ಜೂನ್ 30 ರವರೆಗೆ ಲಾಕ್ ಡೌನ್ ವಿಸ್ತರಣೆ. ಏನಿಲ್ಲ?ಏನಿದೆ?

ಜೂನ್  30 ರವರೆಗೆ ಲಾಕ್ ಡೌನ್ ವಿಸ್ತರಣೆ. ಏನಿಲ್ಲ?ಏನಿದೆ?


ಲಾಕ್‍ಡೌನ್ 4.0 ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಲಾಕ್‍ಡೌನ್ 5.0 ನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜೂನ್ 30ರವರೆಗೆ ಲಾಕ್‍ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 

ಪ್ರಮುಖವಾಗಿ ಜೂನ್ 2ರಿಂದ ಮಾಲ್ ಹಾಗೂ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಮತಿ ನೀಡಲಾಗುತ್ತಿದೆ. ಅಲ್ಲದೆ ರಾತ್ರಿ 9 ರಿಂದ ಬೆಳಗಿನ ಜಾವ 5 ಗಂಟೆವರೆಗೆ ನೈಟ್ ಕರ್ಫ್ಯೂ ವಿಧಿಸಿದೆ. ಚಿತ್ರಪ್ರದರ್ಶನ ನಿಷೇಧವನ್ನು ಮುಂದುವರಿಸಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಕಠಿಣ ನಿಯಮಾವಳಿಗಳನ್ನು ತರುತ್ತಿದೆ.


 ಜಾಹೀರಾತು
https://goo.gl/maps/dkqruzoYGqFTdvJT9 

ಈ ಬಗ್ಗೆ ಇಂದು ಸಂಜೆಯೊಳಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ. ಇನ್ನೂ ಜೂನ್ 8ರಿಂದ 3 ಹಂತಗಳಲ್ಲಿ ಲಾಕ್‍ಡೌನ್ ಅನ್‍ಲಾಕ್ ಆಗುತ್ತಿದೆ. ಆ 3 ಹಂತಗಳಲ್ಲಿ ಯಾವುದೆಲ್ಲಾ ಓಪನ್ ಆಗುತ್ತಿದೆ.ಇಂಡಿಯಾ ಅನ್‍ಲಾಕ್- ಹಂತ 1 (ಜೂನ್ 8ರ ನಂತರ ಇವು ಓಪನ್ ಆಗ್ತವೆ)

* ಧಾರ್ಮಿಕ ಸ್ಥಳಗಳು

* ಹೊಟೇಲ್, ರೆಸ್ಟೋರೆಂಟ್ಸ್ , ಆತಿಥ್ಯ ಸ್ಥಳಗಳು

* ಶಾಪಿಂಗ್ ಮಾಲ್‍ಗಳು

(ಕೇಂದ್ರ ಸಚಿವಾಲಯಗಳು/ ಇಲಾಖೆಗಳು/ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಲಿದೆ)


ಇಂಡಿಯಾ ಅನ್‍ಲಾಕ್- ಹಂತ 2 (ಜೂನ್ 8ರ ನಂತರ ಓಪನ್ ಇಲ್ಲ – ಜುಲೈನಲ್ಲಿ ನಿರ್ಧಾರ)

* ಶಾಲೆಗಳು, ಕಾಲೇಜ್‍ಗಳು, ತರಬೇತಿ/ಟ್ಯೂಷನ್ ಸಂಸ್ಥೆಗಳು

* ರಾಜ್ಯಗಳು, ಶೈಕ್ಷಣಿಕ ಸಂಸ್ಥೆಗಳು, ಪೋಷಕರ ಜೊತೆ ಚರ್ಚಿಸಿ ತೀರ್ಮಾನ

* ಜುಲೈ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ಷರತ್ತುಬದ್ಧ ಅನುಮತಿ 

ಇಂಡಿಯಾ ಅನ್‍ಲಾಕ್- ಹಂತ 3 (ಪರಿಸ್ಥಿತಿ ಆಧರಿಸಿ ತೀರ್ಮಾನ, ಅಂದರೆ ಸದ್ಯಕ್ಕೆ ಇವೆಲ್ಲಾ ಓಪನ್ ಆಗಲ್ಲ. ಓಪನ್‍ಗೆ ದಿನಾಂಕ ನಿಗದಿಯಾಗಿಲ್ಲ)

* ಅಂತಾರಾಷ್ಟ್ರೀಯ ವಿಮಾನಯಾನ

* ಮೆಟ್ರೋ ರೈಲು ಸೇವೆ

* ಥಿಯೇಟರ್, ಜಿಮ್, ಸ್ವಿಮ್ಮಿಂಗ್‍ಪೂಲ್

* ಮನರಂಜನಾ ಪಾರ್ಕ್, ಬಾರ್

* ಆಡಿಟೋರಿಯಂ, ಅಸೆಂಬ್ಲಿ ಹಾಲ್

*ಸಾಮಾಜಿಕ/ರಾಜಕೀಯ/ಕ್ರೀಡೆ/ಎಂಟರ್ ಟೈನ್ಮೆಂಟ್/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮ

ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸದ್ಯ ಇರುವ ಸಡಿಲಿಕೆಗಳೊಂದಿಗೆ ಯಥಾಸ್ಥಿತಿ ಮುಂದುವರಿಯಲಿದೆ. ಜೂನ್ 30ರವರೆಗೆ ಲಾಕ್‍ಡೌನ್ ನಿಯಮಗಳು ಅನ್ವಯವಾಗಲಿವೆ. ವೈದ್ಯಕೀಯ ಸೇವೆ, ಮೆಡಿಕಲ್, ದಿನಬಳಕೆ ಸರಕು ಪೂರೈಕೆ ಸೇರಿದಂತೆ ಅವಶ್ಯಕ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ

ಜಾಹೀರಾತು
ಜಾಹೀರಾತು

ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget