ತಾನು ವಿಕಲಚೇತನನಾದರೂ ನೊಂದವರ ಬಾಳಲ್ಲಿ ಆಸರೆಯಾಗುತ್ತಿರುವ ಪ್ರಕಾಶ್ ಜೆ ಶೆಟ್ಟಿಗಾರ್-Times Of karkala


ತಾನು ವಿಕಲಚೇತನನಾದರೂ ನೊಂದವರ ಬಾಳಲ್ಲಿ ಆಸರೆಯಾಗುತ್ತಿರುವ ಪ್ರಕಾಶ್ ಜೆ ಶೆಟ್ಟಿಗಾರ್
ತನ್ನ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು, ವಿಶೇಷ ಮಕ್ಕಳನ್ನು ಸ್ವವಲಂಬಿಯಾಗಿ ಬದುಕಲು ಶಾಲೆ ನಿರ್ಮಿಸಿದ "ಸ್ಫೂರ್ತಿ ವಿಶೇಷ ಮಕ್ಕಳ ಶಾಲೆ ಮೂಡಬಿದಿರೆ"ಯ ಮುಖ್ಯಸ್ಥ "ಪ್ರಕಾಶ್ ಜೆ. ಶೆಟ್ಟಿಗಾರ್" ರವರಿಂದ ಕೊರೊನ ನಿಯಂತ್ರಣಕ್ಕಾಗಿ ಸರಕಾರ ವಿಧಿಸಿರುವ ಲಾಕ್ಡೌನ್  ನಿಂದಾಗಿ ಸಂಕಷ್ಟಕ್ಕೊಳಗಾದವರಿಗೆ ನಿರಂತರ ನೆರವು

ವರ್ಷದಲ್ಲಿ 10 ತಿಂಗಳು ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳ ಶಾಲೆ ನಡೆಸುತ್ತಾ, ಅಂತಹ ಮಕ್ಕಳ ಆರೈಕೆ ಮಾಡುತ್ತ ಅವರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಾ, ಉಳಿದೆರಡು ತಿಂಗಳು ವಿಶ್ರಾಂತಿ ಪಡೆಯಬೇಕಿದ್ದ ವ್ಯಕ್ತಿ ಇಂದು ಕೊರೊನ ಲಾಕ್ಡೌನ್ ನಿಂದಾಗಿ ಅತೀ ಅವಶ್ಯಕತೆ ಇದ್ದ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಕುಟುಂಬಗಳನ್ನು ಗುರುತಿಸಿ, ಅಂತಹ ಸುಮಾರು 850ಕ್ಕೂ ಹೆಚ್ಚು ಮನೆಗಳಿಗೆ ನೆರವಿನ ಹಸ್ತ ನೀಡಿರುವವರೇ "ಪ್ರಕಾಶ್ ಜೆ. ಶೆಟ್ಟಿಗಾರ್"..


ಮನೆಯಲ್ಲಿ ಒಂದು ಭಿನ್ನ ಸಾಮರ್ಥ್ಯದ  ಮಗು ಇದ್ದರೆ ಆ ಮಗುವಿನ ಆರೈಕೆ ಮಾಡುವ ಕಷ್ಟ ಆ ಮಗುವಿನ ಹೆತ್ತವರಿಗಷ್ಟೇ ಗೊತ್ತು..ಇಂತವರ ಸಾಲಿಗೆ ನಮ್ಮ ಪ್ರಕಾಶ್ ಸರ್ ದಂಪತಿಗಳು ಸೇರಿದ್ದಾರೆ, ಸ್ವತಃ ಅಂಗ ವೈಕಲ್ಯವನ್ನು ಹೊದಿರುವ ಪ್ರಕಾಶ್ ಸರ್ ಇವರಿಗೆ ಇಬ್ಬರು ಮಕ್ಕಳು ಒಂದು ಗಂಡು ಒಂದು ಹೆಣ್ಣು, ಗಂಡು ಮಗ(22ವ) ಹುಟ್ಟಿನಿಂದಲೇ ವಿಶೇಷ  ಚೇತನನಾಗಿರುತ್ತಾನೆ, ಇವರು ತಮ್ಮ ಮಗನನ್ನು ಶಾಲೆಗೆ ಸೇರಿಸಿ ಅನುಭವಿಸಿದ ಹಾಗೂ ಸ್ವತಃ  ಅನುಭವಿಸಿದ  ಯಾತನೆಗಳೇ ಇಂದು "ಸ್ಫೂರ್ತಿ ವಿಶೇಷ ಮಕ್ಕಳ ಶಾಲೆ" ಸ್ಥಾಪಿಸಲು ಕಾರಣವಾಯಿತು..!

ತಾನು ಅನುಭವಿಸುತ್ತಿರುವ ನೋವು ಬೇರೆ ಭಿನ್ನ ಸಾಮರ್ಥ್ಯದ ಮಕ್ಕಳ ಹೆತ್ತವರು ಅನುಭವಿಸಬಾರದೆಂಬ ಉದ್ದೇಶದಿಂದ ಮೂರು ವರುಷದ ಹಿಂದೆ 33 ವಿಶೇಷ ಮಕ್ಕಳನ್ನು ಸೇರಿಸಿ ಬಾಡಿಗೆ ಕಟ್ಟಡದಲ್ಲಿ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆ ಆರಂಭಿಸುತ್ತಾರೆ.ಇದೀಗ ಇವರ ಶಾಲೆಯಲ್ಲಿ ಸುಮಾರು 58 ಮಕ್ಕಳಿಗೆ ವಿಶೇಷ ತರಬೇತಿ ಪಡೆದ ಶಿಕ್ಷಕರಿಂದ ಶಿಕ್ಷಣ ನೀಡುತ್ತಿದ್ದಾರೆ. ಇವರಿಗೆ ತಿಂಗಳೊಂದರ ಖರ್ಚು 1.30 ಲಕ್ಷಕ್ಕೂ ಅಧಿಕ.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವಾರ್ಷಿಕ ರಜೆಯ ಸಮಯದಲ್ಲೂ ವೇತನ ಚಾಲ್ತಿಯಲ್ಲೇ ಇರುತ್ತೆ, ಇದು ಸರಕಾರದ ನಿಯಮವಾಗಿದೆ, ಹಾಗಾಗಿ ಪ್ರಸ್ತುತ ಇವರಿಗೆ ಶಾಲಾ ಕಟ್ಟಡದ ಬಾಡಿಗೆ ಹಾಗೂ ಶಿಕ್ಷಕರ ,ಸಿಬ್ಬಂದಿಗಳ ವೇತನ ಸೇರಿ ತಿಂಗಳಿಗೆ 90,000 ರೂಪಾಯಿಗಳವರೆಗೆ ಖರ್ಚು ಇದೆ..!

ಇಂತಹ ಮಹತ್ತರವಾದ ಜವಾಬ್ದಾರಿಯನ್ನು ಮುಂದುವರೆಸುತ್ತಿರುವ ವ್ಯಕ್ತಿ ದೇಶದಾದ್ಯಂತ ಲಾಕ್ಡೌನ್ ಇರುವ ಸಮಯದಲ್ಲಿ, ತಮ್ಮ ಶಾಲಾ ಆಡಳಿತ ಮಂಡಳಿಯ ಹಾಗೂ ಶಾಲಾ ಹಿತೈಷಿಗಳ ಸಹಕಾರದಿಂದ ನಿರಂತರ 40 ದಿನಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೊರೊನ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೀಡಾದ ಸುಮಾರು 850ಕ್ಕೂ ಹೆಚ್ಚು ಮನೆಗಳಿಗೆ ತನ್ನದೇ ಸ್ವಂತ ವಾಹನದಲ್ಲಿ ತೆರಳಿ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ..!

ಇವರು ಆಹಾರ ಸಾಮಾಗ್ರಿ ನೀಡಿರುವ ಪ್ರತಿಯೊಂದು ಮನೆಯೂ ಕೂಡ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಅರ್ಹವಾದ ಮನೆಗಳಾಗಿದೆ ಎಂಬುದು ಗಮನಾರ್ಹ ವಿಷಯವಾಗಿದೆ, ಯಾಕೆಂದರೆ ಇವರಿಗೆ ಸಹಾಯ ಮಾಡುವಂತೆ ಕೇಳಿ ಕರೆ ಮಾಡಿದ ಕೆಲವು ಮಹನೀಯರ ಮನೆಗಳಿಗೆ ಹೋಗಿ ಅವರ ಪ್ರಸ್ತುತ ಪರಿಸ್ಥಿತಿ ಯನ್ನು ಕಣ್ಣಾರೆ ಕಂಡು ವಾಪಸ್ ಆದದ್ದು ಇದೆ..!

ಲಾಕ್ಡೌನ್ ನಿಂದಾಗಿ ದಿನಸಿ ಅವಶ್ಯಕತೆ ಇದ್ದವರಿಗೆ ದಿನಸಿ ಸಾಮಾಗ್ರಿಗಳನ್ನು ನೀಡಿದ ಇವರು ಈ ಸಮಯದಲ್ಲಿ ಸುಮಾರು ಬೇರೆ ಬೇರೆ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಗಳನ್ನು ಮನೆಗೆ ತೆರಳಿ ಉಚಿತವಾಗಿ ನೀಡುವುದರೊಂದಿಗೆ ಕೆಲವು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಮಾಡಿರುತ್ತಾರೆ..

ಇವರು ತಿಳಿಸಿರುವ ಪ್ರಕಾರ,,
ಇವರು ಭೇಟಿ ನೀಡಿ ದಿನಸಿ ಸಾಮಾಗ್ರಿಗಳನ್ನು ವಿತರಿಸಿರುವ ಸುಮಾರು 30ಕ್ಕಿಂತಲೂ ಹೆಚ್ಚು ಮನೆಗಳಲ್ಲಿ ಶೌಚಾಲಯವೇ ಇಲ್ಲ..!!ಅಂಗವೈಕಲ್ಯತೆಯಿಂದ ಬಳಲುತ್ತಿರುವವರು ಇರುವ ಸುಮಾರು 4೦ಕ್ಕಿಂತಲೂ ಹೆಚ್ಚು ಮನೆಗಳಿಗೆ ದಿನಸಿ ನೀಡಲಾಗಿದೆ..ಬೇರೆ ಬೇರೆ ಖಾಯಿಲೆ ಯಿಂದ ಬಳಲುತ್ತಿರುವ ರೋಗಿಗಳು ಇರುವ ಸುಮಾರು 35ಕ್ಕಿಂತಲೂ ಹೆಚ್ಚು ಮನೆಗಳಿಗೆ ದಿನಸಿ ಸಾಮಾಗ್ರಿಯೊಂದಿಗೆ ಅಗತ್ಯವಿರುವರಿಗೆ ಔಷಧವನ್ನೂ ನೀಡಿರುತ್ತಾರೆ..

ಲಾಕ್ಡೌನ್ ಸಮಯದಲ್ಲಿ ಮೂಡಬಿದಿರೆ ವ್ಯಾಪ್ತಿಯಲ್ಲಿ ಜೋರಾದ ಗಾಳಿಗೆ ಹಾನಿಗೀಡಾದ ಮನೆಯನ್ನು ದುರಸ್ತಿ ಮಾಡಿ ಕೊಟ್ಟಿರುತ್ತಾರೆ..ತಾನು ನಡೆಸುತ್ತಿರುವ ಶಾಲೆಯ ವಾರ್ಷಿಕ ರಜೆಯ ಸಮಯದಲ್ಲಿ ತನ್ನ ಮನೆಯವರ ಜೊತೆ ಕೂಡಿ ಸಂತೋಷದಿಂದ ಸಮಯ ಕಳೆಯಬೇಕಿದ್ದ ಪ್ರಕಾಶ್ ಸರ್  ಇಂದು ಸಾವಿರಕ್ಕೂ ಹೆಚ್ಚು ಮನೆಯವರಿಗೆ ಬೇರೆ ಬೇರೆ ರೀತಿಯಲ್ಲಿ ಸಹಾಯಹಸ್ತ ನೀಡಿರುತ್ತಾರೆ..

ರಾಜಕೀಯ ವ್ಯಕ್ತಿಗಳು ಸಾವಿರ ಸಾವಿರ ಮನೆಗಳಿಗೆ ಆಹಾರ ಸಾಮಗ್ರಿ ವಿತರಿಸಿದರೆ ಅದನ್ನು ಕಣ್ಣು ಮುಚ್ಚಿ ಪ್ರಚಾರ ಪಡಿಸುವ ನಾವುಗಳು, ನಿಜವಾಗಿಯೂ ಇಂತವರ ಕಾರ್ಯವನ್ನು ಪ್ರಚಾರ ಮಾಡಬೇಕು..ರಾಜಕೀಯ ವ್ಯಕ್ತಿಗಳು ದಿನಸಿ ಸಾಮಗ್ರಿ ನೀಡಿದ್ರೆ ಅದರಲ್ಲಿ ಅವರಿಗೆ ರಾಜಕೀಯ ಲಾಭ ಖಂಡಿತ ಇರುತ್ತೆ,

ಇಂತಹ ಸಮಾಜ ಸೇವಕರು ದಿನಸಿ ನೀಡಿದರೆ ಮನಸ್ಸಿಗೆ ಸಂತೋಷ ಒಂದು ಬಿಟ್ಟು ಬೇರೇನು ಲಾಭ ಇರಲ್ಲ..ಸಾಧ್ಯವಾದವರು ಇವರ ಶಾಲೆಯ ಟ್ರಸ್ಟ್ ನ ಖಾತೆಗೆ ಧನಸಹಾಯ ನೀಡುವ ಮೂಲಕ ಹಾಗೂ ಈ ಸಂದೇಶವನ್ನು ಶೇರ್ ಮಾಡುವ ಮೂಲಕ ಪ್ರಕಾಶ್ ಅಣ್ಣನ ಸೇವಾ ಕಾರ್ಯಕ್ಕೆ ಶುಭ ಹಾರೈಸೋಣ..

A/C Name - REJEVENATE CHILD FOUNDATION(R).
A/C number - 36556587667
IFSC Code - SBIN0005623
Bank - State Bank of India
Branch - Moodbidre
Mobile - 9900710209 /8660636023

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget