ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಜಗಿಯುವವರಿಗೆ ಕಾದಿದೆ ಶಿಕ್ಷೆ-Times of kakala

ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಜಗಿಯುವವರಿಗೆ ಕಾದಿದೆ ಶಿಕ್ಷೆ-Times of kakala 

ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್‌ ಮಸಾಲ ಉತ್ಪನ್ನ ಸೇವಿಸಿ ಉಗುಳುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ  ನಿಯಮ, ಉಲ್ಲಂಘಿಸಿದರೆ ಕಾನೂನು ಕ್ರಮಕೈಗೊಳ್ಳುವ  ಎಚ್ಚರಿಕೆ ನೀಡಿದೆ.


ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು, ಕೊರೊನಾ ಪಿಡುಗು ಪರಿಣಾಮಕಾರಿ ನಿಯಂತ್ರಿಸುವ ನಿಟ್ಟಿನಲ್ಲಿ ಯಾವುದೇ  ರೀತಿಯ ತಂಬಾಕು, ಪಾನ್‌ ಮಸಾಲ ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಿ ಉಗುಳುವುದು ನಿರ್ಬಂಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಜಾಹೀರಾತು 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಗುಟ್ಕಾ ನಿಷೇಧಿಸಿದ ಬಳಿಕ ಅಡಕೆ ಹಾಗೂ ತಂಬಾಕು ಚೀಟಿಗಳನ್ನು ಬೇರೆ ಮಾಡಿ ಪೂರೈಕೆ ಹಾಗೂ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕಿದೆ. ಹೀಗಾಗಿ ಯಾವುದೇ ರೀತಿಯ ಜಗಿಯುವ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಿ, ಉಗುಳುವುದನ್ನು ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಜಾಹೀರಾತು 
https://goo.gl/maps/dkqruzoYGqFTdvJT9 

ಉಲ್ಲಂಘಿಸಿದರೆ ಜೈಲು: ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್‌ ಮಸಾಲ ಉತ್ಪನ್ನಗಳ ಸೇವನೆ ಹಾಗೂ ಉಗುಳುವುದು ನಿಷೇಧಿಸುವ ಆದೇಶ ಉಲ್ಲಂಘಿಸಿದವರ ವಿರುದ ಐಪಿಸಿ ಸೆಕ್ಷನ್‌ 188 (ಸರ್ಕಾರಿ ಆದೇಶಕ್ಕೆ  ಅವಿಧೇಯತೆ)ಡಿ 6 ತಿಂಗಳ ಸಾದಾ ಸಜೆ, 1000 ರೂ. ದಂಡ, ಸೆಕ್ಷನ್‌ 268 (ಅನುಚಿತ ವರ್ತನೆ) 269 (ಜೀವಕ್ಕೆ ಅಪಾಯಕಾರಿ ಸೋಂಕು ಹರಡುವಿಕೆ ಗೊತ್ತಿದ್ದರೂ ಉದಾಸೀನತೆ)ರಡಿ 6 ತಿಂಗಳ ಸಾದಾ ಶಿಕ್ಷೆ ಹಾಗೂ ಐಪಿಸಿ 270 (ಸಾರ್ವಜನಿಕರ ಸೋಂಕು ಹರಡಿಸುವ ಅಪಾಯಕಾರಿ ನಡವಳಿಕೆ)ರಡಿ 2 ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಜಾಹೀರಾತು 

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget