"ಕೇಂದ್ರ ಸರಕಾರ ಘೋಷಣೆ ಮಾಡಿರುವ ೨೦ಲಕ್ಷ ಕೋಟಿ ರೂಪಾಯಿಯ ತುರ್ತು ನಿಧಿ ಯೋಜನೆ ಸಮಾಜವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲಿದೆ"
ಬಜಗೋಳಿ : ಕೇಂದ್ರ ಸರಕಾರ ಘೋಷಣೆ ಮಾಡಿರುವ ೨೦ಲಕ್ಷ ಕೋಟಿ ರೂಪಾಯಿಯ ತುರ್ತು ನಿಧಿ ಯೋಜನೆ ಸಮಾಜವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲಿದೆ ಎಂದು ಕರಾವಳಿ ಕಲ್ಲು ಗಣಿ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವದ ಎಲ್ಲೆಡೆ ಕೊರೋನಾ ಮಹಾಮಾರಿ ವ್ಯಾಪಿಸಿ ಜಗತ್ತನ್ನೇ ಭೀತಿಯ ಕೂಪಕ್ಕೆ ತಳ್ಳಿದೆ. ಎಲ್ಲಾ ದೇಶಗಳೂ ಕೂಡಾ ಇಂದು ಆರ್ಥಿಕ ಸಂಕಷ್ಠದ ಪರಿಸ್ಥಿತಿ ಎದುರಿಸುತ್ತಿದೆ. ಭಾರತದಲ್ಲೂ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಉದ್ಯಮ ರಂಗ, ಸಣ್ಣ ಕೈಗಾರಿಕೆ, ಪತ್ರಿಕೋದ್ಯಮ, ಸಣ್ಣ ವ್ಯಾಪಾರಸ್ಥರು
ಎಲ್ಲರೂ ಸಂಕಷ್ಠಕ್ಕೊಳಗಾಗಿದ್ದಾರೆ.
ಇಂತಹ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಮಸ್ತ ಭಾರತೀಯರಲ್ಲಿ ಆಶಾಕಿರಣವನ್ನು ಮೂಡಿಸುವ ನಿಟ್ಟಿನಲ್ಲಿ ಮಹತ್ತರವಾದ ಹೆಜ್ಜೆಯನ್ನು ಇರಿಸಿರುವುದು ಶ್ಲಾಘನೀಯ ಎಂದಿದ್ದಾರೆ.
ಸಮಸ್ತ ಉದ್ಯಮರಂಗವನ್ನು ಮೇಲೆತ್ತಬಲ್ಲ ಐತಿಹಾಸಿಕ ಘೋಷಣೆಯನ್ನು ಪ್ರಧಾನ ಮಂತ್ರಿಯವರು
ಮಾಡಿದ್ದಾರೆ. ದೇಶದ ಎಲ್ಲಾ ಪ್ರಜೆಗಳನ್ನು ಸಮಾನ ರೀತಿಯಲ್ಲಿ ಕಾಣುವ ಈ ೨೦ ಲಕ್ಷ ಕೋಟಿಯ ಯೋಜನೆ ಸಮಸ್ತ ಭಾರತೀಯರಲ್ಲಿ ಹೊಸ ಹುರುಪನ್ನು ಮೂಡಿಸಿ ರುವುದಲ್ಲದೆ ಔದ್ಯೋಗಿಕ ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಕರಾವಳಿ ಕಲ್ಲು ಗಣಿ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a comment