"ದೇಗುಲಗಳ ಚಿನ್ನಾಭರಣ ಮಾರಾಟಕ್ಕಿಟ್ಟಿರುವುದು ಖಂಡನೀಯ"-ಸುನೀಲ್ ಕೆ ಆರ್

"ದೇಗುಲಗಳ ಚಿನ್ನಾಭರಣ ಮಾರಾಟಕ್ಕಿಟ್ಟಿರುವುದು ಖಂಡನೀಯ"-ಸುನೀಲ್ ಕೆ  ಆರ್ 

ಶಬರಿಮಲೆ ಹಾಗೂ ತಿರುಪತಿಯ ಚಿನ್ನಾಭರಣವನ್ನು ಮಾರಾಟ ಮಾಡಲು ಹೊರಟಿರುವ ತಮಿಳುನಾಡು ಹಾಗೂ ಆಂದ್ರಪ್ರದೇಶ ಸರಕಾರಗಳ ಕ್ರಮವನ್ನು ಕರ್ನಾಟಕ ರಾಜ್ಯ ಭಜರಂಗದಳದ ಸಂಚಾಲಕ  ಸುನಿಲ್. ಕೆ ಆರ್ ಖಂಡಿಸಿದ್ದಾರೆ.


ಕೊರೋನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಕೂಡಾ ಜನತೆ
ಸಂಕಟದಲ್ಲಿದ್ದಾರೆ. ಪ್ರತೀ ರಾಜ್ಯ ಸರಕಾರಗಳು ಜನರ ಸಂಕಷ್ಠ ಪರಿಹರಿಸಲು ಅವಿರತ ಪ್ರಯತ್ನಪಡುತ್ತಿವೆ. ಆದರೆ ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಸರಕಾರಗಳು ಹಿಂದೂಗಳ ಧಾರ್ಮಿಕ ಕೇಂದ್ರಗಳಿಂದ  ಹಣ ಕಸಿಯಲು ಮುನ್ನಡಿ ಇಟ್ಟಿರುವುದು ಆತಂಕ ಪಡುವ ವಿಚಾರ ಎಂದು ಅವರು ತಿಳಿಸಿದ್ದಾರೆ.

ಹಿಂದೂಗಳ ಧಾರ್ಮಿಕ ನಂಬಿಕೆಯನ್ನೇ ಬುಡಮೇಲು ಮಾಡುವ ಕೃತ್ಯ ಇದಾಗಿದ್ದು, ಈ ಕೃತ್ಯವನ್ನು ಸಮಸ್ತ ಹಿಂದೂಗಳು ಖಂಡಿಸ ಬೇಕು ಎಂದರು. ಹಿಂದೂ  ಪವಿತ್ರ ಕ್ಷೇತ್ರವನ್ನು ಉಳಿಸಲು ಭಜರಂಗದಳ ಬದ್ದವಾಗಿದೆ. ಅಲ್ಲಿನ ಸರಕಾರಗಳು ಇಚ್ಚಿಸಿದಲ್ಲಿ ಕರ್ನಾಟಕ ರಾಜ್ಯ ಭಜರಂಗದಳವು ಪ್ರತೀಯೋರ್ವನಿಂದ  ರೂ ೧.ನ್ನು ಸಂಗ್ರಹಿಸಿ ಅಲ್ಲಿನ ಸರಕಾರಗಳಿಗೆ ನೀಡಲು ಬದ್ದವಾಗಿದೆ.

ಹಿಂದೂ ಧಾರ್ಮಿಕ ಕೇಂದ್ರವನ್ನು ಉಳಿಸುವುದೇ ವಿಶ್ವ ಹಿಂದೂ ಪರಿಷತ್ ಬಜರಂಗದಳ
ಕಾರ್ಕಳ ಪ್ರಖಂಡದ ನೂತನ ಪದಾಧಿಕಾರಿಗಳು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಮಸ್ತ ಹಿಂದೂಗಳ ಸಹಕಾರ ಅಗತ್ಯ ಎಂದು ಅವರು ತಿಳಿಸಿದ್ದಾರೆ.


ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget