ಕಾರ್ಕಳ: ಮದ್ಯದಂಗಡಿ
ತೆರೆಯುವ ಮುನ್ನವೇ ಕ್ಯೂನಲ್ಲಿ ನಿಂತ ಎಣ್ಣೆ ಪ್ರೀಯರು!-Times Of karkala
ಕಾರ್ಕಳ:ಇಂದಿನಿಂದ
ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಬಾಗಿಲು ತೆರೆಯುವ ಮುನ್ನವೇ ಮದ್ಯದಂಗಡಿ ಮುಂದೆ ಮದ್ಯಪ್ರಿಯರು ಕಾದು ಕುಳಿತಿದ್ದಾರೆ. ಅಲ್ಲದೆ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬಾಕ್ಸ್ಗಳಲ್ಲಿ ಚಪ್ಪಲಿ ಇಟ್ಟು ಜಾಗವನ್ನು ರಿಸರ್ವ್ ಮಾಡಿದ್ದಾರೆ.
ವೈನ್ಸ್
ಅಂಗಡಿ ಮುಂದೆ ಬೆಳ್ಳಂಬೆಳಗ್ಗೆ ಮದ್ಯ ವ್ಯಸನಿಗಳು ಕ್ಯೂನಲ್ಲಿ ನಿಂತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಮದ್ಯ ಸಿಗದೇ ಹತಾಶರಾಗಿದ್ದ ಎಣ್ಣೆಪ್ರಿಯರ ಮೊಗದಲ್ಲಿ ಇಂದು ನಗು ಮೂಡಿದೆ. ಮದ್ಯ ಖರೀದಿಗೆ ಜನರು ಎಷ್ಟು ಹಾತೊರೆಯುತ್ತಿದ್ದಾರೆ ಎಂದರೆ ಅಂಗಡಿ ತೆರೆಯುವ ಮುನ್ನವೇ ಅಲ್ಲಿ ಸಾಮಾಜಿಕ ಅಂತರಕ್ಕಾಗಿ ಹಾಕಲಾಗಿರೋ ಬಾಕ್ಸ್ನಲ್ಲಿ ಚಪ್ಪಲಿ ಬಿಟ್ಟು ಕುಡುಕರು ಠಿಕಾಣಿ ಹೂಡಿದ್ದಾರೆ.
ಕಾರ್ಕಳದಲ್ಲಿಯೂ
ಮದ್ಯಪ್ರಿಯರು ಮದ್ಯದಂಗಡಿ ತೆರೆಯುವ ಮುನ್ನವೇ ಕ್ಯೂನಲ್ಲಿ ನಿಂತ ದೃಶ್ಯ ಕಂಡುಬಂದಿದೆ. ಅಲ್ಲದೆ ಸರತಿ
ಸಾಲಿನಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ನಿಂತದ್ದು ಒಂದಷ್ಟು ಟ್ರೋಲ್ ಗಳಿಗೆ ಆಹಾರವೂ ಆಗಿದೆ.
ಜಾಹೀರಾತು
ಜಾಹೀರಾತು
Post a comment