯೋಗವನ್ನು ಪರಿಣಾಮಕಾರಿಯಾಗಿ ಪ್ರಾಮಾಣಿಕವಾಗಿ ಮಾಡಿದ್ದಾರೆ. ಮನೆ ಮನೆಗೆ ಭೇಟಿಯ ಸಂದರ್ಭ
ಆಶಾ ಕಾರ್ಯಕರ್ತೆಯರಿಗೆ ಹಲವೆಡೆ ಬೆದರಿಕೆ ಒಡ್ಡಲಾಗಿತ್ತು. ಆದರೆ ಈ ಘಟನೆಗಳಿಂದ ವಿಚಲಿತರಾಗದೇ ಅವರು
ತಮ್ಮ ಕೆಲಸವನ್ನು ನಿಷ್ಟೆಯಿಂದ ಮಾಡಿದ್ದಾರೆ.
ಹಲವರ ಆರೋಗ್ಯ ಕಾಪಾಡಲು ಅವಿರತ ಶ್ರಮಿಸಿದ್ದಾರೆ.
ಇಂತಹ ಮಾನವೀಯ ಕಾರ್ಯ ಮಾಡಿದ ಆಶಾ ಕಾರ್ಯಕರ್ತರ ಸೇವೆಯನ್ನು ಸರಕಾರ ಬೆಂಬಲಿಸಬೇಕು. ಲಾಕ್ಡೌನ್ ಮುಗಿದ
ಬಳಿಕ ಅವರ ವೇತನ ಏರಿಕೆ ಮಾಡಲು ಕ್ರಮಕೈಗೊಳ್ಳಬೇಕು ಎಂದಿದ್ದಾರೆ. ಹೊರನಾಡಿನ ತುಳುವರಿಗೆ ಗೌರವ ನೀಡಬೇಕು:
ತುಳುನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಗಳಿಗೆ ಹೊರನಾಡಿನ ತುಳುವರ ಸಹಾಯ ಅಪಾರ. ಈ ವಿಚಾರ
ಎಲ್ಲರಿಗೂ ತಿಳಿದಿರುವಂತಹದ್ದು. ಕೊರೊನಾ ಜ್ವರದ ಹಾವಳಿ ಮಹಾರಾಷ್ಟçದಲ್ಲಿ ಬಹಳಷ್ಟು ಹೆಚ್ಚಿದೆ. ಈ
ಸಂದರ್ಭ ಅಲ್ಲಿಯ ತುಳುವರು ಸುರಕ್ಷಿತವಾಗಿ ಹುಟ್ಟೂರಿಗೆ ಬರುವಂತಾಗಬೇಕು. ಅವರೆಲ್ಲರನ್ನೂ ಕೂಡ ನಾವು
ಗೌರವಯುತವಾಗಿ ಕಾಣಬೇಕಿದೆ ಎಂದು ದೀಪಕ್ ಕೋಟ್ಯಾನ್ ತಿಳಿಸಿದ್ದಾರೆ.
Post a comment