ಕಾರ್ಕಳದಲ್ಲಿ ನಡೆಯಿತು ಆನ್​​ಲೈನ್ ಲೈವ್ ವಿಡಿಯೋ ಮೂಲಕ ತಿಥಿ

ಕಾರ್ಕಳದಲ್ಲಿ ನಡೆಯಿತು ಆನ್​​ಲೈನ್ ಲೈವ್ ವಿಡಿಯೋ ಮೂಲಕ ತಿಥಿ

ಕಾರ್ಕಳ ತಾಲೂಕಿನ‌ ಕಸಬಾ ಗ್ರಾಮದ ಮಲ್ಲಿಗೆ‌ ಓಣಿಯ‌ ನಿವಾಸಿ ಪುರೋಹಿತ‌ ಸುರೇಂದ್ರ ಭಟ್ ಎಂಬುವವರು ಅರಬ್ ದೇಶದ ಮಸ್ಕತ್​​ನಲ್ಲಿರುವ ಸಚಿತ್ ಕಾಮತ್ ಅವರ ತಂದೆಯ ವಾರ್ಷಿಕ ಶ್ರಾದ್ಧವನ್ನು ‌ಆನ್​​ಲೈನ್ ಲೈವ್ ವಿಡಿಯೋ ಮೂಲಕ ನೆರವೇರಿಸಿದ್ದರು.‌


ಈಗ ಕಾರ್ಕಳದ  ಶಾಂತಾ ನಾಗೇಶ್ ಪೈ ಅವರು ನಿಧನರಾಗಿದ್ದು,  ಮೃತರ ಮಗ ಮುಂಬೈಯಲ್ಲಿದ್ದು, ಊರಿಗೆ ಆಗಮಿಸಲಾಗದ ಹಿನ್ನೆಲೆಯಲ್ಲಿ ಇದೇ ಆನ್​​ಲೈನ್ ಲೈವ್ ವಿಡಿಯೋ ಮೂಲಕ ಮಗನಿಗೆ ತಾಯಿಯ ಶವಸಂಸ್ಕಾರದ ವಿಧಿಗಳನ್ನು ನೆರವೇರಿಸಲಾಗಿದೆ. ಹಾಗೇ, ಒಂಭತ್ತನೇ ದಿನದ ಕ್ರಿಯೆಯನ್ನೂ ಆನ್​ಲೈನ್​​ನಲ್ಲಿ ಸುರೇಂದ್ರ ಭಟ್​ ನೆರವೇರಿಸಿಕೊಟ್ಟಿದ್ದಾರೆ. ಈ ಎರಡು ಕುಟುಂಬದ ಶ್ರಾದ್ದ ಕಾರ್ಯ ಆನ್ ಲೈನ್ ನಲ್ಲೇ ನಡೆದಿರುವುದು ವಿಶೇಷ.‌


ಶ್ರಾದ್ದ ಕಾರ್ಯಕ್ಕೆ ಎಲ್ಲಾ ತಯಾರಿ ಬಳಿಕ ವಾಟ್ಸ್​ಅಪ್​​​ ವಿಡಿಯೋ ಕಾಲ್ ಮೂಲಕ ಎಲ್ಲಾ ಚಟುವಟಿಕೆಗಳನ್ನು ಮೃತರ ಮಕ್ಕಳಿಗೆ‌ ತೋರಿಸುವುದರ ಜೊತೆಗೆ ಪ್ರತಿಯೊಂದನ್ನು ಕ್ರಮಬದ್ಧವಾಗಿ ಧಾರ್ಮಿಕವಾಗಿ ವಿಡಿಯೋ‌ ಕರೆ ಮೂಲಕವೇ  ನಡೆಸಿಕೊಟ್ಟಿದ್ದಾರೆ ಪುರೋಹಿತರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget