ಕಾರ್ಕಳ: ಕೊರೋನಾ ಇದೆ ಎಂದು ಕಾರ್ಖಾನೆಯಿಂದ ಮಹಿಳೆಯನ್ನು ಹೊರದಬ್ಬಿದ ಅಮಾನವೀಯ ಘಟನೆ:ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ-Times OF karkala

ಕಾರ್ಕಳ: ಕೊರೋನಾ ಇದೆ ಎಂದು ಕಾರ್ಖಾನೆಯಿಂದ ಮಹಿಳೆಯನ್ನು ಹೊರದಬ್ಬಿದ ಅಮಾನವೀಯ ಘಟನೆ:ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ-Times Of karkala


ಇತ್ತೀಚೆಗೆ ಕಾರ್ಕಳದ ಗುಂಡ್ಯಡ್ಕದ ಗೇರುಬೀಜ ಕಾರ್ಖಾನೆಯಲ್ಲಿ ಮಹಿಳಾ ಸಿಬ್ಬಂದಿಯೋರ್ವರನ್ನು "ನಿನಗೆ ಕೊರೋನಾ ಇದೆ" ಎಂದು ಎಲ್ಲರೆದುರು ಸುಳ್ಳು ಹೇಳಿ ಅಪಮಾನಿಸಿ ಕಾರ್ಖಾನೆಯಿಂದ ಹೊರದಬ್ಬಿದ ಅಮಾನವೀಯ ಘಟನೆ ನಡೆದಿದ್ದು, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಶ್ರೀರಾಮ ದಿವಾಣರು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹಾಗೂ ಕಾರ್ಕಳ ತಹಶೀಲ್ದಾರ್ ಪಾಂಡುರಂಗ ಹೆಗ್ಡೆ ಅವರಿಗೆ ದೂರು ನೀಡಿದ್ದರು. ಆದರೆ ಇದುವರೆಗೂ ಈ  ಅಧಿಕಾರಿಗಳು ಕಾರ್ಖಾನೆ ಅಧಿಕೃತರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಕರ್ತವ್ಯ ಲೋಪ ಎಸಗಿದ್ದಾರೆ.

ಇದೀಗ ಅವರು ಈ ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಅವರಿಗೆ ದೂರು ನೀಡಿದ್ದಾರೆ. ಪೊಲೀಸ್ ಅಧೀಕ್ಷಕರಿಂದ ಈ ಪ್ರಕರಣಕ್ಕೆ ನ್ಯಾಯ ದೊರಕುವುದೇ ಎಂದು ಕಾದು ನೋಡಬೇಕಾಗಿದೆ.
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget