ಲಾಕ್ ಡೌನ್ ನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕಾರ್ಕಳ ಪರಪುವಿನಲ್ಲಿರುವ ವಿಜೇತ ವಿಶೇಷ ಶಾಲೆ-Times Of karkala ವಿಶೇಷ ವರದಿ

ಲಾಕ್  ಡೌನ್  ನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕಾರ್ಕಳ ಪರಪುವಿನಲ್ಲಿರುವ  ವಿಜೇತ ವಿಶೇಷ ಶಾಲೆ-Times Of karkala ವಿಶೇಷ ವರದಿ 

ದಾನಿಗಳ ನೆರವಿನಿಂದಲೇ 75 ವಿಶೇಷ ಮಕ್ಕಳನ್ನು ಪೋಷಿಸುತ್ತಿರುವ ವಿಜೇತ ವಿಶೇಷ ಶಾಲೆಗೆ ಲಾಕ್ ಡೌನ್  ನಿಂದಾಗಿ 3 ತಿಂಗಳಿನಿಂದೀಚೆಗೆ ದಾನಿಗಳ ಸಹಕಾರವಿಲ್ಲದೆ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. 

ಸರಕಾರದಿಂದ ಈ ವರೆಗೆ ಯಾವುದೇ ಅನುದಾನ ಲಭಿಸದಿದ್ದರೂ ಕೂಡ ದೇಣಿಗೆ ಸಂಗ್ರಹಿಸಿ, 17 ಮಂದಿ ಸಿಬ್ಬಂದಿಗಳಿಗೆ ವೇತನ, ಹಾಸ್ಟೆಲ್ ಹಾಗೂ ಶಾಲಾ ಕಟ್ಟಡದ ಬಾಡಿಗೆ, ಶಾಲಾ ವಾಹನ ಸಾಲದ ಕಂತು, ವಿಶೇಷ ಮಕ್ಕಳಿಗೆ ವಸತಿನಿಲಯದ ವ್ಯವಸ್ಥೆ,ಮಕ್ಕಳಿಗೆ ಅವಶ್ಯಕವಿರುವ ತರಬೇತಿಯನ್ನು 4 ವರ್ಷಗಳಿಂದ ಯಶಸ್ವಿಯಾಗಿ  ನೀಡುತ್ತಾ ಬಂದಿರುತ್ತಾರೆ. ಆದರೆ ವಿಶೇಷ ಮಕ್ಕಳನ್ನು ಪೋಷಿಸುತ್ತಿರುವ ಈ  ತಾಯಿ ಲಾಕ್ ಡೌನ್ ನಿಂದಾಗಿ ಆತಂಕಕ್ಕೊಳಗಾಗಿದ್ದಾರೆ.

ವಿಶೇಷ ಮಕ್ಕಳ ಲಾಲನೆ ಪಾಲನೆಯೇ ತನ್ನ ಕರ್ತವ್ಯವೆಂದು ಅರಿತು ತನ್ನ ಜೀವನವನ್ನೇವಿಕಲಚೇತನ ಮಕ್ಕಳಿಗಾಗಿ ಮೀಸಲಾಗಿಟ್ಟ ಡಾ.ಕಾಂತಿ ಹರೀಶ್ ಎಂಬ ದಿಟ್ಟ  ಮಹಿಳೆಯ ಸಂಕಷ್ಟದ ಕಥೆ ಇದು.
ಕೊರೋನಾ ಮಹಾಮಾರಿ ಎಲ್ಲರ ಕನಸು ಕಮರಿಸಿದಂತೆ, ವಿಜೇತ ಶಾಲೆಯ ಮಕ್ಕಳ ಕನಸುಗಳಿಗೂ ಕೊಳ್ಳಿ ಇಟ್ಟಿದೆ ಎಂದರೆ ತಪ್ಪಾಗಲಾರದು. 

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಶಾಲೆಯ ನಿಯಮಗಳ ಪ್ರಕಾರ ಶಾಲೆಯ ವಾರ್ಷಿಕ ರಜಾ ಸಮಯದಲ್ಲಿಯೂ ಇಲ್ಲಿರುವ ಶಿಕ್ಷಕರ ವೇತನವನ್ನು ನೀಡಬೇಕಾಗುತ್ತದೆ..
ದಾನಿಗಳ ನೆರವಿನಿಂದಲೇ ನಡೆಯುತ್ತಿದ್ದ ಶಾಲೆಯೂ ಇದೀಗ ಸಿಬ್ಬಂದಿಗಳಿಗೆ ವೇತನ, ಕಟ್ಟಡ ಬಾಡಿಗೆ, ಹಾಸ್ಟೆಲ್ ನಲ್ಲಿರುವ ಅನಾಥ ವಿಶೇಷ  ಮಕ್ಕಳ ಪಾಲನೆ ಇವೆಲ್ಲವುಗಳ ನಿರ್ವಹಣೆಗೆ ದೇಣಿಗೆ ಸಂಗ್ರಹವಿಲ್ಲದೆ ಕಂಗಾಲಾಗಿದೆ. ಕೊರೋನದ ಈ ಸಂದರ್ಭದಲ್ಲಿ  ಶಾಲೆ ಮುಚ್ಚಿದ್ದರೂ ಬಹುತೇಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. 

ಆದರೆ ಡಾ.ಕಾಂತಿ ಹರೀಶ್ ರವರು ಕೇವಲ ವಿಕಲಚೇತನ ಮಕ್ಕಳು ಮಾತ್ರವಲ್ಲದೇ ಅನಾಥ ವಿಶೇಷ ಮಕ್ಕಳನ್ನೂ ಒಟ್ಟಿಗೆ ಪೋಷಿಸಿಕೊಂಡು ಬಂದಿದ್ದಾರೆ. ಈಗ ಅನಾಥ ವಿಶೇಷ ಮಕ್ಕಳು ತನ್ನೊಂದಿಗೆ ಇದ್ದು ಅವರನ್ನು ಸಲಹುವುದು ಕೂಡ ಅವರ ಜವಬ್ದಾರಿಯಾಗಿರುತ್ತದೆ.

ನೆರವಿನ ನಿರೀಕ್ಷೆಯಲ್ಲಿ: 

ಇದುವರೆಗೂ ಸಹೃದಯಿ ದಾನಿಗಳ ನೆರವಿನಿಂದಲೇ ನಡೆದುಕೊಂಡು ಬರುತ್ತಿದ್ದ ಶಾಲೆಗೆ ಇದೀಗ  ಕೊರೊನಾದಿಂದಾಗಿ ದಾನಿಗಳ ಸಹಕಾರ ನಿಂತು ಹೋಗಿದ್ದು,ಸಂಸ್ಥಾಪಕಿ ಕಾಂತಿ ಹರೀಶ್ ರವರು ಕಂಗಾಲಾಗುವಂತೆ ಮಾಡಿದೆ. ಹುಟ್ಟುಹಬ್ಬ ಮದುವೆ ವಾರ್ಷಿಕೋತ್ಸವವನ್ನು ಆಚರಿಸುವವರು ಶಾಲೆಯಲ್ಲಿ ಆಚರಿಸುತ್ತಿದ್ದು ಇದೀಗ ಅದೂ ನಿಂತಿದೆ. ಇದರಿಂದಾಗಿ ಶಾಲೆಯ ನಿರ್ವಹಣೆಗೆ ಕಷ್ಟವಾಗಿದ್ದು, ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ ಕಾಂತಿ ಹರೀಶ್ ರವರು.

ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಕಾರ್ಕಳ ತಾಲೂಕಿನ ಪರಪುವಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜೇತ ವಿಶೇಷ ಶಾಲೆಗೆ ದಾನಿಗಳಿಂದ ಧನ ಸಹಾಯವನ್ನು ಇಚ್ಛಿಸುತ್ತೇವೆ .
ಸಹಕರಿಸ ಬಯಸುವ ಹಸ್ತಗಳು ಈ ಕೆಳಗಿನ account ಗೆ ನೀಡಬಹುದು.

ಸಂಪರ್ಕ ಸಂಖ್ಯೆ:9449711678,9483017100 

 Vijetha home for Mentally Challenged 
A.No- 520101233845530
IFSC.No - CORP0000148
MICR Code- 575017031
Corporation Bank
Karkala branch.

 Shri Guru Raghavendra Seva Trust R. 
A.No- 111101011003420
IFSC.No - VIJB0001111
MICR Code- 575029038
VIJAYA  Bank
Karkala branch.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget