ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇಬ್ಬರಲ್ಲಿ ಕೊರೋನಾ ಇರುವುದು ದೃಢವಾಗಿದೆ. ಫಸ್ಟ್ ನ್ಯೂರೋ ಸಂಪರ್ಕದಿಂದ ಈ ಸೋಂಕು ತಗುಲಿದ್ದು ಇವರನ್ನು ಮಂಗಳೂರಿನಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು.
ರೋಗಿ ಸಂಖ್ಯೆ 507 ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಸುಮಾರು 50 ವರ್ಷದ ಮಹಿಳೆಯ 12ನೇ ದಿನದ ಗಂಟಲು ಪರೀಕ್ಷೆ ವರದಿ ಸ್ವೀಕೃತವಾಗಿದ್ದು ಇವರಿಗೆ ಕೊರೊನಾ ಕಂಡುಬಂದಿದೆ ಹಾಗೂ ಇವರ ಸಂಪರ್ಕದಲ್ಲಿದ್ದು ಸುಮಾರು ಇಪ್ಪತ್ತಾರು ವರ್ಷದ ವ್ಯಕ್ತಿಯ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿದೆ.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇವರನ್ನು ಮಂಗಳೂರಿನಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಹೀಗಾಗಿ ಉಡುಪಿ ಮೂಲದವರಾದರೂ ಇವರು ದ.ಕ ಜಿಲ್ಲೆಯ ಕೊರೊನಾ ಪ್ರಕರಣಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Post a comment