ದೇಶದ್ರೋಹ ಕೃತ್ಯವೆಸಗಿದ್ದ ಡಕಾಯಿತಿ ತಂಡವನ್ನು ಹೆಡೆಮುರಿಕಟ್ಟಿದ ದಯಾನಾಯಕ್-Times Of karkala

ದೇಶದ್ರೋಹ ಕೃತ್ಯವೆಸಗಿದ್ದ ಡಕಾಯಿತಿ ತಂಡವನ್ನು ಹೆಡೆಮುರಿಕಟ್ಟಿದ ದಯಾನಾಯಕ್ 

ಮುಂಬೈಯಲ್ಲಿ ಜುಹೂ ಎಟಿಎಸ್‌ನ ಮುಖ್ಯಾಧಿಕಾರಿಯಾಗಿರುವ ದಯಾನಾಯಕ್ ನೇತೃತ್ವದ ತಂಡವು ದೇಶದ್ರೋಹ ಕೃತ್ಯವೆಸಗುತ್ತಿದ್ದ ಡಕಾಯಿತಿ ತಂಡವನ್ನು ಬಂಧಿಸಿದ್ದಾರೆ.ಮುಂಬೈ  ಜುಹೂವಿನಲ್ಲಿರುವ ಎಟಿಎಸ್ ತಂಡವು ಅಪಾಯಕಾರಿ ಚಟುವಟಿಕೆ ಮಾಡುತ್ತಿದ್ದ ದಲ್ವೀರ್
ಸಿಂಗ್ ರಾವತ್ ಅಲಿಯಾಸ್ ಪಪ್ಪು(೩೮ವ) ಎಂಬ ಡಕಾಯಿತ ನನ್ನ ಬಂಧಿಸಿದೆ. ಈತ ೩೫ಕ್ಕಿಂತಲೂ ಮಿಕ್ಕಿದ ಪ್ರಕರಣದಲ್ಲಿ ಭಾಗಿಯಾಗಿದ್ದನೆನ್ನಲಾಗಿದೆ. ಮುಂಬೈನಲ್ಲಿ ಡಕಾಯಿತ ಮಾಡಿದ ಬಳಿಕ ಆ ಹಣ ಹಾಗೂ ಚಿನ್ನಾಭರಣಗಳನ್ನು ನೇಪಾಳದ ಮಾವೋವಾದಿಗಳಿಗೆ ನೀಡುತ್ತಿದ್ದ ನೆನ್ನಲಾಗಿದೆ. ಈತ ೧೫ ಕೆ.ಜಿ ಚಿನ್ನವನ್ನು ವಿಜಯವಾಡದ ಚಿನ್ನಾಭರಣ ಮಳಿಗೆಯಿಂದ ೨೦೧೭ನೇ ಸಾಲಿನಲ್ಲಿ ಕಳ್ಳತನ
ಮಾಡಿದ ಬಳಿಕ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದರು.

ಈತನಿಂದ ಪಿಸ್ತೂಲ್ ಹಾಗೂ ೩ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಅಂಧೇರಿ (ಪಶ್ಚಿಮ)ದ ಪೆಟ್ರೋಲ್ ಬಂಕ್‌ನಲ್ಲಿ ಡಕಾಯಿತಿ ಮಾಡಲು ಬಂದ ಸಮಯದಲ್ಲಿ ಮಾಹಿತಿ ತಿಳಿದ ಎಟಿಎಸ್ ಈತನನ್ನು ಬಂಧಿಸಿದೆ.

 ಪೆಟ್ರೋಲ್ ಬಂಕ್‌ನ್ನು ಡಕಾಯಿತಿಯಾಗಿದ್ದ ಬಳಿಕ ಈತ ನೇಪಾಳಕ್ಕೆ ಪಲಾಯನ ಮಾಡಲು ಯತ್ನಿಸಿದ್ದನೆನ್ನಲಾಗಿದೆ. ಆದರೆ ಎಣ್ಣೆಹೊಳೆಯ ದಯಾನಾಯಕ್ ನೇತೃತ್ವದ ತಂಡ ಈ ಬಗ್ಗೆ
ಮಾಹಿತಿ ಕಲೆ ಹಾಕಿ ಆತನನ್ನು ಬಂಧಿಸುವ ಮೂಲಕ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget