►►17 ವರ್ಷದಲ್ಲಿ
17 ಭಾರಿ ಎತ್ತಂಗಡಿ.
►►ಅಕ್ರಮ ಬಯಲಿಗೆಳೆದಿದ್ದ
ಅರಣ್ಯಾಧಿಕಾರಿಯ ವಿರುಧ್ಧ ಸಂಚು.
►►ಆರ್ ಎಫ್ ಓ
ಮುನಿರಾಜು ಪರ ಪರಿಸರ ಪ್ರೇಮಿಗಳಿಂದ ಇಮೇಲ್ ಫೋನ್ ಕಾಲ್ಅಭಿಯಾನ.
ಹೆಬ್ರಿಯ ಆರ್ಎಫ್ಓ
ಮುನಿರಾಜು ವರ್ಗಾವಣೆ ರದ್ದು ಪಡಿಸುವಂತೆ ಪರಿಸರ ಪ್ರೇಮಿಗಳು ‘ಇಮೇಲ್ ಹಾಗೂ ಫೋನ್ ಕಾಲ್ ಅಭಿಯಾನ ಪ್ರಾರಂಭಿಸಿದ್ದಾರೆ.
ಮಂಗಳೂರಿನ ಎನ್ಇಸಿಎಫ್ ಸಂಘಟನೆಯ ಸದಸ್ಯರು ಗುರುವಾರ
ಅರಣ್ಯ ಸಚಿವ ಆನಂಧ್ ಸಿಂಗ್ ಹಾಗೂ ಇಲಾಖೇಯ ಹಿರಿಯ ಅಧಿಕಾರಿಗಳಿಗೆ ಕರೆಮಾಡಿ ಪ್ರಾಮಾಣಿಕ ಅಧಿಕಾರಿಯ
ವರ್ಗಾವಣೆಯ ವಿರುಧ್ಧ ಧ್ವನಿ ಎತ್ತಿದ್ದಾರೆ.
ಹೆಬ್ರಿಯ ಎನ್ಇಸಿಎಫ್
ಸಂಘಟನೆಯ ಶಶಿಧರ ಶೆಟ್ಟಿ ಮಾತನಾಡಿ ಹೆಬ್ರಿಯ ಆರ್ಆರ್ಎಫ್ ಆಗಿದ್ದ ಮುನಿರಾಜು ಅರಣ್ಯ ಒತ್ತುವರಿ ಮರಗಳ
ಕಳ್ಳ ಸಾಗಣಿಗೆ ಪ್ರಾಣಿ ಬೇಟೆ ಗೆ ಕಡಿವಾಣ ಹಾಕಿದ್ದರು.
ಮುನಿರಾಜುರವರ
17 ವರ್ಷಗಳ ಸೇವಾವಧಿಯಲ್ಲಿ 17 ಭಾರಿ ಎತ್ತಂಗಡಿ ಮಾಡಲಾಗಿದೆ. ದಕ್ಷ ಅಧಿಕಾರಿಗಳ ವರ್ಗಾವಣೆ ಮೂಲಕ
ಕೈ ಕಟ್ಟಿ ಹಾಕುವ ಪ್ರಯತ್ನಗಳು ನಡೆಯುತ್ತಿದೆ. ಪರಿಸರವನ್ನು ಉಳೀಸಿ ಬೆಳೆಸುವುದು ಪ್ರಜ್ನಾವಂತ ನಾಗರಿಕರ
ಕರ್ತವ್ಯ. ಎನ್ ಇ ಸಿ ಎಫ್ ಸಂಘಟನೆ ಆರಂಭಿಕ ಹಂತವಾಗಿ ಇಮೇಲ್ ಹಾಘೂ ಪೋನ್ ಕಾಲ್ ಅಭಿಯಾನ ಪ್ರಾರಂಭಿಸಿದೆ.
ಮುಂದೆ ಪ್ರಧಾನಿಯವರಿಗೆ ಪತ್ರ ಬರೆಯಲಾಗುವುದು ಎಂದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment