ಕ್ವಾರಂಟೈನ್ ನಲ್ಲಿರುವ ಎಲ್ಲರಿಗೂ ಪ್ರತಿದಿನ ಊಟ ತಿಂಡಿ ಪೂರೈಸಿದ ಹಿತೇಶ್ ಶೆಟ್ಟಿಯವರಿಗೆ ಸನ್ಮಾನ-Times OF karkala
ಕಾರ್ಕಳ:ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಿಂದ ಕಾರ್ಕಳಕ್ಕೆ ಬಂದು ಕ್ವಾರಂಟೈನ್ ಒಂದು ತಂಡವನ್ನು ಇಂದು ಬೀಳ್ಕೊಡಲಾಯಿತು. ಕಾರ್ಕಳದ ಬಜಗೋಳಿ ಹಾಗೂ ಮೊರಾರ್ಜಿ ವಸತಿಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದ ಒಂದು ತಂಡವನ್ನು ಸಸಿ ಕೊಡುವುದರ ಮೂಲಕ ಅವರನ್ನು ಮನೆಗೆ ಕಳುಹಿಸಲಾಯಿತು.
ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದ ಹೊರ ರಾಜ್ಯದಿಂದ ಬಂದ ಕಾರ್ಕಳದ ನಿವಾಸಿಗಳಿಗೆ 15 ದಿನವೂ ಊಟ ಹಾಗೂ ತಿಂಡಿಯನ್ನು ವಿತರಿಸಿದ್ದ ಕಾರ್ಕಳ ಇಂಜಿನಿಯರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಹಿತೇಶ್ ಶೆಟ್ಟಿ ಯವರನ್ನು ಕ್ವಾರಂಟೈನ್ ನಲ್ಲಿದ್ದವರು ಹಾಗೂ ಶಾಸಕರ ವತಿಯಿಂದ ಸನ್ಮಾನಿಸಲಾಯಿತು.
Post a comment