ಕಾರ್ಕಳ/ಇರ್ವತ್ತೂರು:ಅರ್ಧಕ್ಕೆ ಕೈ ಬಿಟ್ಟ ಕಾಮಗಾರಿ,ಸರಣಿ ಅಪಘಾತಗಳ ತಾಣ-Times of karkala

ಕಾರ್ಕಳ ತಾಲೂಕಿನ ಮುರತ್ತಂಗಡಿ - ಇರ್ವತ್ತೂರು ರಸ್ತೆ ಕಾಂಕ್ರಿಟೀಕರಣಗೊಂಡು ವರ್ಷವೇ ಉರುಳಿದೆ. ಆದರೆ ಮುರತ್ತಂಗಡಿಯಿಂದ 400 ಮೀಟರ್ ನಷ್ಟು ಮುಂದಕ್ಕೆ ಇರ್ವತ್ತೂರು ಕಡೆಗೆ ಸಾಗುವಾಗ ಸುಮಾರು ಇಪ್ಪತ್ತು ಮೀಟರ್ ನಷ್ಟು ದೂರಕ್ಕೆ ರಸ್ತೆ ಕಾಂಕ್ರೀಟಿಕರಣ ಮಾಡದೆ ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟಿದ್ದು ಇದಕ್ಕೆ ಮೆಸ್ಕಾಂ ಕೂಡ ಕಾರಣ ಎನ್ನಲಾಗಿದೆ. 


ರಸ್ತೆ ಮಧ್ಯೆ ಇರುವ ಕಂಬವನ್ನು ತೆರವುಗೊಳಿಸದೆ ಮೆಸ್ಕಾಂ ದಿವ್ಯ ನಿರ್ಲಕ್ಷ್ಯ ತೋರಿದ್ದು ಈ ಕಾಮಗಾರಿ ಅರ್ಧಕ್ಕೆ ನಿಲ್ಲಲು ಮುಖ್ಯ ಕಾರಣ ಎನ್ನಲಾಗಿದೆ.

ಮಾಧ್ಯಮದಲ್ಲಿ ಈ ಬಗ್ಗೆ ವರದಿ ಬಂದ ನಂತರ ತಡವಾಗಿ ಎಚ್ಚೆತ್ತುಕೊಂಡಿದ್ದ ಮೆಸ್ಕಾಂ ಕಂಬವನ್ನು ತೆರವುಗೊಳಿಸಿದ್ದರೂ ಕೂಡ ಅಪಾಯಕಾರಿ ಗುಂಡಿ ಇರುವ ಪ್ರದೇಶವನ್ನು  ಕಾಂಕ್ರೀಟಿಕರಣಗೊಳಿಸಲು ಗುತ್ತಿಗೆದಾರರು ಮನಸ್ಸು ಮಾಡಿಲ್ಲ.
ವರ್ಷದ ನಂತರವೂ ಕೂಡ ಇದು ಅಪಾಯಕಾರಿಯಾಗಿ ವಾಹನ ಸವಾರರಿಗೆ ಪರಿಣಮಿಸಿದ್ದರೂ ಕೂಡ ಶಾಸಕರಾಗಲಿ ಇತರ ಜನಪ್ರತಿನಿಧಿಗಳಾಗಲಿ ಅಥವಾ ಗುತ್ತಿಗೆದಾರರು ಗಮನಹರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿದ್ದು ಇಲ್ಲಿ ನೀರು ನಿಂತರೆ ರಸ್ತೆಯಲ್ಲಿನ ಗುಂಡಿ ತಿಳಿಯದೆ ವಾಹನಗಳು ವೇಗವಾಗಿ ಹಾದು ಹೋದಲ್ಲಿ ವಾಹನ ನಿಯಂತ್ರಣ ತಪ್ಪಿ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

ಈಗಾಗಲೇ ಹಲವು ಬೈಕ್ ಸವಾರರು ಇಲ್ಲಿ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ ಕೂಡಲೇ ಇದರ ಬಗ್ಗೆ ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕಾಮಗಾರಿಯನ್ನು ಸಂಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಒತ್ತಡ ಹೇರುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget