ಕಾರ್ಕಳದಲ್ಲಿ ಲಾಕ್ ಡೌನ್ ಇದ್ದರೂ ಶಾಲೆ ಓಪನ್:ವರದಿ ಮಾಡಿದ ಪತ್ರಕರ್ತನ ಮೇಲೆಯೇ ಕೇಸ್!

ಕಾರ್ಕಳದಲ್ಲಿ ಲಾಕ್ ಡೌನ್ ಇದ್ದರೂ ಶಾಲೆ ಓಪನ್:ವರದಿ ಮಾಡಿದ ಪತ್ರಕರ್ತನ ಮೇಲೆಯೇ  ಕೇಸ್!

ಕಾರ್ಕಳ: ಲಾಕ್ ಡೌನ್ ನಿಂದಾಗಿ ಇಡೀ ದೇಶವೇ ಸ್ತಬ್ದವಾಗಿದ್ದು ಬಹುತೇಕ ಚಟುವಟಿಕೆಗಳು ನಿಂತುಹೋಗಿದೆ. ಶಾಲೆ ಕಾಲೇಜುಗಳೂ ಕೂಡಾ ಮುಚ್ಚಿ ಹೋಗಿದ್ದು ಶಾಲೆಗಳನ್ನು ತೆರೆಯದಂತೆ ಶಿಕ್ಷಣಾಧಿಕಾರಿಗಳಿಗೆ ಹಾಗೂ ಸಂಭಂದ ಪಟ್ಟ ಅಧಿಕಾರಿಗಳಿಗೆ   ಆದೇಶ ಹೊರಡಿಸಲಾಗಿದೆ.


ಕಾರ್ಕಳ ತಾಲೂಕಿನ ಬೋರ್ಡ್ ಹೈಸ್ಕೂಲ್ ನಲ್ಲಿ ಎಸೆಸೆಲ್ಸಿ ತರಗತಿಗಳನ್ನು ನಡೆಸಿದ್ದನ್ನು  ವರದಿ ಮಾಡಿದ ಪತ್ರಕರ್ತನ ಮೇಲೆಯೇ ಕೇಸ್ ಮಾಡಿರುವ  ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಬೋರ್ಡ್ ಹೈಸ್ಕೊಲ್ ನಲ್ಲಿ ಎಸೆಸ್ಸೆಲ್ಸಿ ತರಗತಿಗಳನ್ನು ನಡೆಸಲಾಗಿತ್ತು. ಲಾಕ್ ಡೌನ್ ಇದ್ದರೂ ವಿದ್ಯಾರ್ಥಿಗಳು ಗೂಡ್ಸ್ ವಾಹನಗಳಲ್ಲಿ, ಅಲ್ಲದೆ ದ್ವಿಚಕ್ರವಾಹನಗಳಲ್ಲಿ ಸಾಮಾಜಿಕ ಅಂತರವನ್ನು ಮರೆತು  ಲೆಕ್ಕಕ್ಕಿಂತ ಹೆಚ್ಚು ಜನರನ್ನು ಹಾಕಿಕೊಂಡು ಬಂದಿದ್ದರು. ಇದನ್ನು ವರದಿ ಮಾಡಿದ ಪತ್ರಕರ್ತ ಸಂಪತ್ ನಾಯಕ್ ಎಂಬುವವರ ಮೇಲೆ  ಮೇಲೆ ಕೇಸು ದಾಖಲಾಗಿದೆ.

ಕನ್ನಡ ಪ್ರಭಾ ಪತ್ರಿಕೆಯಲ್ಲಿ ವರದಿಗಾರರಾಗಿರುವ ಸಂಪತ್ ನಾಯಕ್  ಶಾಲೆ  ತೆರೆದು ತರಗತಿಗಳನ್ನು ನಡೆಸುವುದನ್ನು ಸಾಕ್ಷಿ ಸಮೇತ ವರದಿ ಮಾಡಿದ್ದರು. ಆಗ ಮುಖ್ಯೋಪಾದ್ಯಾಯರು ಶಿಕ್ಷಣಾಧಿಕಾರಿಗಳ ಅನುಮತಿಯ ಮೇರೆಗೆ ಶಾಲೆ ಶಾಲೆ ನಡೆಸುತ್ತಿರುವುದಾಗಿ ಹೇಳಿದ್ದರು.

ಆದರೆ ಇದೀಗ ಮುಖ್ಯೋಪಾಧ್ಯಾಯರಾದ ಮುರುಳೀಧರ ಪ್ರಭು ಎಂಬುವವರು ಪತ್ರಕರ್ತ ಸಂಪತ್ ನಾಯಕ್ ಮೇಲೆಯೇ ಕೇಸ್ ದಾಖಲಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನೈಜತೆಯನ್ನು ವರದಿ ಮಾಡಿದ ಪತ್ರಕರ್ತನ ಮೇಲೆಯೇ ಕೇಸ್ ದಾಖಲಿಸಿರುವುದು ಮಾಧ್ಯಮ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಕಾರ್ಕಳ ಪತ್ರಕರ್ತರ ಸಂಘದಿಂದ ಖಂಡನೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget