"ಸಾವಿರಾರು ಜನ ಸರದಿಯಲ್ಲಿ ನಿಂತು ಸಾರಾಯಿ ಖರೀದಿಸಬಹುದು. ಆದರೆ ಪಂಚಾಯತ್ ಚುನಾವಣೆಗೆ ತಡೆಮಾಡುವ ಈ ಪ್ರಕ್ರಿಯೆ ಸರಿಯಲ್ಲ"-ನೀರೆಕೃಷ್ಣ ಶೆಟ್ಟಿ

ಗ್ರಾಮ ಪಂಚಾಯತ್‌ಗೆ ನಾಮ ನಿರ್ದೇಶಕರ ನೇಮಕಾತಿ ಬೇಡ ಎಂದು  ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆಕೃಷ್ಣ ಶೆಟ್ಟಿ ತಿಳಿಸಿದ್ದಾರೆ. 


ರಾಜ್ಯ ಸರಕಾರವು ಗ್ರಾಮ ಪಂಚಾಯತ್‌ಗೆ ನಾಮನಿರ್ದೇಶಕ ಮಾಡಲು ಮುಂದಾಗಿರುವುದು ದುರಾದೃಷ್ಟ. ದಿ| ರಾಜೀವ ಗಾಂಧಿ ಪಂಚಾಯತ್‌ ರಾಜ್ ಅಧಿನಿಯಮ ತಿದ್ದುಪಡಿ ೭೩ನೇ ವಿಧಿ ಪ್ರಕಾರ ರಾಜ್ಯ ಸರಕಾರವು ೧೯೯೩ನೇ ಸಾಲಿನಲ್ಲಿ ಗ್ರಾಮಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಅಧಿನಿಯಮ ಕರ್ನಾಟಕ ಸರಕಾರ ಎಂದು ರಾಜ್ಯದಲ್ಲಿ ಚಾಲನೆ ತರಲಾಗಿತ್ತು. ಆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಆಡಳಿತ ಐದು ವರ್ಷ ಅವಧಿಯನ್ನು ಮುಗಿಸಿತ್ತು. 

ಇದೇ ತಿಂಗಳ ೨೪ನೇ ತಾರೀಕಿಗೆ ರಾಜ್ಯದಾದ್ಯಂತ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರ
ಆಡಳಿತ ಅವಧಿ ಮುಕ್ತಾಯವಾಗಿದೆ.ಈ ಸಂದರ್ಭ ದೇಶದಲ್ಲೇ ಕೊರೊನಾ ರೋಗವಿದೆ. ಈಗ ಚುನಾವಣೆ ನಡೆಸಲು ಅಸಾಧ್ಯ. ಈ ಬಗ್ಗೆ ಚುನಾವಣಾ ಆಯೋಗದ ಗಮನ
ಸೆಳೆಯಲಾಗಿದೆ.

 ರಾಜ್ಯ ಸರಕಾರ ಇಂತಹ ಸ0ಕಷ್ಟದ ಸಂದರ್ಭದಲ್ಲಿ ಕೂಡಾ ಅಧಿಕಾರ ದುರುಪಯೋಗ ಪಡಿಸಿ ಆಡಳಿತ ಸಮಿತಿಗೆ ಮುಂದಾಗಿದೆ. ಇದು ಸರಿಯಲ್ಲ. ಸಂವಿಧಾನದ ೭೩ನೇ ತಿದ್ದುಪಡಿಯಲ್ಲಿ ಗ್ರಾಮ ಪಂಚಾಯತುಗಳಿಗೆ ಸದಾಕಾಲ ಚುನಾಯಿತ ಸದಸ್ಯರು ಇರಬೇಕು ಎನ್ನುವ ತೀರ್ಮಾನ ಹೊಂದಿದೆ. ಗ್ರಾಮ ಪಂಚಾಯತ್  ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಘಟಕ. ಅಧಿಕಾರ ವಿಕೇಂದ್ರಿಕರಣ
ವ್ಯವಸ್ಥೆಯ ಮೂಲಪೀಠವಾಗಿದೆ. ಈಗಿನ ಗ್ರಾಮ ಪಂಚಾಯತ್  ಸದಸ್ಯರನ್ನೇ ೬ ತಿಂಗಳ ಮಟ್ಟಿಗೆ
ಮುಂದುವರಿಸಿದಲ್ಲಿ ಅಥವಾ ಆಡಳಿತ ಅಧಿಕಾರಿಗಳನ್ನು ನೇಮಿಸುವುದು ಸದ್ಯದ ಮಟ್ಟಿಗೆ ಸೂಕ್ತವೆನಿಸಬಹುದು.

ಇಲ್ಲವಾದಲ್ಲಿ ಗ್ರಾಮ ಪಂಚಾಯತ್ ರಾಜಕೀಯ ಸಂಘಟನೆಗೆ ಮಾತ್ರ ಅನುಕೂಲವಾಗಬಹುದಾಗಿದೆ. ವಿಕೇಂದ್ರಿಕರಣ ವ್ಯವಸ್ಥೆ ಪಾರದರ್ಶಕವಾಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಾರಾಯ ಅಂಗಡಿ
ಆರOಭ ಮಾಡಬಹುದು. ಸಾವಿರಾರು ಜನ ಸರದಿಯಲ್ಲಿ ನಿಂತು ಖರೀದಿಸಬಹುದು. ಆದರೆ ಪಂಚಾಯತ್ ಚುನಾವಣೆಗೆ ತಡೆಮಾಡುವ ಈ ಪ್ರಕ್ರಿಯೆ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget