ಕಾಪು ಪೇಟೆಯ ಮಧ್ಯಭಾಗದಲ್ಲಿಯೇ ವಾಮಾಚಾರ?-Times Of kakala
ಕಾಪು ಪೇಟೆಯ ಮಧ್ಯಭಾಗದಲ್ಲಿ ವಾಮಾಚಾರ ಮಾಡಲಾಗಿದೆ.ತಗಡು, ಲಿಂಬೆ ಹಣ್ಣುಗಳು ಕುಂಬಳಕಾಯಿ, ಬೊಂಬೆ, ಕುಂಕುಮಬಳಸಿ ವಾಮಾಚಾರ ಮಾಡಿರುವ ಕುರುಹು ಪತ್ತೆಯಾಗಿದ್ದು ಇದರಿಂದ ಅಂಗಡಿ ಮಾಲಕರು, ಗ್ರಾಹಕರಲ್ಲಿ ಭಯ ಶುರುವಾಗಿದೆ.
ಈ ಬಗ್ಗೆ ಕಾಪು ಪುರಸಭೆ ಮುಖ್ಯಾ ಧಿಕಾರಿಗೆ ದೂರು ನೀಡಲಾಗಿದೆ. ಅವರು ಸ್ಥಳ ಪರಿಶೀಲನೆ ನಡೆಸಿ ಸ್ಥಳ ದಲ್ಲಿ ಅಳವಡಿಸಿರುವ ಸಿಸಿ ಕೆಮರಾ ಫುಟೇಜ್ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಕೊರೊನಾ ಲಾಕ್ಡೌನ್ ವೇಳೆಯಲ್ಲೂ ವಾಮಾಚಾರ ಮಾಡುವವರು ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು ಪೊಲೀಸರು ಪೇಟೆಯಲ್ಲಿ ಗಸ್ತು ತಿರುಗುವುದಿಲ್ಲವೇ ಎಂದು ವ್ಯಾಪಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ.
Post a comment