ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ:ಕೊರೋನಾ ನಡುವೆಯೂ ಬಿಜೆಪಿಯ ಆಪರೇಷನ್ ಕಮಲ-Times of karkala

ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ:ಕೊರೋನಾ ನಡುವೆಯೂ ಬಿಜೆಪಿಯ ಆಪರೇಷನ್ ಕಮಲ-Times of karkala

ರಾಜ್ಯದಲ್ಲಿ ಒಂದು ಕಡೆ ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ರಾಜಕೀಯದಲ್ಲಿ ಆಪರೇಷನ್ ಕಮಲ ಕೂಡ ಚುರುಕುಕೊಂಡಿದ್ದು, ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.



ಟಿ.ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬಿಬಿಎಂಪಿ ಸದಸ್ಯೆಯ ಪತಿ ಹಾಗೂ ಕಾಂಗ್ರೆಸ್ ಮುಖಂಡರಾಗಿದ್ದ ತಿಮ್ಮನಂಜಯ್ಯ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

 https://wa.me/919945283600

ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಮಾಜಿ ಬಿಜೆಪಿ ಶಾಸಕ ಎಸ್.ಮುನಿರಾಜು ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ತಮ್ಮ ಕ್ಷೇತ್ರದಲ್ಲಿ ಹಸಿದವರಿಗೆ ಊಟ, ದಿನಸಿ, ತರಕಾರಿ ನೀಡಿ ಜನರಿಗೆ ನೆರವಾಗಿದ್ದರು. ಈ ನಡುವೆ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕೆ ಟಿ.ದಾಸರಹಳ್ಳಿಯಲ್ಲಿ ಆಪರೇಷನ್ ಕಮಲ ಚುರುಕುಗೊಂಡಿದ್ದು, ತಿಮ್ಮನಂಜಯ್ಯ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.





ಕೊರೊನಾ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಟಿ.ದಾಸರಹಳ್ಳಿಯ ಬಾಗಲಗುಂಟೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಲಾಗಿದೆ. ಈ ವೇಳೆ ಮಾಜಿ ಶಾಸಕ ಎಸ್.ಮುನಿರಾಜು, ಕ್ಷೇತ್ರದ ಅಧ್ಯಕ್ಷ ಲೋಕೇಶ್, ತಿಮ್ಮನಂಜಯ್ಯ, ಮುಖಂಡರಾದ ನರಸಿಂಹ ಮೂರ್ತಿ, ಸಿಎಂ. ನಾಗರಾಜು, ಉಮಾದೇವಿ, ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget