ಕರಾಟೆ ಪಟುವಾಗಿ, ಕಿರುಚಿತ್ರ ನಿರ್ದೇಶಕನಾಗಿ, Rapper ಆಗಿ ಗುರುತಿಸಿಕೊಂಡ ಗ್ರಾಮೀಣ ಪ್ರತಿಭೆ- ರಾಕೇಶ್ ಪೂಜಾರಿ ಬೋಳ

ಕರಾಟೆ ಪಟುವಾಗಿ, ಕಿರುಚಿತ್ರ ನಿರ್ದೇಶಕನಾಗಿ, Rapper ಆಗಿ ಗುರುತಿಸಿಕೊಂಡ ಗ್ರಾಮೀಣ ಪ್ರತಿಭೆ - ರಾಕೇಶ್ ಪೂಜಾರಿ ಬೋಳ
                                                                                                     ✍️ ದೀಪಕ್ ಕೆ. ಬೀರ 
       ಪಡುಬಿದ್ರಿ 
ಸಾಧಕನಾಗುವ ಹಂಬಲ ಮುಖ್ಯವಲ್ಲ ಬದಲಾಗಿ ಸಾಧನೆಯ ಹಾದಿಯಲಿ ವೇದನೆ ಪಡದೆ ಸವಾಲುಗಳನ್ನು ಸ್ವೀಕರಿಸುವ ತುಡಿತವಿದ್ದಲ್ಲಿ ಮಾತ್ರ ಸಾಧಕನಾಗಬಹುದು. ಅಂತಹ ಸಾಧಕನೇ ಕರಾಟೆ ಪಟುವಾಗಿ, ಟೆಲಿಚಿತ್ರದ ನಿರ್ದೇಶಕನಾಗಿ, rapper ಆಗಿ ಮಿಂಚುತ್ತಿರುವ ಪ್ರತಿಭೆ  ರಾಕೇಶ್ ಪೂಜಾರಿ ಬೋಳ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗರಡಿ ಮನೆಯ ಹರೀಶ್ ಪೂಜಾರಿ ಮತ್ತು ಪ್ರಮೀಳಾ ದಂಪತಿಯ ಸುಪುತ್ರನಾಗಿರುತ್ತಾರೆ. ಇವರು ಕರಾಟೆ ಕಲೆಯನ್ನು ಈಗಾಗಲೇ ಹಲವಾರು ಕರಾಟೆ ಪಟುಗಳನ್ನು ಸಜ್ಜುಗೊಳಿಸಿದ ಕರಾಟೆ ಶಿಕ್ಷಕ ಸತೀಶ್ ಬೆಳ್ಮಣ್ ರಿಂದ ಕರಗತಮಾಡಿಕೊಂಡಿರುತ್ತಾರೆ. ಇವರ ಪದಕಗಳ ಪಟ್ಟಿ ಇಂತಿದೆ,

ಹೈದರಾಬಾದ್ ನಲ್ಲಿ ಜರಗಿದ ಕೆಬಿಐ ಇಂಟರ್ ನ್ಯಾಷನಲ್ ಚಾಂಪಿಯನ್ ಶಿಪ್ 2017-18 ರಲ್ಲಿ 1 ಚಿನ್ನ , 1 ಬೆಳ್ಳಿ. ಉಡುಪಿಯಲ್ಲಿ ಜರಗಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 2 ಚಿನ್ನದ ಪದಕ. ಕಾರವಾರದಲ್ಲಿ ಜರಗಿದ ಸ್ಪರ್ಧೆಯಲ್ಲಿ 1 ಚಿನ್ನ ಮತ್ತು 1 ಬೆಳ್ಳಿ ಪದಕ. ಹುಬ್ಬಳ್ಳಿಯಲ್ಲಿ ಜರಗಿದ  ಸ್ಪರ್ಧೆಯಲ್ಲಿ 1 ಚಿನ್ನ ಮತ್ತು 1 ತಾಮ್ರ ಪದಕ. ಕಾರವಾರದ ಸ್ಪರ್ಧೆಯಲ್ಲಿ 2 ಬೆಳ್ಳಿ. ಉಡುಪಿ ಸ್ಪರ್ಧೆಯಲ್ಲಿ ಸತತ 4 ಬಾರಿ 3 ಚಿನ್ನ , 2 ಬೆಳ್ಳಿ , 2 ತಾಮ್ರ ಪದಕ. 2017 ನೇ ಸಾಲಿನ ಸ್ಪರ್ಧೆಯಲ್ಲಿ 2 ಚಿನ್ನ. 2016 ಮೂಡಬಿದ್ರೆಯಲ್ಲಿ 1 ಚಿನ್ನ ಮತ್ತು 1 ಬೆಳ್ಳಿ ಪದಕ.  2016 ಶಿವಮೊಗ್ಗದಲ್ಲಿ ಚಿನ್ನದ ಪದಕ. 2015 ಹಾವೇರಿಯಲ್ಲಿ 2 ಚಿನ್ನ ಮತ್ತು ಗ್ರಾಂಡ್ ಚಾಂಪಿಯನ್ ಶಿಪ್ ನ ಸಾಧನೆ.2014 ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 1 ಬೆಳ್ಳಿ. ಕನ್ಯಾಕುಮಾರಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 2 ಚಿನ್ನ ಮತ್ತು ಚಾಂಪಿಯನ್‌ಶಿಪ್ ಗೆದ್ದಿರುತ್ತಾರೆ. 2018ರಲ್ಲಿ ಶ್ರೀಲಂಕಾದಲ್ಲಿ ಜರಗಿದ  ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ ನಲ್ಲಿ 2 ಚಿನ್ನದ ಪದಕ ಗೆದ್ದಿರುತ್ತಾರೆ.  ರಾಷ್ಟ್ರಮಟ್ಟದಲ್ಲಿ ರಾಕೇಶ್ ರವರ ಒಟ್ಟು ಪದಕಗಳ ಸಂಖ್ಯೆ 42. ಅದರಲ್ಲಿ 20 ಚಿನ್ನ , 19 ಬೆಳ್ಳಿ , 3 ತಾಮ್ರ ಪಡೆದಿರುತ್ತಾರೆ.

ಹಲವು ಬಾರಿ ಹಣಕಾಸಿನ ಕೊರತೆಯಿಂದ ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದ ಅವಕಾಶವನ್ನು ಕಳೆದುಕೊಂಡ ಬೇಸರವು ಅವರಲ್ಲಿದೆ. ಇನ್ನು ಇವರ ಇತರ ನೆಚ್ಚಿನ ಕ್ಷೇತ್ರಗಳತ್ತ ಗಮನ ವಹಿಸಿದರೆ ಕಿರುಚಿತ್ರಗಳ ನಿರ್ದೇಶನದ ಪ್ರತಿಭೆಯೂ ಇವರಲ್ಲಿದೆ. ಈಗಾಗಲೇ ಪ್ರಶಂಸೆ ಪಡೆದ ತಂಬಿಲ ಕಿರುಚಿತ್ರವು ಅಬ್ಬನಡ್ಕ ಫ್ರೆಂಡ್ಸ್ ಸಂಸ್ಥೆಯಿಂದ Best Short Movie ಪ್ರಶಸ್ತಿಗೆ ಪಾತ್ರವಾಗಿದೆ. ಇದಲ್ಲದೆ ಅಂಗಾರ, ಸುದೆ ಬರಿ, ಪಿಡ್ಕ್ ಪಾರ್ಟಿ, ಬಾವಲಿ, ದ ಚಿಂಗ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕಲುವೆರ್, ಮಾಯೆ, ಇಂಚ ದಾಯೆ ಮಲ್ತ ಮತ್ತು ಬೋಳ ಗರಡಿಯ ಬಗೆಗೆ ಆಲ್ಬಂ ಹಾಡನ್ನೂ ಮಾಡಿರುತ್ತಾರೆ. ಇತ್ತೀಚಿಗೆ ಓರ್ವ rapper ಆಗಿ ಮಿಂಚಿ  ಪನ್ಯ ಕೇನೊರ್ಚಿ, ಎಡ್ಡೆ, ಗರಡಿ ಫ್ರೆಂಡ್ಸ್, ತುಳುವ rapp ಗಾಡ್, ಲೈಫ್, ಪಿಡ್ಕ್ ಮ್ಯಾನ್, ಗೊ ಕೊರೊನಗಳ ಮೂಲಕ ಜನಪ್ರಿಯರಾಗಿದ್ದಾರೆ. ಕಾರ್ಕಳ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಇತರ ಸಂಘ-ಸಂಸ್ಥೆಗಳಿಂದ  ಸನ್ಮಾನಿತರಾಗಿದ್ದಾರೆ.

ಮೆಕ್ಯಾನಿಕಲ್ ಡಿಪ್ಲೊಮಾ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಮುಂದೆಯೂ ಮತ್ತಷ್ಟು ಮಹತ್ತರ ಸಾಧನೆಗಳನ್ನು ಮಾಡಲಿ ಎಂದು ನಾವೆಲ್ಲರೂ ಹಾರೈಸುವ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget