ಲಾಕ್ ಡೌನ್ ಸಂದರ್ಭ ಸಂಕಷ್ಟ ದಲ್ಲಿರುವ ಜನರನ್ನು ಗುರುತಿಸಿ ಆಹಾರ ಕಿಟ್ ನೀಡುವ “ನೆರವು” ಕಾರ್ಯ ಕ್ರಮದಲ್ಲಿ ಸಮಾಜದ ತೀರಾ ಸಂಕಷ್ಟದಲಿರುವವರನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ ಎಂದು ನೆರವು ಕಾರ್ಯಕ್ರಮ ಸಂಯೋಜಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ತಿಳಿಸಿದ್ದಾರೆ.
ಕೊರೋನಾ ಜ್ವರದ ಹಿನ್ನೆಲೆಯಲ್ಲಿ ಭಾರತದಲ್ಲಿ ಲಾಕ್ ಡೌನ್ ಆರಂಭಗೊಳ್ಳುತ್ತಿದ್ದಂತೆಯೇ ಜನರ ನಿತ್ಯ ಬದುಕು ಸಂಕಷ್ಟದತ್ತ ಸಾಗಿತ್ತು. ಆ ಸಂದರ್ಭ ಶಾಸಕ ಸುನಿಲ್ ಕುಮಾರ್ ಜನರ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ನೆರವು ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದ ಮೂಲಕ ಕಾರ್ಕಳ ಹಾಗೂ ಹೆಬ್ರಿ ತಾಲೂಕಿ ನಾದ್ಯಂತ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂಬ ತೃಪಿ ಇದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಕಾರ್ಯ ಕರ್ತರು, ಗ್ರಾಮ ಪಂಚಾಯತ್ಸದಸ್ಯರು, ಜನ ಪ್ರತಿನಿಧಿಗಳು ಎಲ್ಲರೂ ಒಗ್ಗೂಡಿ ಈ ಕಾರ್ಯವನ್ನು ಯಶ ಸ್ಸಾಗಿಸಲು ಅವಿರತ ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದ್ದಾರೆ.
Post a comment