ನಿಟ್ಟೆ ಕಾಲೇಜಿನ ಯುವತಿಗೆ ಕೊರೋನಾ!ಡಿಸಿ ಹೇಳಿದ್ದೇನು ಗೊತ್ತಾ?

ನಿಟ್ಟೆ ಕಾಲೇಜಿನ ಯುವತಿಗೆ ಕೊರೋನಾ!ಡಿಸಿ ಹೇಳಿದ್ದೇನು ಗೊತ್ತಾ?


ಕಾರ್ಕಳ:ನಿಟ್ಟೆಯ ಯುವತಿಯೋರ್ವರಿಗೆ  ಬಾದಾಮಿಯಲ್ಲಿ  ಕೊರೋನಾ ತಗುಲಿದ್ದು  ಈ  ಕುರಿತಾಗಿ ಕಾರ್ಕಳದ ಜನತೆಯಲ್ಲಿ ಆತಂಕ ಮೂಡಿದ್ದು ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.


ಮಾರ್ಚ್ 14  ರಂದು ಉಡುಪಿಯಿಂದ ಬಾದಾಮಿಗೆ ಹೋದ ನಿಟ್ಟೆ ಕಾಲೇಜಿನ ಯುವತಿಯೋರ್ವಳಿಗೆ ಬಾದಾಮಿಯಲ್ಲಿ ಕೊರೊನ ಪಾಸಿಟಿವ್ ಕಂಡುಬಂದಿದೆ . ಈ ಕುರಿತಾಗಿ ಮಾದ್ಯಮದಲ್ಲಿ ಸುದ್ದಿ ಬಿತ್ತರವಾಗಿದ್ದು  ಜನರು ಭಯಭೀತರಾಗಿದ್ದಾರೆ.  ಇದರ ಬಗ್ಗೆ ಸ್ಪಷ್ಟನೆ ನೀಡಿದ ಉಡುಪಿ ಜಿಲ್ಲಾಧಿಕಾರಿ  ಜಗದೀಶ್  ಮಾರ್ಚ್ 14  ರಂದು ಉಡುಪಿಯಲ್ಲಿ  ಮಾತ್ರವಲ್ಲದೆ ಉಡುಪಿಯ ಅಕ್ಕಪಕ್ಕದ ಜಿಲ್ಲೆಯಲ್ಲಿಯೂ  ಯಾವುದೇ ಕೊರೋನಾ ಪ್ರಕರಣ ಕಂಡು ಬಂದಿಲ್ಲ. ಆದುದರಿಂದ ಜನರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಬಾಗಲಕೋಟೆ ತಲುಪಿದ ಕೆಲ ದಿನಗಳ ನಂತರ ಯುವತಿಗೆ ಕೊರೊನ ತಗುಲಿದ್ದು ಇದರಿಂದಾಗಿ ಯುವತಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಉಡುಪಿಯಿಂದಾಗಿ ಕೋವಿಡ್ ಬಂದಿಲ್ಲ, ಬಾಗಲಕೋಟೆಯಲ್ಲಿಯೇ ಸ್ಥಳೀಯ ಸಂಪರ್ಕದಿಂದಾಗಿ ಕೋವಿಡ್ ಬಂದಿದೆ ಎಂದು ಬಾಗಲಕೋಟೆಯ ಜಿಲ್ಲಾಧಿಕಾರಿಗಳೂ ಸ್ಪಷ್ಟ ಪಡಿಸಿದ್ದಾರೆ ಎಂದು ಡಿಸಿ  ಜಗದೀಶ್ ಹೇಳಿದ್ದಾರೆ.
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget