ಕಾರ್ಕಳ ನಗರ ಕಾಂಗ್ರೆಸ್ ವತಿಯಿಂದ 1,000ಕ್ಕೂ ಹೆಚ್ಚು ಮನೆಗಳಿಗೆ ಕಿಟ್ ವಿತರಣೆ-Times Of karkala

ಕಾರ್ಕಳ:ನಗರ ಕಾಂಗ್ರೆಸ್ ವತಿಯಿಂದ 1,000ಕ್ಕೂ ಹೆಚ್ಚು ಮನೆಗಳಿಗೆ ಕಿಟ್ ವಿತರಣೆ-Times Of karkala


ಕಾರ್ಕಳ:ದೇಶದೆಲ್ಲೆಡೆ ಲಾಕ್ ಡೌನ್ ವಿಸ್ತರಣೆಯಾಗಿದ್ದು ಬಡ ಹಾಗೂ ಮಾಧ್ಯಮ ವರ್ಗದ ಜನರು  ತತ್ತರಿಸಿಹೋಗಿದ್ದಾರೆ. ಈ ಮಧ್ಯೆ ಸಹೃದಯಿ ದಾನಿಗಳು ಕಷ್ಟದಲ್ಲಿರುವವರಿಗೆ ನೆರವಿನ ಹಸ್ತವನ್ನು ಚಾಚುತ್ತಿದ್ದಾರೆ. ಕಾರ್ಕಳ ನಗರ ಕಾಂಗ್ರೆಸ್ ವತಿಯಿಂದ ಸುಮಾರು 1,000ಕ್ಕೂ ಹೆಚ್ಚು ಮನೆಗಳಿಗೆ ದಿನಸಿ ವಸ್ತುಗಳ ಕಿಟ್ ವಿತರಿಸಲಾಗಿದೆ.


ಕಾರ್ಕಳ ಬಂಗ್ಲೆಗುಡ್ಡೆ ಯ ಕಜೆ 1 ನೇ ವಾರ್ಡ್ ನ ಪುರಸಭಾ ಸದಸ್ಯ ಅಶ್ಪಕ್ ಅಹಮ್ಮದ್ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರಿಗೆ ಧನಸಹಾಯ ಮತ್ತು ಅಗತ್ಯ ಆಹಾರ ಸಾಮಗ್ರಿಗಳ ಕಿಟ್ಟ್ ವಿತರಿಸಿದರು

ವಾರ್ಡ್ ಸಂಖ್ಯೆ 13 ರ ಕಾಂಗ್ರೆಸ್ ನಾಯಕ ಮಹೇಶ್ ಕೆ ಪ್ರಭುರವರ ನೇತ್ರತ್ವದಲ್ಲಿ ಫಿಶರೀಸ್ ಆಫೀಸ್ ಬಳಿಯ ಐದು ಸೆಂಟ್ಸ್ ಕಾಲನಿಯ ಪರಿಸರದ ಸುಮಾರು ಐವತ್ತು ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು
ಕಾರ್ಕಳ ಪುರಸಭೆಯ ವಾರ್ಡ್ ಸಂಖ್ಯೆ 15 ರಲ್ಲಿ ಆನೆಕೆರೆ ನಾರಾಯಣ ಗುರುನಗರ ಹಾಗೂ ಕೋಟೆಕಣಿ ದಾನಶಾಲೆ, ಪರಿಸರದಲ್ಲಿ ಸುಮಾರು 50 ಮನೆಗಳಿಗೆ ಪುರಸಭಾ ಸದಸ್ಯ ಶುಭದ ರಾವ್ ಮತ್ತು ಗೋವಿಂದ ಪೈ (ಪ್ರಶಾಂತ ಪೈ) ನೇತೃತ್ವದಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು

ಕಾರ್ಕಳ ಪುರಸಭೆಯ ವಾರ್ಡ್ ನಂಬರ್ 14ರಲ್ಲಿ ಕರಿಯಕಲ್ ಹಾಗೂ ಪುಲ್ಕೇರಿ ಪರಿಸರದ ಸುಮಾರು 65ಮನೆಗಳಿಗೆ ಸುನೀಲ್ ಕೋಟ್ಯಾನ್ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು 

ವಾರ್ಡ್ ನ.17 ರ ಪುರಸಭಾ ಸದಸ್ಯೆ ನಳಿನಾಕ್ಷಿ ಆಚಾರ್ ನೇತೃತ್ವದಲ್ಲಿ ಹವಾಲ್ದಾರ್ ಬೆಟ್ಟು ಹಾಗೂ ನಗೋಳಿ ಪರಿಸರದ ಸುಮಾರು 95 ಮನೆಗಳಿಗೆ ಆಹಾರ ಸಾಮಾಜಿಗಳ ಕಿಟ್  ವಿತರಿಸಲಾಯಿತು

ಕಾರ್ಕಳ ಪುರಸಭೆಯ ಹಿರಿಯಂಗಡಿ ವಾರ್ಡ್ ಸಂಖ್ಯೆ (19) ಮಾಜಿ ಪುರಸಭಾ ಸದಸ್ಯ ಶಿವಾಜಿರಾವ್ ಹಾಗೂ ಗುರುಪ್ರಸಾದ್ ನೇತ್ರತ್ವದಲ್ಲಿ ಹಿರಿಯಂಗಡಿ ಪರಿಸರದ 90 ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಧುರಾಜ್ ಶೆಟ್ಟಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪ್ರಭಾಕರ ಬಂಗೇರ ಐ.ಟಿ.ಸೆಲ್ ಅಧ್ಯಕ್ಷ ಸತೀಶ್ ಕಾರ್ಕಳ ವಾರ್ಡ್ ಅಧ್ಯಕ್ಷ ಉದಯ ದೇವಾಡಿಗ ಸದಸ್ಯರಾದ ರಾಕೇಶ್ ರಾವ್  ಕೀರ್ತನ್ ದೇವಾಡಿಗ ಕಲಾವತಿ ದೇವಾಡಿಗ ಪ್ರಮೋದ್ ದೇವಾಡಿಗ ವಿಶ್ವನಾಥ್ ದೇವಾಡಿಗ ಹಿರಿಯ ಕಾಂಗ್ರೆಸ್ಸಿಗರಾದ ಕುಟ್ಟಿ ದೇವಾಡಿಗ ಉಪಸ್ಥಿತರಿದ್ದರು.
ಕಾರ್ಕಳ ಪುರಸಭೆಯ ಜರಿಗುಡ್ಡೆ ವಾರ್ಡ್ ಸಂಖ್ಯೆ 5 ರ ಪುರಸಭಾ ಸದಸ್ಯಾ ಸೀತಾರಾಮ್ ದೇವಾಡಿಗರ ನೇತೃತ್ವದಲ್ಲಿ ಜರಿಗುಡ್ಡೆ ಪರಿಸರದ ಬಂಡೀಮಠ ಪರಿಸರದ ಸುಮಾರು 104 ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.


"ಕೊರೋನಾ ದಿಂದಾಗಿ ಜನರು ತತ್ತರಿಸಿ ಹೋಗಿದ್ದು ಕಾರ್ಕಳ ನಗರ ಕಾಂಗ್ರೆಸ್ ವತಿಯಿಂದ ತೀರಾ ಬಡ ಜನರನ್ನು ಗುರುತಿಸಿ ಕಿಟ್ ಗಳ ವಿತರಣೆಯನ್ನು ಮಾಡಿದ್ದೇವೆ. ದಿ.ಗೋಪಾಲ ಭಂಡಾರಿಯವರು ಯಾವುದೇ ಜಾತಿ,ಧರ್ಮ,
ಪಕ್ಷ ಭೇದವಿಲ್ಲದೆ ಜನರ ನೋವಿಗೆ ಸ್ಪಂದಿಸುವುದನ್ನು ಕಲಿಸಿದ್ದಾರೆ.ಅವರ ಪ್ರೇರಣೆಯಿಂದಾಗಿಯೇ ಈ ಕೆಲಸವನ್ನು ಮಾಡಿದ್ದೇವೆ"-

 -ಮಧುರಾಜ್ ಶೆಟ್ಟಿ,ಅಧ್ಯಕ್ಷರು ಕಾರ್ಕಳ ನಗರ ಕಾಂಗ್ರೆಸ್ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget