ಕಾರ್ಕಳ:ನಕ್ಸಲ್ ಮುಖ್ಯ ಅರಕ್ಷಕನಿಂದಲೇ ಬಾಂಬ್ ಬೆದರಿಕೆ-Times of karkala

ನಕ್ಸಲ್‌ ಮುಖ್ಯ ಆರಕ್ಷಕ ಆನಂದ ಎಸ್‌. ಪಾಟೀಲ ಎಂಬವರು ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ಸ್ಫೋಟಕವನ್ನಿಟ್ಟು ಸ್ಫೋಟಿಸುವುದಾಗಿ ಪಹರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಘಟನೆ ಶುಕ್ರವಾರ ಎಎನ್‌ಎಫ್‌ ಕ್ಯಾಂಪ್‌ನಲ್ಲಿ ನಡೆದಿದೆ.


ನಕ್ಸಲ್‌ ಮುಖ್ಯ ಆರಕ್ಷಕ ಆನಂದ ಎಂಬವರು ಅಂಜಿ ಎಂಬ ಹೆಸರಿನ ಶ್ವಾನವನ್ನು ಹಿಡಿದುಕೊಂಡು ಕಾರ್ಕಳ ಎಎನ್‌ಎಫ್‌ ಕ್ಯಾಂಪ್‌ನ ಗೇಟ್‌ನ ಎದುರುಗಡೆ ಅಡ್ಡಲಾಗಿ ಕುತಳಿತುಕೊಂಡು, ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಇಲಾಖಾ ಪಿಸ್ತೂಲನ್ನು ಹೊರತೆಗೆದು ಯಾವುದೋ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೈಷಮ್ಯದಿಂದ ಗೇಟ್‌ ಬಳಿ ಪಹರೆ ಕರ್ತವ್ಯದಲ್ಲಿದ್ದ ಸಿಬಂದಿಗಳಿಗೆ ಬೆದರಿಕೆ ಹಾಕಿದ್ದಾರೆ.

ಬಳಿಕ ಪೊಲೀಸ್‌ ನಿರೀಕ್ಷಕಾದ ಸುನಿಲ್‌ ಅವರು ಆನಂದ ಅವರನ್ನು ಸಮಾಧಾನಪಡಿಸಿ ಪಿಸ್ತೂಲನ್ನು ವಶಕ್ಕೆ ತೆಗೆದುಕೊಂಡರು.ಇದಾದ ಬಳಿಕ ಕುಪಿತಗೊಂಡ ಆರೋಪಿ ಆನಂದ್‌, ಎಲ್ಲಿಂದಲೋ ತಂದ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ತನ್ನ ಚೀಲದಲ್ಲಿಟ್ಟಿಕೊಂಡಿದ್ದು, ಅದನ್ನು ಎಎನ್‌ಎಫ್‌ ಕ್ಯಾಂಪ್‌ನ ಮುಂಭಾಗದ ಗೇಟ್‌ ಬಳಿ ಕುಳಿತುಕೊಂಡು ಸ್ಫೋಟಕಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget