ಕಾರ್ಕಳ ಪುರಸಭೆಯಿಂದ ಹಗಲು ದರೋಡೆ;ದುಪ್ಪಟ್ಟು ತೆರಿಗೆ ವಸೂಲಿ:ಕಾಂಗ್ರೆಸ್ ನಿಂದ ಖಂಡನೆ:ಜಿಲ್ಲಾಧಿಕಾರಿಗೆ ಮನವಿ -Times Of karala
ಜನರು ಈಗಾಗಲೇ ಕೊರೊನ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದು,ಆದರೆ ಕಾರ್ಕಳ ಪುರಸಭೆ ಮಾತ್ರ ಇದ್ಯಾವುದರ ಪರಿವೆಯೂ ಇಲ್ಲದೆ ತೆರಿಗೆ ದುಪ್ಪಟ್ಟು ಮಾಡಿ ಅಮಾನವೀಯವಾಗಿ ವರ್ತಿಸಿದೆ.
ಬಹುತೇಕ ಸಣ್ಣಪುಟ್ಟ ಉದ್ಯಮಗಳು ಮುಚ್ಚಿ ಹೋಗಿದೆ. ದಿನನಿತ್ಯ ಕೂಲಿ ಕೆಲಸಗಾರರೂ ಕೂಡಾ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ ಇದರ ಮಧ್ಯೆ ಕಾರ್ಕಳ ಪುರಸಭೆ ಮಾತ್ರ ಮನೆ ತೆರಿಗೆ ಕಟ್ಟಡ ತೆರಿಗೆ ಹಾಗೂ ಇನ್ನಿತರ ತೆರಿಗೆಗಳನ್ನು ಜನರಿಗೆ ಸೂಚನೆಯನ್ನೂ ನೀಡದೆ ದುಪ್ಪಟ್ಟುಗೊಳಿಸಿದೆ.
ಅಲ್ಲದೆ ಕಾರ್ಕಳದ ಒಳಚರಂಡಿಯ ಕಾಮಗಾರಿಯೂ ನಿಧಾನಗತಿಯಲ್ಲಿ ನಡೆಸುತ್ತಿದ್ದು ಇದರಿಂದಾಗಿ ಜನರ ನಿತ್ಯ ಕೆಲಸಗಳಿಗೆ ಅಡಚಣೆಯುಂಟಾಗಿದೆ. ಅತ್ತ ಸಂಪಾದನೆ ಯೂ ಇಲ್ಲದೆ ಹೈರಾಣಾಗಿರುವ ಜನರಿಗೆ ತೆರಿಗೆಯ ಬರೆಯನ್ನು ಎಳೆಯದಂತೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಪುರಸಭಾ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಕಳ ನಗರ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಮಾಜಿ ಅಧ್ಯಕ್ಷ ಸುಭಿತ್ ಎನ್ ಆರ್,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಬಂಗೇರ , ನಗರ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕಾಂತಿ ಶೆಟ್ಟಿ, ಪುರಸಭಾ ಸದಸ್ಯರುಗಳಾದ ಅಷ್ಪಕ್ ಅಹಮದ್, ಸೀತಾರಾಮ್ ದೇವಾಡಿಗ, ಶುಭದ್ ರಾವ್, ,ಸೋಮನಾಥ್ ಪ್ರಭು,ಹರೀಶ್ ದೇವಾಡಿಗ,ವಂದನಾ ಜತ್ತನ್ನ, ನಳಿನಿ ಎಸ್. ಆಚಾರ್ಯ,ನವೀನ ದೇವಾಡಿಗ, ಆರೀಫ್ ಕಲ್ಲೊಟ್ಟೆ ಸತೀಶ್ ಕಾರ್ಕಳ, ಪ್ರಭಾ , ವಿವೇಕಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
Post a comment