ಕಾರ್ಕಳ:ಕೊರೋನಾ ಇರುವುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳು:ಚಿತ್ರ ಹಿಂಸೆ ಅನುಭವಿಸುತ್ತಿರುವ ಕುಟುಂಬಸ್ಥರು-Times Of karkala

ಕಾರ್ಕಳ:ಕೊರೋನಾ ಇರುವುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳು:ಚಿತ್ರ ಹಿಂಸೆ ಅನುಭವಿಸುತ್ತಿರುವ ಕುಟುಂಬಸ್ಥರು-Times Of karkala
ಕಾರ್ಕಳ:ತಾಲೂಕಿನ ಈದು ಗ್ರಾಮದ ನೂರಾಳ್ ಬೆಟ್ಟು ಕಲ್ಲೆಚ್ಚಿಯ  ವ್ಯಕ್ತಿಯೋರ್ವರಿಗೆ ಕೊರೊನಾ ಇರುವುದಾಗಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು ಇದರಿಂದಾಗಿ ಆ ವ್ಯಕ್ತಿ ಹಾಗೂ ಅವರ ಮನೆಯವರು ಚಿತ್ರ ಹಿಂಸೆ ಅನುಭವಿಸುತ್ತಿದ್ದಾರೆ.


ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ”ಇತ್ತೀಚೆಗೆ ಬಂಟ್ವಾಳದಲ್ಲಿ ಕೊರೋನಾದಿಂದಾಗಿ ಮೃತಪಟ್ಟ ಮಹಿಳೆ ಹಾಗೂ ಕಲ್ಲೆಚ್ಚಿಯ ನಿವಾಸಿಗೂ ಸಂಭಂದ ಇದ್ದು ಇವರಿಗೂ ಕೊರೋನಾ ಬಂದಿದೆ” ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ.

ಇದರಿಂದಾಗಿ ಕುಟುಂಬದ ಸದಸ್ಯರು ಅಂಗಡಿಗೆ  ತೆರಳಿದಾಗ ಪ್ರತ್ಯೇಕವಾಗಿ ನೋಡುವುದು,ಸಾರ್ವಜನಿಕರು ಸ್ಥಳೀಯರು ಸರಿಯಾಗಿ ಮಾತನಾಡದಿರುವುದು,ಆಟೋ ಚಾಲಕರು ಕೂಡಾ ಆಟೋದಲ್ಲಿ ಕೂರಿಸಲು ಹಿಂದೇಟು ಹಾಕುತ್ತಿದ್ದಾರೆ.ಇದರಿಂದಾಗಿ ಕುಟುಂಬಸ್ಥರು ಮಾನಸಿಕವಾಗಿ ತುಂಬಾ ನೊಂದು ಕೊಂಡಿದ್ದಾರೆ.


ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget